ಅಧ್ಯಾಯ 1 1 ಯೆಹೂದದ ಅರಸನಾದ ಯೋಥಾಮ ಆಹಾಜ, ಹಿಜ್ಕೀಯ, ದಿವಸಗಳಲ್ಲಿ ಸಮಾರ್ಯದ ಯೆರೂಸಲೇಮಿನ ವಿಷಯವಾಗಿ ಮೋರೇಷೆತಿನವನಾದ ವಿಾಕನಿಗೆ ಉಂಟಾದ ಕರ್ತನ ವಾಕ್ಯವು. 2 ಎಲ್ಲಾ ಜನಗಳೇ, ಕೇಳಿರಿ, ಭೂಮಿಯೇ, ಅದರ ಪರಿಪೂರ್ಣತೆಯೇ, ಕಿವಿಗೊಡಿರಿ; ಕರ್ತನಾದ ದೇವರು ತನ್ನ ಪರಿಶುದ್ಧ ಮಂದಿರದೊಳಗಿಂದ ಕರ್ತನು ನಿಮಗೆ ವಿರೋಧವಾಗಿ ಸಾಕ್ಷಿಯಾಗಿರಲಿ. 3 ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು. 4 ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು. 5 ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ? 6 ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು. 7 ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು. 8 ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು. 9 ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ. 10 ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಎಫ್ರಾತದ ಮನೆಯ ಧೂಳಿನಲ್ಲಿ ಹೊರಳಾಡು. 11 ಶಾಫೀರಿನ ನಿವಾಸಿಯೇ, ನಾಚಿಕೆ ಮುಚ್ಚದೆ ಹಾದುಹೋಗು; ಬೇತೇಚೆಲಿನ ಗೋಳಾಟದಲ್ಲಿ ಚಾನಾನಿನ ನಿವಾಸಿ ಮುಂದೆ ಬರಲಿಲ್ಲ; ಅವನು ನಿಮ್ಮಿಂದ ತನ್ನ ಸ್ಥಾನವನ್ನು ತಕ್ಕೊಳ್ಳುವನು. 12 ಮಾರೋತಿನ ನಿವಾಸಿ ಒಳ್ಳೇದಕ್ಕೆ ಜಾಗ್ರತೆಯಾಗಿ ಕಾದುಕೊಳ್ಳುತ್ತಾನೆ; ಆದರೆ ಕೇಡು ಕರ್ತನಿಂದ ಯೆರೂಸಲೇಮಿನ ಬಾಗಲಿಗೆ ಇಳಿದಿದೆ. 13 ಲಾಕೀಷಿನ ನಿವಾಸಿಯೇ, ವೇಗವುಳ್ಳ ಕುದುರೆಗೆ ರಥವನ್ನು ಕಟ್ಟು, ಇದೇ ಚೀಯೋನಿನ ಮಗಳ ಪಾಪದ ಆರಂಭವು; ಇಸ್ರಾಯೇಲಿನ ಅಪರಾಧಗಳು ನಿನ್ನಲ್ಲಿ ಕಂಡುಬಂದವು. 14 ಹೀಗಿರುವದರಿಂದ ಮೋರೆಷತ್ ಗತ್ ಊರಿಗೆ ದಾನಗಳನ್ನು ಕೊಡುವಿ, ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಸುಳ್ಳಾಗಿರುವವು. 15 ಮಾರೇ ಷದ ನಿವಾಸಿಯೇ, ಇನ್ನೂ ಬಾಧ್ಯನನ್ನು ನಿನ್ನ ಬಳಿಗೆ ತರುವೆನು; ಅವನು ಇಸ್ರಾಯೇಲಿನ ಮಹಿಮೆಯಾದ ಅದುಲ್ಲಾಮಿನ ಮಟ್ಟಿಗೂ ಬರುವನು. 16 ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ. ಅಧ್ಯಾಯ 2 1 ಅಪರಾಧವನ್ನು ಯೋಚಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡಿಸುವವರಿಗೆ ಅಯ್ಯೋ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ; ಅದು ಅವರ ಕೈವಶದಲ್ಲಿದೆ. 2 ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತಕ್ಕೊಳ್ಳುತ್ತಾರೆ; ಮನೆಗಳನ್ನು ಸಹ ತೆಗೆದುಕೊಳ್ಳುತ್ತಾರೆ; ಮನುಷ್ಯನಿಗೂ ಅವನ ಮನೆಗೂ ಹೌದು, ಮನುಷ್ಯನಿಗೂ ಅವನ ಸ್ವಾಸ್ತ್ಯಕ್ಕೂ ಬಲಾತ್ಕಾರ ಮಾಡುತ್ತಾರೆ. 3 ಆದದರಿಂದ ಕರ್ತನು ಹೇಳುವದೇನಂದರೆ--ಇಗೋ, ನಾನು ಈ ಕುಟುಂಬಕ್ಕೆ ವಿರೋಧವಾಗಿ ಕೆಟ್ಟದ್ದನ್ನು ಯೋಚಿಸು ತ್ತೇನೆ; ಆದದರಿಂದ ನೀವು ನಿಮ್ಮ ಕುತ್ತಿಗೆಗಳನ್ನು ಹಿಂತೆ ಗೆಯದೆ ಅಹಂಕಾರವಾಗಿ ನಡೆಯದೆ ಇರುವಿರಿ; ಇದು ಕೆಟ್ಟಕಾಲವೇ. 4 ಆ ದಿನದಲ್ಲಿ ನಿಮ್ಮ ವಿಷಯವಾಗಿ ಸಾಮ್ಯವನ್ನೆತ್ತಿ ದುಃಖವುಳ್ಳ ಗೋಳಾಟವನ್ನು ಮಾಡಿ ಹೇಳುವದೇನಂದರೆ--ನಾವು ಪೂರ್ಣವಾಗಿ ಹಾಳಾ ದೆವು; ಅವನು ನನ್ನ ಜನರ ಪಾಲನ್ನು ಬದಲಾಯಿಸಿ ದ್ದಾನೆ; ಅವನು ಅದನ್ನು ನನ್ನಿಂದ ಹಿಂತೆಗೆದದ್ದು ಹೇಗೆ? ಹಿಂತಿರುಗಿ ಅವನು ನಮ್ಮ ಹೊಲಗಳನ್ನು ಹಂಚಿಕೊಟ್ಟಿ ದ್ದಾನೆ. 5 ಆದದರಿಂದ ಕರ್ತನ ಸಭೆಯಲ್ಲಿ ಪಾಲಿಗಾಗಿ ನೂಲು ಹಾಕುವವನು ನಿನಗೆ ಒಬ್ಬನೂ ಇರುವದಿಲ್ಲ. 6 ಪ್ರವಾದಿಸಬೇಡಿರೆಂದು ಪ್ರವಾದಿಸುವವರಿಗೆ ಅನ್ನು ತ್ತಾರೆ; ಅವರಿಗೆ ಆತನು ಪ್ರವಾದಿಸನು, ಆದರೆ ಅವರು ನಾಚಿಕೆಪಡುವದಿಲ್ಲ. 7 ಯಾಕೋಬಿನ ಮನೆತನದವ ರೆಂದು ಹೆಸರುಗೊಂಡವರೇ, ಕರ್ತನ ಆತ್ಮವು ಕಡಿಮೆ ಯಾಯಿತೋ? ಇವು ಆತನ ಕ್ರಿಯೆಗಳೋ? ಯಥಾ ರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೇದನ್ನು ಮಾಡುವದಿಲ್ಲವೋ? 8 ಇತ್ತೀಚೆಗೆ ನನ್ನ ಜನರು ವೈರಿಯ ಹಾಗೆ ಎದ್ದಿದ್ದಾರೆ; ಯುದ್ಧದಿಂದ ತಿರುಗಿಕೊಂಡು ಭದ್ರವಾಗಿ ಹಾದುಹೋಗುವವರ ವಸ್ತ್ರದ ಸಂಗಡ ನಿಲುವಂಗಿಯನ್ನು ನೀವು ಕಿತ್ತುಕೊ ಳ್ಳುತ್ತೀರಿ. 9 ನನ್ನ ಜನರ ಸ್ತ್ರೀಯರನ್ನು ಅವರ ರಮ್ಯ ವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ; ಅವರ ಮಕ್ಕಳಿಂದ ನನ್ನ ಮಹಿಮೆಯನ್ನು ಎಂದೆಂದಿಗೂ ತೆಗೆದಿ ದ್ದೀರಿ. 10 ನೀವು ಎದ್ದು ಹೋಗಿರಿ; ಇದು ನಿಮ್ಮ ವಿಶ್ರಾಂತಿ ಅಲ್ಲ; ಇದು ಅಶುದ್ಧವಾಗಿದ್ದ ಕಾರಣ, ನಿಮ್ಮನ್ನು ಕಠಿಣವಾದ ನಾಶನದಿಂದ ನಾಶಮಾಡು ವದು. 11 ಒಬ್ಬನು ಆತ್ಮದಲ್ಲಿಯೂ ವಂಚನೆಯಲ್ಲಿಯೂ ನಡೆದು ಸುಳ್ಳು ಹೇಳಿ--ನಿನಗೆ ದ್ರಾಕ್ಷಾರಸವನ್ನೂ ಮತ್ತಾಗುವದನ್ನೂ ಕುರಿತು ಪ್ರವಾದಿಸುವೆನೆಂದು ಹೇಳಿ ದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು. 12 ಯಾಕೋಬೇ ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು; ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು, ಬೊಚ್ರದ ಕುರಿಗ ಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆ ಯಂತೆಯೂ ಅವರನ್ನು ಒಟ್ಟಾಗಿ ಕೂಡಿಡುವೆನು; ಬಹುಮಂದಿಯಾಗಿರುವ ಕಾರಣ ಅವರು ಮಹಾ ಶಬ್ದ ಮಾಡುವರು. 13 ಒಡೆಯುವವನು ಅವರ ಮುಂದೆ ಬಂದಿದ್ದಾನೆ; ಅವರು ಬಾಗಲನ್ನು ಒಡೆದು ಅದರಿಂದ ಹಾದುಹೋಗಿದ್ದಾರೆ; ಅವರ ಅರಸನು ಅವರ ಮುಂದೆ ಹಾದುಹೋಗುತ್ತಾನೆ; ಕರ್ತನು ಅವರಿಗೆ ಮುಂದಾಗಿರುವನು. ಅಧ್ಯಾಯ 3 1 ಆಗ ನಾನು ಹೇಳಿದ್ದೇನಂದರೆ--ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇ ಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ; ನ್ಯಾಯ ವನ್ನು ತಿಳಿಯುವದು ನಿಮ್ಮದಲ್ಲವೋ? 2 ಒಳ್ಳೇದನ್ನು ಹಗೆಮಾಡಿ ಕೆಟ್ಟದ್ದನ್ನು ಪ್ರೀತಿಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ಅವರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತುಕೊಳ್ಳು ವವರೇ, 3 ನನ್ನ ಜನರ ಮಾಂಸವನ್ನು ತಿಂದು ಅವರ ಚರ್ಮವನ್ನು ಸುಲಿದು ಅವರ ಎಲುಬುಗಳನ್ನು ಮುರಿದು ಮಡಿಕೆಯಂತೆ ಅವರ ಮಾಂಸವನ್ನು ತುಂಡು ಮಾಡಿ ಕೊಪ್ಪರಿಗೆಯಲ್ಲಿ ಹಾಕುತ್ತೀರಿ. 4 ಆಗ ಅವರು ಕರ್ತನಿಗೆ ಮೊರೆಯಿಡುವರು; ಆದರೆ ಆತನು ಅವರಿಗೆ ಉತ್ತರ ಕೊಡುವದಿಲ್ಲ. ಅವರು ಕೆಟ್ಟ ಕ್ರಿಯೆಗಳನ್ನು ಮಾಡಿದ ಪ್ರಕಾರವೇ, ಆ ಕಾಲದಲ್ಲಿ ಅವರಿಗೆ ತನ್ನ ಮುಖವನ್ನು ಮರೆಮಾಡುವನು. 5 ತನ್ನ ಜನರು ತಪ್ಪುವಂತೆ ಮಾಡುವ ಪ್ರವಾದಿಗಳ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಅವರಿಗೆ ತಿನ್ನುವದಕ್ಕೆ ಕೊಡುವಂತವರಿಗೆ--ನಿಮಗೆ ಸಮಾಧಾನವಾಗಲಿ ಎಂದು ಹೇಳುತ್ತಾರೆ; ಆದರೆ ತಮ್ಮ ಬಾಯಿಗೆ ಏನೂ ಕೊಡದವನ ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು. 6 ದರ್ಶನವಿಲ್ಲದ ನಿಮಗೆ ರಾತ್ರಿ ಯಾಗುವದು; ಶಕುನವಿಲ್ಲದೆ ನಿಮಗೆ ಕತ್ತಲಾಗುವದು; ಹೌದು, ಪ್ರವಾದಿಗಳ ಮೇಲೆ ಸೂರ್ಯ ಮುಣುಗು ವದು, ಅವರ ಮೇಲೆ ಹಗಲು ಕತ್ತಲಾಗುವದು. 7 ಆಗ ದರ್ಶಿಗಳು ನಾಚಿಕೆಪಡುವರು, ಶಕುನಗಾರರು ವಿಸ್ಮಯಗೊಳ್ಳುವರು; ಹೌದು, ದೇವರಿಂದ ಉತ್ತರ ವಿಲ್ಲದ ಕಾರಣ ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿ ಕೊಳ್ಳುವರು. 8 ಆದರೆ ನಿಶ್ಚಯವಾಗಿ ನಾನು ಯಾಕೋ ಬ್ಯರಿಗೆ ಅವನ ಅಪರಾಧವನ್ನೂ ಇಸ್ರಾಯೇಲಿಗೆ ಅವನ ಪಾಪವನ್ನೂ ತಿಳಿಸುವದಕ್ಕೆ ದೇವರ ಆತ್ಮನ ಮುಖಾಂತರ ಶಕ್ತಿಯಿಂದಲೂ ನ್ಯಾಯದಿಂದಲೂ ತ್ರಾಣದಿಂದಲೂ ತುಂಬಿದ್ದೇನೆ. 9 ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾ ಧಿಪತಿಗಳೇ, ನ್ಯಾಯವನ್ನು ಅಸಹ್ಯಿಸಿ ಎಲ್ಲಾ ಯಥಾರ್ಥ ತ್ವವನ್ನು ಡೊಂಕು ಮಾಡುವವರೇ, 10 ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅಕ್ರಮದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ. 11 ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ. 12 ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು. ಅಧ್ಯಾಯ 4 1 1 ಅಂತ್ಯದಿವಸಗಳಲ್ಲಿ ಆಗುವದೇನಂದರೆ, ಕರ್ತನ ಆಲಯದ ಪರ್ವತವು ಬೆಟ್ಟಗಳ ತುದಿಯಲ್ಲಿ ನೆಲೆಯಾಗಿ ಗುಡ್ಡಗಳಿಗಿಂತ ಎತ್ತರ ವಾಗಿರುವದು; ಜನಗಳು ಅದರ ಬಳಿಗೆ ಪ್ರವಾಹದಂತೆ ಬರುವರು. 2 ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು. 3 ಆಗ ಆತನು ಅನೇಕ ಜನಗಳ ಮಧ್ಯದಲ್ಲಿ ನ್ಯಾಯತೀರಿಸಿ ದೂರದಲ್ಲಿರುವ ಬಲವಾದ ಜನಾಂಗ ಗಳಿಗೆ ತೀರ್ಪುಕೊಡುವನು; ಅವರು ತಮ್ಮ ಕತ್ತಿಗಳನ್ನು ನೇಗಲಿನ ಗುಳಗಳಾಗಿಯೂ ತಮ್ಮ ಈಟಿಗಳನ್ನು ಕುಡು ಗೋಲುಗಳಾಗಿಯೂ ಮಾಡುವರು; ಜನಾಂಗವು ಜನಾಂಗದ ಮೇಲೆ ಕತ್ತಿಯನ್ನು ಎತ್ತದು; ಯುದ್ಧಾಭ್ಯಾಸ ಇನ್ನು ಮೇಲೆ ಇರದು. 4 ಆದರೆ ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷೇ ಬಳ್ಳಿಯ ಕೆಳಗೂ ತನ್ನ ತನ್ನ ಅಂಜೂರದ ಗಿಡದ ಕೆಳಗೂ ಕೂತುಕೊಳ್ಳುವನು. ಭಯಪಡಿಸುವವನು ಯಾರೂ ಇರುವದಿಲ್ಲ. ಯಾಕಂದರೆ ಸೈನ್ಯಗಳ ಕರ್ತನ ಬಾಯಿ ಅದನ್ನು ನುಡಿದಿದೆ. 5 ಎಲ್ಲಾ ಜನಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ದೇವರ ಹೆಸರಿನಲ್ಲಿ ನಡೆ ಯುವನು; ಆದರೆ ನಾವು ನಮ್ಮ ದೇವರಾದ ಕರ್ತನ ಹೆಸರಿನಲ್ಲಿ ಎಂದೆಂದಿಗೂ ನಡೆಯುವೆವು. 6 ಕರ್ತನು ಹೀಗೆ ಅನ್ನುತ್ತಾನೆ--ಆ ದಿನದಲ್ಲಿ ಕುಂಟಾದದ್ದನ್ನು ಕೂಡಿಸಿ ತಳ್ಳಿಬಿಟ್ಟದ್ದನ್ನೂ ನಾನು ಕಷ್ಟಪಡಿಸಿದವರನ್ನೂ ಒಟ್ಟುಗೂಡಿಸುವೆನು. 7 ಕುಂಟಾದದ್ದನ್ನು ಉಳಿದದ್ದ ನ್ನಾಗಿಯೂ ತಳ್ಳಿಬಿಟ್ಟಿದ್ದನ್ನು ಬಲವಾದ ಜನಾಂಗವಾ ಗಿಯೂ ಮಾಡುವೆನು; ಕರ್ತನು ಇಂದಿನಿಂದ ಸದಾ ಕಾಲವೂ ಚೀಯೋನ್ ಪರ್ವತದಲ್ಲಿ ಅವರ ಮೇಲೆ ಆಳುವನು, 8 ಇದಲ್ಲದೆ ನೀನು ಮಂದೆಯ ಬುರುಜೇ ಚೀಯೋನಿನ ಕುಮಾರ್ತೆಯ ದುರ್ಗವೇ, ನಿನಗೆ ಬರು ವದು, ಹೌದು, ಮೊದಲನೇ ದೊರೆತನವೂ ಯೆರೂ ಸಲೇಮಿನ ಕುಮಾರ್ತೆಗೆ ರಾಜ್ಯವೂ ಬರುವದು. 9 ಈಗ ಯಾಕೆ ಗಟ್ಟಿಯಾಗಿ ಕೂಗುತ್ತೀ? ನಿನ್ನಲ್ಲಿ ಅರಸನಿಲ್ಲವೋ? ನಿನ್ನ ಆಲೋಚನಾಕರ್ತನು ನಾಶ ವಾದನೋ? ಹೆರುವವಳಂತೆ ನಿನಗೆ ವೇದನೆ ಬಂತು. 10 ಚೀಯೋನಿನ ಕುಮಾರ್ತೆಯೇ, ಹೆರುವವಳಂತೆ ವೇದನೆಪಡು. ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬೆಲಿಗೆ ಹೋಗುವಿ; ಅಲ್ಲಿ ನಿನಗೆ ಬಿಡುಗಡೆಯಾಗುವದು; ಅಲ್ಲಿ ಕರ್ತನು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿ ಸುವನು. 11 ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ; ಅವರು--ಅವಳು ಕೆಡಿಸಲ್ಪಡಲಿ, ಚೀಯೋನಿನ ಮೇಲೆ ನಮ್ಮ ಕಣ್ಣುಗಳು ದೃಷ್ಟಿಸಲಿ ಎಂದು ಹೇಳುತ್ತಾರೆ. 12 ಆದರೆ ಕರ್ತನ ಯೋಚನೆಗಳು ಅವರಿಗೆ ತಿಳಿಯವು, ಆತನ ಆಲೋಚನೆಯನ್ನು ಅವರು ಗ್ರಹಿಸಲಿಲ್ಲ; ಕಣದಲ್ಲಿ ಸಿವುಡುಗಳ ಹಾಗೆ ಅವರನ್ನು ಕೂಡಿಸುವನು. 13 ಚೀಯೋನಿನ ಕುಮಾರ್ತೆಯೇ; ಎದ್ದು ತುಳಿ. ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸೆಗಳನ್ನು ತಾಮ್ರವಾಗಿಯೂ ಮಾಡುವೆನು. ನೀನು ಅನೇಕ ಜನಗಳನ್ನು ಪುಡಿಪುಡಿಮಾಡುವಿ; ಮತ್ತು ಅವರ ಲಾಭವನ್ನು ಕರ್ತನಿಗೂ ಅವರ ಸಂಪತ್ತನ್ನು ಸಮಸ್ತ ಭೂಮಿಯ ಕರ್ತನಿಗೂ ಪ್ರತಿಷ್ಠೆ ಮಾಡುವೆನು. ಅಧ್ಯಾಯ 5 1 ಈಗ ಓ ಸೈನ್ಯಗಳ ಕುಮಾರ್ತೆಯೇ, ಗುಂಪುಗಳಾಗಿ ಕೂಡಿಕೊಳ್ಳಿರಿ; ಅವನು ನಮಗೆ ಮುತ್ತಿಗೆ ಹಾಕಿದ್ದಾನೆ. ಇಸ್ರಾಯೇಲಿನ ನ್ಯಾಯಾಧಿಪತಿಯನ್ನು ಕೋಲಿನಿಂದ ಕೆನ್ನೆಯ ಮೇಲೆ ಹೊಡೆಯುತ್ತಾರೆ. 2 ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಸಾವಿರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳ ಗಿಂದ ನನಗಾಗಿ ಹೊರಡುವನು; ಆತನ ಹೊರಡೋಣ ಗಳು ಪೂರ್ವದಿಂದಲೂ ಅನಾದಿ ದಿವಸಗಳಿಂದಲೂ ಅವೆ. 3 ಆದದರಿಂದ ಹೆರುವವಳು ಹೆರುವ ಕಾಲದ ವರೆಗೂ ಅವನು ಅವರನ್ನು ಒಪ್ಪಿಸಿಬಿಡುವನು; ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲಿನ ಮಕ್ಕಳ ಬಳಿಗೆ ಹಿಂದಿರುಗುವರು. 4 ಆತನು ಕರ್ತನ ಬಲದಲ್ಲಿಯೂ ತನ್ನ ದೇವರಾದ ಕರ್ತನ ಹೆಸರಿನಲ್ಲಿ ಘನತೆಯಲ್ಲಿಯೂ ನಿಂತುಕೊಂಡು ಮೇಯಿಸುವನು; ಮತ್ತು ಅವರು ನೆಲೆಯಾಗಿರುವರು, ಈಗ ಆತನು ಭೂಮಿಯ ಅಂತ್ಯಗಳ ಮಟ್ಟಿಗೂ ದೊಡ್ಡವನಾಗಿ ರುವನು. 5 ಇದಲ್ಲದೆ ಅಶ್ಶೂರ್ಯನು ನಮ್ಮ ದೇಶದಲ್ಲಿ ಬಂದಾಗ ಈತನೇ ಸಮಾಧಾನವಾಗಿರುವನು; ನಮ್ಮ ಅರಮನೆಗಳಲ್ಲಿ ಅವನು ತುಳಿಯುವಾಗ ನಾವು ಆತನಿಗೆ ವಿರೋಧವಾಗಿ ಏಳು ಕುರುಬರನ್ನೂ ಎಂಟು ಮುಖ್ಯ ಮನುಷ್ಯರನ್ನೂ ಎಬ್ಬಿಸುವೆವು. 6 ಅವರು ಅಶ್ಶೂರಿನ ದೇಶವನ್ನು ಕತ್ತಿಯಿಂದಲೂ ನಿಮ್ರೋದನ ದೇಶವನ್ನು ಅದರ ಪ್ರವೇಶಗಳಲ್ಲಿಯೂ ಹಾಳುಮಾಡುವರು; ಅಶ್ಶೂರ್ಯನು ನಮ್ಮ ದೇಶದಲ್ಲಿ ಬಂದು ನಮ್ಮ ಪ್ರಾಂತ್ಯಗಳಲ್ಲಿ ತುಳಿಯುವಾಗ ಆತನು ನಮ್ಮನ್ನು ತಪ್ಪಿಸುವನು. 7 ಇದಲ್ಲದೆ ಯಾಕೋಬಿನ ಶೇಷವು ಅನೇಕ ಜನಗಳ ಮಧ್ಯದಲ್ಲಿ ಕರ್ತನಿಂದ ಮಂಜಿನ ಹಾಗೆಯೂ ಹುಲ್ಲಿನ ಮೇಲೆ ಜಡಿಮಳೆಯ ಹಾಗೆಯೂ ಇರುವದು; ಅದು ಮನುಷ್ಯರಿಗೊಸ್ಕರ ತಡೆಮಾಡುವ ದಿಲ್ಲ; ಮನುಷ್ಯನ ಮಕ್ಕಳಿಗೋಸ್ಕರ ಕಾದುಕೊಳ್ಳುವದಿಲ್ಲ. 8 ಯಾಕೋಬಿನ ಶೇಷವು ಅನೇಕ ಜನಗಳ ಮಧ್ಯದಲ್ಲಿ, ಜನಾಂಗಗಳೊಳಗೆ ಅಡವಿಯ ಮೃಗಗಳಲ್ಲಿ ಸಿಂಹದಂತೆಯೂ ಕುರಿಮಂದೆಗಳಲ್ಲಿ ಪ್ರಾಯದ ಸಿಂಹದಂತೆಯೂ ಇರುವದು; ಅದು ಹಾದುಹೋದರೆ ಇಳಿದುಬಿಟ್ಟು ಹರಿದುಬಿಡುತ್ತದೆ, ಯಾರೂ ಬಿಡಿಸ ಲಾರರು. 9 ನಿನ್ನ ಕೈ ನಿನ್ನ ವೈರಿಗಳೆಲ್ಲರ ಮೇಲೆ ಉನ್ನತ ವಾಗಿರುವದು; ನಿನ್ನ ಶತ್ರುಗಳೆಲ್ಲರು ಕಡಿದು ಬಿಡಲ್ಪಡುವರು. 10 ಕರ್ತನು ಹೀಗೆ ಅನ್ನುತ್ತಾನೆ--ಆ ದಿನದಲ್ಲಿ ಆಗುವದೇನಂದರೆ--ನಾನು ನಿನ್ನ ಮಧ್ಯದೊಳಗಿಂದ ನಿನ್ನ ಕುದುರೆಗಳನ್ನು ಕಡಿದುಬಿಟ್ಟು ನಿನ್ನ ರಥಗಳನ್ನು ನಾಶಮಾಡುವೆನು. 11 ನಿನ್ನ ದೇಶದ ಪಟ್ಟಣಗಳನ್ನು ಕಡಿದುಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು. 12 ನಿನ್ನ ಕೈಯೊಳಗಿಂದ ಮಂತ್ರತಂತ್ರವನ್ನು ಕಡಿದು ಬಿಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರು ವದಿಲ್ಲ. 13 ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ನಿನ್ನ ಮಧ್ಯದೊಳಗಿಂದ ಕಡಿದು ಬಿಡುವೆನು; ನೀನು ಇನ್ನು ಸ್ವಂತ ಕೈಕೆಲಸಗಳನ್ನು ಆರಾಧಿಸುವದಿಲ್ಲ. 14 ನಿನ್ನ ತೋಪುಗಳನ್ನು ನಿನ್ನ ಮಧ್ಯ ದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶ ಮಾಡುವೆನು. 15 ಇದಲ್ಲದೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿ ತೀರಿಸುವೆನು. ಅಧ್ಯಾಯ 6 1 ಕರ್ತನು ಹೇಳುವದನ್ನು ಈಗ ಕೇಳಿರಿ--ಎದ್ದೇಳು,ಬೆಟ್ಟಗಳ ಮುಂದೆ ವ್ಯಾಜ್ಯವಾಡು; ಗುಡ್ಡಗಳು ನಿನ್ನ ಶಬ್ದವನ್ನು ಕೇಳಲಿ. 2 ಓ ಬೆಟ್ಟಗಳೇ, ಭೂಮಿಯ ಬಲವಾದ ಅಸ್ತಿವಾರಗಳಾದ ಬಂಡೆಗಳೇ, ಕರ್ತನ ವ್ಯಾಜ್ಯವನ್ನು ಕೇಳಿರಿ; ಕರ್ತನಿಗೆ ತನ್ನ ಜನರ ಸಂಗಡ ವ್ಯಾಜ್ಯ ಉಂಟು, ಇಸ್ರಾಯೇಲಿನ ಸಂಗಡ ಆತನು ತರ್ಕಿಸುತ್ತಾನೆ. 3 ನನ್ನ ಜನರೇ, ನಾನು ನಿನಗೆ ಏನು ಮಾಡಿದ್ದೇನೆ? ಯಾವದರಿಂದ ನಿನಗೆ ಬೇಸರ ಮಾಡಿದ್ದೇನೆ? ನನಗೆ ವಿರೋಧವಾಗಿ ಸಾಕ್ಷಿಕೊಡು. 4 ನಾನು ಐಗುಪ್ತದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸರ ಮನೆಯೊಳಗಿಂದ ನಿನ್ನನ್ನು ವಿಮೋ ಚಿಸಿ, ಮೋಶೆಯನ್ನೂ ಆರೋನನನ್ನೂ ಮಿರಿಯಾಮ ಳನ್ನೂ ನಿನ್ನ ಮುಂದೆ ಕಳುಹಿಸಿದೆನು. 5 ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಯೋಚಿಸಿ ದ್ದನ್ನೂ ಬೆಯೋರನ ಮಗನಾದ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ ಶಿಟ್ಟೀಮು ಮೊದಲು ಗೊಂಡು ಗಿಲ್ಗಾಲಿನ ವರೆಗೂ ಆದದ್ದನ್ನೂ ಈಗ ಜ್ಞಾಪಕ ಮಾಡಿಕೊಳ್ಳಿರಿ. ಆಗ ಕರ್ತನ ನೀತಿಯನ್ನು ತಿಳುಕೊಳ್ಳು ವಿರಿ. 6 ನಾನು ಯಾವದರೊಂದಿಗೆ ಕರ್ತನ ಮುಂದೆ ಬರಲಿ? ಯಾವದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಸಂಗಡವೂ ಒಂದು ವರುಷದ ಕರುಗಳ ಸಂಗಡವೂ ಆತನ ಮುಂದೆ ಬರಲೋ? 7 ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಕರ್ತನು ಮೆಚ್ಚು ವನೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗ ನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲ ವನ್ನೂ ಕೊಡಲೋ? 8 ಮನುಷ್ಯನೇ, ಉತ್ತಮವಾದ ದ್ದನ್ನು ನಿನಗೆ ಆತನು ತಿಳಿಸಿದ್ದಾನೆ; ಹೌದು, ನ್ಯಾಯ ವನ್ನು ಮಾಡುವದೂ ಕರುಣೆಯನ್ನು ಪ್ರೀತಿಮಾಡು ವದೂ ನಿನ್ನ ದೇವರ ಸಂಗಡ ವಿನಯವಾಗಿ ನಡ ಕೊಳ್ಳುವದೂ ಇದನ್ನೇ ಹೊರತು ಕರ್ತನು ಇನ್ನೇನು ನಿನ್ನಿಂದ ಕೇಳುತ್ತಾನೆ. 9 ಕರ್ತನ ಸ್ವರವು ಪಟ್ಟಣಕ್ಕೆ ಕೂಗುತ್ತದೆ, ಮತ್ತು ಬುದ್ಧಿವಂತನು ನಿನ್ನ ಹೆಸರನ್ನು ನೋಡುವನು; ಬೆತ್ತ ವನ್ನೂ ಅದನ್ನು ನೇಮಿಸಿದವನನ್ನೂ ಕೇಳಿರಿ. 10 ದುಷ್ಟರ ಮನೆಯಲ್ಲಿ ದುಷ್ಟತ್ವದ ಬೊಕ್ಕಸಗಳೂ ಅಸಹ್ಯವಾದಂಥ ಕಡಿಮೆಯಾದ ಅಳತೆಯೂ ಉಂಟೋ? 11 ನಾನು ದುಷ್ಟತ್ವದ ತ್ರಾಸುಗಳುಳ್ಳವರನ್ನು ಮೋಸವಾದ ಕಲ್ಲು ಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ? 12 ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿ ದ್ದಾರೆ, ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವ ರಾಗಿದ್ದಾರೆ; ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ. 13 ಆದದರಿಂದ ನಾನು ಸಹ ನಿನ್ನನ್ನು ಹೊಡೆದು ನಿನಗೆ ರೋಗವನ್ನು ಬರಮಾಡುವೆನು; ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು. 14 ನೀನು ಉಂಡು ತೃಪ್ತಿಯಾಗದೆ ಇರುವಿ; ನಿನ್ನೊಳಗೆ ನಿನ್ನ ಬೀಳ್ವಿಕೆಯು ಇರುವದು; ನೀನು ಹಿಡಿದು ತಪ್ಪಿಸದೆ ಇರುವಿ; ನೀನು ತಪ್ಪಿಸುವಂಥದ್ದನ್ನು ನಾನು ಕತ್ತಿಗೆ ಒಪ್ಪಿಸುವೆನು. 15 ನೀನು ಬೀಜ ಬಿತ್ತಿ ಕೊಯ್ಯದೆ ಇರುವಿ; ಇಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವಿ; ದ್ರಾಕ್ಷಾರಸ ಮಾಡಿ ಕುಡಿಯದೆ ಇರುವಿ. 16 ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ. ಅಧ್ಯಾಯ 7 1 ನನಗೆ ಅಯ್ಯೋ, ಯಾಕಂದರೆ ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವ ವರ ಹಾಗೆಯೂ ದ್ರಾಕ್ಷೇ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ; ತಿನ್ನುವದಕ್ಕೆ ಗೊನೆ ಇಲ್ಲ. ನನ್ನ ಪ್ರಾಣವು ಮೊದಲು ಹಣ್ಣಾದ ಅಂಜೂರ ವನ್ನು ಅಪೇಕ್ಷಿಸಿಯದೆ. 2 ಒಳ್ಳೆಯವನು ಭೂಮಿಯೊಳ ಗಿಂದ ನಾಶವಾಗಿದ್ದಾನೆ; ಮನುಷ್ಯರಲ್ಲಿ ಯಥಾರ್ಥನು ಇಲ್ಲ; ಅವರೆಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾರೆ; ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ. 3 ಕೆಟ್ಟದ್ದನ್ನು ಎರಡು ಕೈಗಳಿಂದ ಚೆನ್ನಾಗಿ ಮಾಡುವ ಹಾಗೆ ಪ್ರಧಾನನೂ ನ್ಯಾಯಾಧಿಪತಿಯೂ ಬಹುಮಾನವನ್ನು ಕೇಳುತ್ತಾರೆ; ದೊಡ್ಡ ಮನುಷ್ಯನು ತನ್ನ ಕೇಡಿನ ಆಸೆಯನ್ನು ತಾನೇ ಹೇಳುತ್ತಾನೆ; ಅವರು ಒಂದೇ ಕಟ್ಟಾಗಿದ್ದಾರೆ. 4 ಅವರಲ್ಲಿ ಉತ್ತಮನು ದತ್ತೂರಿಯ ಹಾಗೆಯೂ ಬಹು ಯಥಾರ್ಥನು ಮುಳ್ಳಿನ ಬೇಲಿಯ ಹಾಗೆಯೂ ಇದ್ದಾನೆ; ನಿನ್ನ ಕಾವಲುಗಾರರ ದಿವಸವೂ ನಿನ್ನ ವಿಚಾರಣೆಯೂ ಬರುತ್ತದೆ, ಈಗಲೇ ಅವರಿಗೆ ಗಾಬರಿಯಾಗುವದು. 5 ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ. 6 ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ; ಮಗಳು ತನ್ನ ತಾಯಿಗೂ ಸೊಸೆಯು ತನ್ನ ಅತ್ತೆಗೂ ವಿರೋಧವಾಗಿ ಏಳುತ್ತಾರೆ; ಒಬ್ಬ ಮನುಷ್ಯನಿಗೆ ಸ್ವಂತ ಮನೆಯವರೇ ಶತ್ರುಗಳು. 7 ಆದರೆ ನಾನು ಕರ್ತನನ್ನು ಎದುರು ನೋಡುವೆನು; ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು; ನನ್ನ ದೇವರು ನನ್ನನ್ನು ಕೇಳುವನು. 8 ನನ್ನ ಶತ್ರುವೇ, ನನ್ನ ಮೇಲೆ ಸಂತೋಷಪಡಬೇಡ; ನಾನು ಬಿದ್ದಿದ್ದರೂ ತಿರುಗಿ ಏಳುವೆನು; ಕತ್ತಲೆಯಲ್ಲಿ ಕೂತುಕೊಂಡರೂ ನನಗೆ ಬೆಳಕು ಕರ್ತನೇ. 9 ನಾನು ಕರ್ತನಿಗೆ ವಿರೋಧ ವಾಗಿ ಪಾಪ ಮಾಡಿದ್ದರಿಂದ ಆತನು ತನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡಿಸುವ ತನಕ ಆತನ ಕೋಪವನ್ನು ತಾಳುವೆನು; ಆತನು ನನ್ನನ್ನು ಬೆಳಕಿಗೆ ತರುವನು, ಆತನ ನೀತಿಯನ್ನು ನೋಡುವೆನು. 10 ನನ್ನ ಶತ್ರುಗಳು ಸಹ ಅದನ್ನು ನೋಡುವರು; ನಿನ್ನ ದೇವರಾದ ಕರ್ತನು ಎಲ್ಲಿ ಎಂದು ನನಗೆ ಹೇಳಿದವಳನ್ನು ನಾಚಿಕೆಯು ಮುಚ್ಚುವದು; ನನ್ನ ಕಣ್ಣುಗಳು ಅವಳನ್ನು ನೋಡುವವು, ಈಗಲೇ ಬೀದಿಗಳಲ್ಲಿರುವ ಕೆಸರಿನಂತೆ ತುಳಿಯಲ್ಪಡು ವಳು. 11 ನಿನ್ನ ಗೋಡೆಗಳು ತಿರುಗಿ ಕಟ್ಟಲ್ಪಡುವ ಆ ದಿನದಲ್ಲಿ ನಿರ್ಣಯವು ದೂರವಾಗಿ ಹೋಗುವದು. 12 ಆ ದಿನದಲ್ಲಿ ಅಶ್ಶೂರಿನಿಂದಲೂ ಕೋಟೆಯುಳ್ಳ ಪಟ್ಟಣಗಳಿಂದಲೂ ಕೋಟೆಯಿಂದ ನದಿಯವರೆಗೂ ಸಮುದ್ರದಿಂದ ಸಮುದ್ರದ ವರೆಗೂ ಬೆಟ್ಟದಿಂದ ಬೆಟ್ಟದ ವರೆಗೂ ನಿನ್ನ ಬಳಿಗೆ ಬರುವರು. 13 ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವದು. 14 ನಿನ್ನ ಜನರನ್ನೂ ಏಕಾಂತವಾಗಿ ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ ನಿನ್ನ ಬಾಧ್ಯತೆಯ ಮಂದೆ ಯನ್ನೂ ನಿನ್ನ ಕೋಲಿನಿಂದ ಮೇಯಿಸು; ಅವರು ಪೂರ್ವದ ದಿವಸಗಳಲ್ಲಾದ ಹಾಗೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ. 15 ನೀನು ಐಗುಪ್ತ ದೇಶದೊಳಗಿಂದ ಹೊರಡುವ ದಿವಸಗಳ ಹಾಗೆ ಅವನಿಗೆ ಆಶ್ಚರ್ಯವಾದವುಗಳನ್ನು ತೋರಿಸುವೆನು. 16 ಜನಾಂಗಗಳು ನೋಡಿ ತಮ್ಮ ತ್ರಾಣಕ್ಕೆಲ್ಲಾ ನಾಚಿಕೆ ಪಡುವರು; ತಮ್ಮ ಕೈಗಳನ್ನು ಬಾಯಿಯ ಮೇಲೆ ಇಡುವರು; ಅವರ ಕಿವಿಗಳು ಕಿವುಡಾಗಿ ಹೋಗುವವು. 17 ಅವರು ಸರ್ಪದಂತೆ ಧೂಳನ್ನು ನೆಕ್ಕುವರು; ಭೂಮಿಯ ಕ್ರಿಮಿಗಳಂತೆ ತಾವು ರಂಧ್ರಗಳಿಂದ ಹೊರಗೆ ಬರುವರು; ನಮ್ಮ ದೇವರಾದ ಕರ್ತನಿಗೆ ಅವರು ಹೆದರುವರು; ನಿನಗೆ ಭಯಪಡುವರು. 18 ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ. 19 ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ಅವರ ಪಾಪಗಳ ನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವಿ. 20 ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.
ಅಧ್ಯಾಯ 1 1 ನಿನೆವೆಯ ಭಾರವು. ಎಲ್ಕೋಷಿನವನಾದ ನಹೂಮನ ದರ್ಶನದ ಪುಸ್ತಕವು. 2 ಕರ್ತನು ರೋಷವುಳ್ಳಂಥ, ಮುಯ್ಯಿಗೆಮುಯ್ಯಿ ಕೊಡುವಂಥ ದೇವರು; ಕರ್ತನು ಮುಯ್ಯಿಗೆ ಮುಯ್ಯಿ ಕೊಡುವಂಥ ಉಗ್ರವುಳ್ಳಾತನು, ಕರ್ತನು ತನ್ನ ವೈರಿ ಗಳಿಗೆ ಮುಯ್ಯಿಗೆಮುಯ್ಯಿ ತೀರಿಸಿ ತನ್ನ ಶತ್ರುಗಳ ಮೇಲೆ ಕೋಪವನ್ನು ಇಟ್ಟುಕೊಳ್ಳುತ್ತಾನೆ. 3 ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ. 4 ಆತನು ಸಮುದ್ರವನ್ನು ಗದರಿಸಿ ಅದನ್ನು ಒಣಗುವಂತೆ ಮಾಡುತ್ತಾನೆ; ನದಿಗಳನ್ನೆಲ್ಲಾ ಬತ್ತಿಹೋಗುವಂತೆ ಮಾಡುತ್ತಾನೆ; ಬಾಷಾನೂ ಕರ್ಮೆಲೂ ಬಾಡಿಹೋಗುತ್ತವೆ, ಲೆಬನೋನಿನ ಹೂವು ಬಾಡಿಹೋಗುತ್ತದೆ. 5 ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು. 6 ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ. 7 ಕರ್ತನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಬಲವಾದ ಕೋಟೆಯಾಗಿದ್ದಾನೆ; ತನ್ನಲ್ಲಿ ನಂಬಿಕೆಯಿಡು ವವರನ್ನು ಬಲ್ಲನು. 8 ಆದರೆ ಮೇರೆ ವಿಾರುವ ಪ್ರಳಯ ದಿಂದ ಅದರ ಸ್ಥಳವನ್ನು ಮುಗಿಸಿಬಿಡುವನು; ಕತ್ತಲೆ ಆತನ ಶತ್ರುಗಳನ್ನು ಹಿಂದಟ್ಟುವದು. 9 ಕರ್ತನಿಗೆ ವಿರೋಧವಾಗಿ ಏನು ಯೋಚಿಸುತ್ತೀರಿ? ಆತನು ಸಂಪೂರ್ಣವಾಗಿ ಮುಗಿಸಿಬಿಡುತ್ತಾನೆ; ಇಕ್ಕಟ್ಟು ಎರ ಡನೇ ಸಾರಿ ಏಳದು. 10 ಅವರು ಮುಳ್ಳುಗಳ ಹಾಗೆ ಹೊಂದಿಕೊಂಡಿದ್ದರೂ ತಮ್ಮ ದ್ರಾಕ್ಷಾರಸದಿಂದ ಮತ್ತ ರಾಗಿದ್ದರೂ ಪೂರ್ಣವಾಗಿ ಒಣಗಿದ ಕೊಳೆಯಂತೆ ನಾಶವಾಗುವರು. 11 ಕರ್ತನಿಗೆ ವಿರೋಧವಾಗಿ ದುರಾ ಲೋಚನೆ ಮಾಡಿ ಕೇಡನ್ನು ಯೋಚಿಸುವವನು ನಿನ್ನೊಳ ಗಿಂದ ಹೊರಟಿದ್ದಾನೆ. 12 ಕರ್ತನು ಹೀಗೆ ಹೇಳು ತ್ತಾನೆ--ಅವರು ಸುಖವುಳ್ಳವರಾಗಿಯೂ ಬಹು ಮಂದಿ ಯಾಗಿಯೂ ಇದ್ದರೂ ಆತನು ಹಾದುಹೋಗುವಾಗ ಹೀಗೆ ಕಡಿಯಲ್ಪಡುವರು; ನಾನು ನಿನ್ನನ್ನು ಕಷ್ಟಪಡಿಸಿ ದಾಗ್ಯೂ ಇನ್ನು ಮೇಲೆ ಕಷ್ಟಪಡಿಸೆನು. 13 ಆದರೆ ನಾನು ಈಗ ನಿನ್ನ ಮೇಲಿಂದ ಆತನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಡುವೆನು. 14 ನಿನ್ನ ವಿಷಯವಾಗಿ ಕರ್ತನು ಆಜ್ಞಾಪಿಸುವದೇ ನಂದರೆ--ನಿನ್ನ ಹೆಸರುಳ್ಳವರು ಇನ್ನು ಬಿತ್ತಲ್ಪಡರು; ನಿನ್ನ ದೇವರುಗಳ ಮನೆಯೊಳಗಿಂದ ಕೆತ್ತಿದ ವಿಗ್ರಹ ವನ್ನೂ ಎರಕ ಹೊಯಿದದ್ದನ್ನೂ ಕಡಿದುಬಿಡುವೆನು; ನೀನು ತುಚ್ಛನಾದದ್ದರಿಂದ ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು. 15 ಇಗೋ, ಬೆಟ್ಟಗಳ ಮೇಲೆ ಶುಭಸಮಾಚಾರವನ್ನು ತಂದು ಸಮಾಧಾನವನ್ನು ತಿಳಿಸುವವನ ಪಾದಗಳನ್ನು ನೋಡು. ಯೆಹೂದವೇ, ನಿನ್ನ ಪರಿಶುದ್ಧ ಹಬ್ಬಗಳನ್ನು ನಡೆಸು, ನಿನ್ನ ಪ್ರಮಾಣ ಗಳನ್ನು ಸಲ್ಲಿಸು; ಯಾಕಂದರೆ ಇನ್ನು ಮೇಲೆ ದುಷ್ಟನು ನಿನ್ನನ್ನು ಹಾದುಹೋಗನು; ಅವನು ಸಂಪೂರ್ಣವಾಗಿ ಕಡಿದು ಬಿಡಲ್ಪಟ್ಟಿದ್ದಾನೆ. ಅಧ್ಯಾಯ 2 1 ಚೂರುಚೂರಾಗಿ ಒಡೆದು ಬಿಡುವವನು ನಿನ್ನ ಎದುರಿಗೆ ಬಂದಿದ್ದಾನೆ; ಆಯುಧ ಗಳನ್ನು ಭದ್ರಪಡಿಸು; ದಾರಿಯನ್ನು ಕಾಯಿ; ನಡುವನ್ನು ಬಲಪಡಿಸಿಕೋ, ನಿನ್ನ ಶಕ್ತಿಯನ್ನು ಬಲವಾಗಿ ಗಟ್ಟಿ ಮಾಡಿಕೋ. 2 ಕರ್ತನು ಯಾಕೋಬನ ಹೆಚ್ಚಳವನ್ನು ಇಸ್ರಾಯೇಲಿನ ಹೆಚ್ಚಳದ ಹಾಗೆಯೇ ತಿರುಗಿಸಿಬಿಟ್ಟಿ ದ್ದಾನೆ; ಬರಿದು ಮಾಡುವವರು ಅವರನ್ನು ಬರಿದು ಮಾಡಿ ಅವರ ದ್ರಾಕ್ಷೇ ಬಳ್ಳಿಗಳನ್ನು ಕೆಡಿಸಿದ್ದಾರೆ. 3 ಆತನ ಬಲಾಢ್ಯದ ಡಾಲು ಕೆಂಪಾಗಿದೆ; ಶೂರರು ರಕ್ತವರ್ಣದವರಾಗಿದ್ದಾರೆ; ಆತನು ಸಿದ್ಧಮಾಡುವ ದಿನ ದಲ್ಲಿ ರಥಗಳು ಹೊಳೆಯುವ ದೀವಟಿಗೆಗಳ ಹಾಗೆ ಇರುವವು; ಸೈಪ್ರಸ್ ಮರಗಳು ಭಯಂಕರವಾಗಿ ಅಲ್ಲಾ ಡಿಸಲ್ಪಡುವವು. 4 ರಥಗಳು ಬೀದಿಗಳಲ್ಲಿ ರಭಸವಾಗಿ ಓಡಾಡುವವು. ಹೆದ್ದಾರಿಗಳಲ್ಲಿ ಒಂದಕ್ಕೊಂದು ತಗಲು ವವು; ದೀವಟಿಗೆಗಳ ಹಾಗೆ ತೋರುವವು, ಮಿಂಚುಗಳ ಹಾಗೆ ಓಡುವವು. 5 ಆತನು ತನಗೆ ಯೋಗ್ಯವಾದವ ರನ್ನು ಗಮನಿಸುವನು. ಅವರು ತಮ್ಮ ನಡೆಯಲ್ಲಿ ಎಡವುವರು; ಅದರ ಗೋಡೆಯ ಬಳಿಗೆ ತ್ವರೆಯಾಗಿ ಬರುವರು; ರಕ್ಷಣೆಯು ಸಿದ್ಧಮಾಡಲ್ಪಡುವದು. 6 ನದಿಗಳ ಬಾಗಲುಗಳು ತೆರೆಯಲ್ಪಡುವವು; ಅರಮನೆ ಕರಗಿಹೋಗುವದು. 7 ಸ್ಥಿರವಾಗಿದ್ದವಳು ಸೆರೆಗೆ ಒಯ್ಯಲ್ಪಡುವಳು, ಮೇಲಕ್ಕೆ ತರಲ್ಪಡುವಳು; ಅವಳ ದಾಸಿಯರು ಪಾರಿವಾಳಗಳ ಶಬ್ದದಂತೆ ಮೂಲ್ಗುತ್ತ ಎದೆಬಡುಕೊಳ್ಳುವರು. 8 ನಿನೆವೆ ಹುಟ್ಟಿದಂದಿನಿಂದ ನೀರಿನ ಕೆರೆಯ ಹಾಗಿತ್ತು; ಆದರೂ ಅವರು ಓಡಿಹೋಗುತ್ತಾರೆ; ನಿಲ್ಲಿರಿ, ನಿಲ್ಲಿರಿ ಅಂದರೂ ಒಬ್ಬನೂ ಹಿಂದಕ್ಕೆ ನೋಡುವದಿಲ್ಲ. 9 ಬೆಳ್ಳಿಯನ್ನು ಸುಲುಕೊಳ್ಳಿರಿ; ಬಂಗಾರವನ್ನು ಸುಲುಕೊಳ್ಳಿರಿ; ಕೂಡಿಸಿಟ್ಟ ಧನಕ್ಕೂ ಸಕಲ ವಿಧವಾದ ಶ್ರೇಷ್ಠ ವಸ್ತುಗಳ ನಿಧಿಗೂ ಪಾರವೇ ಇಲ್ಲ. 10 ಅದು ಬರಿದಾಗಿಯೂ, ಬೈಲಾಗಿಯೂ, ಹಾಳಾ ಗಿಯೂ ಇತ್ತು; ಹೃದಯ ಕರಗುತ್ತದೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲಾ ನಡುವುಗಳಲ್ಲಿ ಹೆಚ್ಚು ಸಂಕಟ ಉಂಟು; ಎಲ್ಲಾ ಮುಖಗಳು ಕಳೆ ಗುಂದುತ್ತವೆ. 11 ಸಿಂಹದ ಗವಿಯೂ ಎಳೇ ಸಿಂಹಗಳು ಮೇಯುವ ಸ್ಥಳವು ಎಲ್ಲಿ? ಅಲ್ಲಿ ಮುದಿಸಿಂಹ, ಸಿಂಹಿಣಿ ಸಿಂಹದ ಮರಿಗಳು ನಡೆದಾಡಿದರೂ ಯಾರೂ ಹೆದರಿ ಸಲಿಲ್ಲವಲ್ಲಾ? 12 ಸಿಂಹವು ತನ್ನ ಮರಿಗಳಿಗೆ ಸಾಕಾ ಗುವಷ್ಟು ಸೀಳಿ ತನ್ನ ಸಿಂಹಿಣಿಗಳಿಗೋಸ್ಕರ ಕೊರಳು ಹಿಸುಕಿ ಕೊಳ್ಳೆಯಿಂದ ತನ್ನ ಗವಿಗಳನ್ನೂ ಸುಲಿಗೆಯಿಂದ ತನ್ನ ಗುಹೆಗಳನ್ನೂ ತುಂಬಿಸುತ್ತಿತ್ತು. 13 ಸೈನ್ಯಗಳ ಕರ್ತನು ಹೇಳುವದೇನಂದರೆ -- ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ; ಅದರ ರಥಗಳನ್ನು ಹೊಗೆಯಾ ಗಲು ಸುಡುತ್ತೇನೆ; ಕತ್ತಿಯು ನಿನ್ನ ಎಳೇ ಸಿಂಹಗಳನ್ನು ನುಂಗಿಬಿಡುವದು; ನಿನ್ನ ಕೊಳ್ಳೆಯನ್ನು ಭೂಮಿಯ ಮೇಲಿನಿಂದ ಕಡಿದುಬಿಡುತ್ತೇನೆ; ನಿನ್ನ ಸೇವಕರ ಶಬ್ದವು ಇನ್ನು ಕೇಳಲ್ಪಡುವದಿಲ್ಲ. ಅಧ್ಯಾಯ 3 1 ರಕ್ತವುಳ್ಳ ಪಟ್ಟಣಕ್ಕೆ ಅಯ್ಯೋ! ಅದೆಲ್ಲಾ ಸುಳ್ಳಿನಿಂದಲೂ ಕಳ್ಳತನದಿಂದಲೂ ತುಂಬಿ ಯದೆ; ಕೊಳ್ಳೆಯನ್ನು ಬಿಡುವದಿಲ್ಲ. 2 ಚಾವಟಿಗೆ ಚಬುಕಿನ ಶಬ್ದವೂ ಚಕ್ರಗಳ ಧಡಧಡನೆಯ ಶಬ್ದವೂ ಕುದುರೆಗಳ ಕುಣಿದಾಟವೂ ರಥಗಳ ಹಾರಾಟವೂ ಉಂಟು. 3 ಸವಾರನು ಹತ್ತುತ್ತಾನೆ, ಕತ್ತಿಗಳು ಮಿಂಚು ತ್ತವೆ. ಈಟಿಗಳು ಥಳಥಳಿಸುತ್ತವೆ, ಹತವಾದವರು ಬಹಳ; ಹೆಣಗಳು ಬಹಳ; ಶವಗಳಿಗೆ ಅಂತ್ಯವೇ ಇಲ್ಲ; ಅವರು ಶವಗಳ ಮೇಲೆ ಎಡವುತ್ತಾರೆ. 4 ಸೌಂದರ್ಯವುಳ್ಳ ಮಾಟಗಾರ್ತಿಯಾದ ಸೂಳೆಯ ಸೂಳೆತನಗಳು ಬಹಳ; ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ ತನ್ನ ಮಾಟಗಳಿಂದ ಗೋತ್ರಗಳನ್ನೂ ಮಾರಿದಳಲ್ಲಾ? 5 ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ. 6 ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ ನಿನ್ನನ್ನು ನೀಚಳನ್ನಾಗಿ ಮಾಡಿ ನಿನ್ನನ್ನು ನೋಟಕ್ಕೆ ಇಡುತ್ತೇನೆ. 7 ಆಗ ಆಗುವದೇನಂದರೆ, ನಿನ್ನನ್ನು ನೋಡುವವ ರೆಲ್ಲರೂ ನಿನ್ನಿಂದ ಓಡಿಹೋಗಿ ನಿನೆವೆ ಹಾಳಾಯಿತು; ಅದಕ್ಕೆ ಯಾರು ಚಿಂತೆಪಡುವರು, ನಿನಗಾಗಿ ಆದರಿ ಸುವವರನ್ನು ನಾನು ಎಲ್ಲಿಂದ ಹುಡುಕಲಿ ಎಂದು ಹೇಳುವರು. 8 ನದಿಗಳ ಬಳಿ ನೆಲೆಯಾಗಿದ್ದ ಅಮೋನಿಗಿಂತ ನೀನು ಒಳ್ಳೆಯವಳೋ? ಅದರ ಸುತ್ತಲೂ ನೀರಿತ್ತು; ಅದರ ಬಲವು ಸಮುದ್ರವೇ; ಸಮುದ್ರವು ಅದಕ್ಕೆ ಗೋಡೆ ಯಾಗಿತ್ತು. 9 ಕೂಷೂ ಐಗುಪ್ತವೂ ಅದರ ಬಲ ವಾಗಿದ್ದವು; ಮತ್ತು ಲೆಕ್ಕವಿಲ್ಲದ್ದಾಗಿತ್ತು; ಪೂಟರೂ ಲೂಬ್ಯರೂ ನಿನ್ನ ಸಹಾಯಕರಾಗಿದ್ದರು. 10 ಆದರೆ ಅದು ಸೆರೆಯಾಗಿ ದೇಶಾಂತರಕ್ಕೆ ಹೋಯಿತು; ಅದರ ಕೂಸುಗಳು ಸಹ ಎಲ್ಲಾ ಬೀದಿಗಳ ತುದಿಗಳಲ್ಲಿ ಜಜ್ಜ ಲ್ಪಟ್ಟವು; ಅದರ ಘನವುಳ್ಳವರಿಗೋಸ್ಕರ ಚೀಟು ಹಾಕಿದರು; ಅದರ ಮಹನೀಯರೆಲ್ಲರೂ ಸಂಕೋಲೆ ಗಳಿಂದ ಕಟ್ಟಲ್ಪಟ್ಟರು. 11 ನೀನು ಸಹ ಅಮಲೇರಿದ್ದೀ, ಅಡಗಿಕೊಳ್ಳುವಿ; ನೀನು ಸಹ ಶತ್ರುವಿನ ನಿಮಿತ್ತ ತ್ರಾಣ ವನ್ನು ಹುಡುಕುವಿ. 12 ನಿನ್ನ ಕೋಟೆಗಳೆಲ್ಲಾ ಮೊದಲನೇ ಹಣ್ಣುಗಳುಳ್ಳ ಅಂಜೂರದ ಗಿಡಗಳ ಹಾಗಿರುವವು; ಅಲ್ಲಾಡಿಸಲ್ಪಟ್ಟರೆ ತಿನ್ನುವವನ ಬಾಯಲ್ಲಿಯೇ ಬೀಳುವವು. 13 ಇಗೋ, ನಿನ್ನ ಮಧ್ಯದಲ್ಲಿರುವ ನಿನ್ನ ಜನರು ಹೆಂಗಸರ ಹಾಗಿದ್ದಾರೆ; ನಿನ್ನ ದೇಶದ ಬಾಗಲುಗಳು ನಿನ್ನ ಶತ್ರುಗಳಿಗೆ ಅಗಲವಾಗಿ ತೆರೆಯಲ್ಪಡುವವು; ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಡುವದು. 14 ಮುತ್ತಿಗೆಗೋಸ್ಕರ ನೀರನ್ನು ಸೇದು ನಿನ್ನ ಬಲವಾದ ಕೋಟೆಗಳನ್ನು ಭದ್ರ ಮಾಡು; ಕೆಸರಿನಲ್ಲಿ ಸೇರು ಮಣ್ಣನ್ನು ತುಳಿ, ಇಟ್ಟಿಗೆ ಗೂಡನ್ನು ಬಲಪಡಿಸು. 15 ಅಲ್ಲೇ ಬೆಂಕಿ ನಿನ್ನನ್ನು ನುಂಗುವದು; ಕತ್ತಿಯು ನಿನ್ನನ್ನು ಕಡಿದುಬಿಡುವದು; ನಾಶಕ ಹುಳದಂತೆ ಅದು ನಿನ್ನನ್ನು ತಿಂದುಬಿಡುವದು; ನಾಶಕ ಹುಳದಂತೆ ಬಹು ಮಂದಿಯಾಗು; ಮಿಡತೆಗಳಂತೆ ಬಹು ಮಂದಿಯಾಗು. 16 ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿ ಸಿದ್ದೀ; ನಾಶಕ ಹುಳವು ನಾಶಮಾಡಿ ಹಾರಿಹೋಗು ತ್ತದೆ. 17 ನಿನ್ನ ಕಿರೀಟಧಾರಿಗಳು ಮಿಡತೆಗಳ ಹಾಗೆಯೂ ನಿನ್ನ ಅಧಿಪತಿಗಳು ತಂಪಾದ ದಿನದಲ್ಲಿ ಬೇಲಿಗಳೊಳಗೆ ಇಳುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ; ಸೂರ್ಯನು ಹುಟ್ಟುವಾಗ ಹಾರಿಹೋಗು ತ್ತವೆ; ಆಗ ಅವು ಎಲ್ಲಿರುವವೆಂದು ಅವುಗಳ ಸ್ಥಳವು ತಿಳಿಯುವದಿಲ್ಲ; 18 ಅಶ್ಶೂರ್ಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ, ನಿನ್ನ ಶ್ರೇಷ್ಠರು ಧೂಳಿನಲ್ಲಿ ಬಿದ್ದಿದ್ದಾರೆ; ನಿನ್ನ ಜನರು ಬೆಟ್ಟಗಳಲ್ಲಿ ಚದರಿ ಹೋಗಿ ದ್ದಾರೆ; ಕೂಡಿಸುವವರು ಯಾರೂ ಇಲ್ಲ. 19 ನಿನ್ನ ಗಾಯವು ಗುಣಹೊಂದದು; ನಿನ್ನ ಗಾಯ ಕಠಿಣ ವಾದದ್ದು; ನಿನ್ನ ಸುದ್ದಿಯನ್ನು ಕೇಳುವವರೆಲ್ಲರು ನಿನಗೆ ಚಪ್ಪಾಳೆ ಹೊಡೆಯುವರು; ನಿನ್ನ ಕೆಟ್ಟತನವು ನಿತ್ಯವಾಗಿ ಯಾರ ಮೇಲೆ ಹಾದುಹೋಗದೆ ಇತ್ತು?
ಅಧ್ಯಾಯ 1 1 ಪ್ರವಾದಿಯಾದ ಹಬಕ್ಕೂಕನು ನೋಡಿದ ದೈವೋಕ್ತಿ. 2 ಓ ಕರ್ತನೇ, ನಾನು ನಿನಗೆ ಮೊರೆಯಿಟ್ಟರೂ ಎಷ್ಟರ ವರೆಗೆ ನೀನು ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನಗೆ ಕೂಗುತ್ತೇನೆ; ಆದರೆ ನೀನು ರಕ್ಷಿಸುವದಿಲ್ಲ. 3 ಯಾಕೆ ನನಗೆ ಅಪರಾಧವನ್ನು ತೋರಿಸಿ ಕಷ್ಟವನ್ನು ನೋಡಮಾಡುತ್ತೀ? ಸೂರೆಯೂ ಹಿಂಸೆಯೂ ನನ್ನ ಮುಂದೆ ಅವೆ; ಜಗಳವನ್ನೂ ತರ್ಕವನ್ನೂ ಎಬ್ಬಿಸುವವರು ಇದ್ದಾರೆ. 4 ಆದದರಿಂದ ನ್ಯಾಯಪ್ರಮಾಣವು ಸಡಿಲವಾಗುತ್ತದೆ; ನ್ಯಾಯತೀರ್ಪು ಎಂದಿಗೂ ಹೊರಡುವದಿಲ್ಲ; ದುಷ್ಟರು ನೀತಿ ವಂತರನ್ನು ಸುತ್ತಿಕೊಂಡಿದ್ದಾರೆ; ಆದದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ. 5 ಅನ್ಯಜನಾಂಗಗಳಲ್ಲಿ ನೋಡಿ ಲಕ್ಷ್ಯಗೊಟ್ಟು ಬಹಳ ವಾಗಿ ಆಶ್ಚರ್ಯಪಡಿರಿ; ತಿಳಿಸಿದರೂ ನೀವು ನಂಬದಂಥ ಕ್ರಿಯೆಯನ್ನು ನಿಮ್ಮ ದಿವಸಗಳಲ್ಲಿ ನಾನು ಮಾಡುತ್ತೇನೆ. 6 ಇಗೋ, ನಾನು ಕಸ್ದೀಯರನ್ನು ಎಬ್ಬಿಸುತ್ತೇನೆ; ಅದು ಕಹಿಯಾದ ತೀವ್ರವಾದ ಜನಾಂಗವು; ತಮ್ಮದಲ್ಲದ ನಿವಾಸಗಳನ್ನು ವಶಮಾಡಿ ಕೊಳ್ಳುವದಕ್ಕೆ ವಿಶಾಲ ವಾದ ದೇಶದಲ್ಲಿ ಹಾದುಹೋಗುವದು. 7 ಅವರು ಭಯಂಕರವಾದವರು ಮತ್ತು ಕ್ರೂರವಾದವರು; ಅವರ ನ್ಯಾಯವೂ ಘನತೆಯೂ ಅವರಿಂದಲೇ ಹೊರಡುತ್ತವೆ. 8 ಅವರ ಕುದುರೆಗಳು ಸಹ ಚಿರತೆಗಳಿಗಿಂತ ವೇಗ ವಾಗಿಯೂ ಸಂಜೆಯ ತೋಳಗಳಿಗಿಂತ ಚುರುಕಾ ಗಿಯೂ ಅವೆ; ಅವರ ಕುದುರೆ ಸವಾರರು ತಾವೇ ಹರಡಿಕೊಳ್ಳುವರು; ಅವರ ಸವಾರರು ದೂರದಿಂದ ಬರುವರು; ತಿನ್ನುವದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿಬರುವರು. 9 ಅವರೆಲ್ಲರು ಹಿಂಸಿಸುವದಕ್ಕೆ ಬರುವರು; ಅವರ ಮುಖಗಳು ಮೂಡಣ ಗಾಳಿ ಯಂತೆಯೇ ತಿಂದುಬಿಡುವವು; ಸೆರೆಯವರನ್ನು ಮರ ಳಿನ ಹಾಗೆ ಕೂಡಿಸುವರು. 10 ಅವರು ಅರಸರನ್ನು ಧಿಕ್ಕರಿಸುವರು; ಪ್ರಧಾನರು ಅವರಿಗೆ ಪರಿಹಾಸ್ಯ ಮಾಡುವರು. ಕೋಟೆಗಳಿಗೆಲ್ಲಾ ಕುಚೋದ್ಯ ಮಾಡು ವರು. ಮಣ್ಣನ್ನು ಕುಪ್ಪೆಮಾಡಿ ಅದನ್ನು ಹಿಡಿಯುವರು. 11 ಆಗ ಮನಸ್ಸನ್ನು ಬದಲು ಮಾಡಿ, ಹಾದುಹೋಗಿ ಅಪರಾಧಮಾಡುವರು; ಅವರ ದೇವರಿಂದಾಗುವ ಶಕ್ತಿ ಇದೆ ಅನ್ನುವರು. 12 ನನ್ನ ದೇವರಾದ ಕರ್ತನೇ, ನನ್ನ ಪರಿಶುದ್ಧನೇ, ನೀನು ಅನಾದಿಯಿಂದ ಇರುತ್ತೀಯಲ್ಲವೋ? ನಾವು ಸಾಯುವದಿಲ್ಲ. ಓ ಕರ್ತನೇ, ನ್ಯಾಯತೀರ್ಪಿಗೆ ಅವ ರನ್ನು ನೇಮಿಸಿದ್ದೀ; ಓ ಪರಾಕ್ರಮಿಯಾದ ದೇವರೇ, ಶಿಕ್ಷೆಗೆ ಅವರನ್ನು ಸ್ಥಾಪಿಸಿದ್ದೀ. 13 ನೀನು ಕೆಟ್ಟದ್ದನ್ನು ನೋಡಕೂಡದ ಹಾಗೆ ಶುದ್ಧ ಕಣ್ಣುಗಳುಳ್ಳವನು; ನೀನು ಅನ್ಯಾಯವನ್ನು ದೃಷ್ಟಿಸಲಾರಿ; ವಂಚಿಸುವವರನ್ನು ಯಾಕೆ ದೃಷ್ಟಿಸುತ್ತೀ? ದುಷ್ಟನು ತನಗಿಂತ ನೀತಿವಂತ ನನ್ನು ನುಂಗಿಬಿಡುವ ವೇಳೆಯಲ್ಲಿ ಯಾಕೆ ಸುಮ್ಮನಿ ರುತ್ತೀ? 14 ಮನುಷ್ಯರನ್ನು ಸಮುದ್ರದ ವಿಾನುಗ ಳಂತೆಯೂ ಆಳುವವನಿಲ್ಲದ ಕ್ರಿಮಿಗಳಂತೆಯೂ ಯಾಕೆ ಮಾಡುತ್ತೀ? 15 ಅವರನ್ನೆಲ್ಲಾ ಗಾಳದಿಂದ ಎತ್ತಿ ತಮ್ಮ ಬಲೆಯಿಂದ ಅವರನ್ನು ಹಿಡಿದು ತಮ್ಮ ಜಾಲದಿಂದ ಅವರನ್ನು ಕೂಡಿಸುತ್ತಾರೆ; ಆದದರಿಂದ ಸಂತೋಷಿಸಿ ಉಲ್ಲಾಸ ಪಡುತ್ತಾರೆ. 16 ತಮ್ಮ ಬಲೆಗೆ ಬಲಿ ಅರ್ಪಿಸಿ ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ; ಇವುಗಳಿಂದ ಅವರ ಪಾಲು ಕೊಬ್ಬಾಗಿಯೂ ಅವರ ಆಹಾರ ಪುಷ್ಟಿ ಯುಳ್ಳದ್ದಾಗಿಯೂ ಇದೆ. 17 ಹೀಗಿರುವದರಿಂದ ಅವರು ತಮ್ಮ ಬಲೆಯನ್ನು ಬರಿದುಮಾಡಿ ನಿತ್ಯವಾಗಿ ಜನಾಂಗ ಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ? ಅಧ್ಯಾಯ 2 1 ನನ್ನ ಕಾವಲಲ್ಲಿ ನಿಂತು ಗೋಪುರದ ಮೇಲೆ ನೆಲೆಯಾಗಿದ್ದು ಆತನು ನನಗೆ ಏನು ಹೇಳುವನೋ, ನನ್ನ ತರ್ಕದ ವಿಷಯ ಏನು ಉತ್ತರ ಕೊಡಬೇಕೋ ನೋಡುವದಕ್ಕೆ ಕಾದುಕೊಂಡಿರುವೆನು. 2 ಆಗ ಕರ್ತನು ನನಗೆ ಉತ್ತರಕೊಟ್ಟು ಹೇಳಿದ್ದೇ ನಂದರೆ--ದರ್ಶನವನ್ನು ಬರೆ; ಓದುವವನು ಶೀಘ್ರ ವಾಗಿ ಓದುವಂತೆ ಅದನ್ನು ಹಲಗೆಗಳ ಮೇಲೆ ಕೆತ್ತು. 3 ದರ್ಶನವು ಇನ್ನು ನೇಮಕವಾದ ಕಾಲಕ್ಕೆ ಉಂಟು; ಆದರೆ ಕಡೆಯಲ್ಲಿ ಅದು ಸುಳ್ಳಾಗದೆ ಮಾತನಾಡುವದು; ಅದು ತಡವಾ ದರೂ ಅದಕ್ಕೆ ಕಾದುಕೊಂಡಿರು; ಅದು ತಡಮಾಡದೆ ನಿಶ್ಚಯವಾಗಿ ಬರುವದು. 4 ಇಗೋ, ಹೆಚ್ಚಿಸಿಕೊಂಡವನ ಆತ್ಮವು ತನ್ನಲ್ಲಿ ಯಥಾರ್ಥವಲ್ಲ; ಆದರೆ ನೀತಿವಂತನು ತನ್ನ ವಿಶ್ವಾಸದಿಂದ ಬದುಕುವನು. 5 ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ. 6 ಇವರೆಲ್ಲರು ಅವನ ಮೇಲೆ ಸಾಮ್ಯವನ್ನೂ ಹಾಸ್ಯದ ಸಾಮತಿಯನ್ನೂ ಎತ್ತಿ--ತನಗಲ್ಲದ್ದನ್ನು ಹೆಚ್ಚಿಸಿಕೊಳ್ಳು ವವನಿಗೆ ಅಯ್ಯೋ! ಅದು ಎಷ್ಟರ ವರೆಗೆ? ತಾನಾಗಿ ತನ್ನ ಮೇಲೆ ಗಟ್ಟಿ ಮಣ್ಣನ್ನು ಹೊತ್ತುಕೊಳ್ಳುವವನಿಗೆ ಅಯ್ಯೋ ಎಂದು ಹೇಳರೋ? 7 ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ. 8 ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು; ಮನುಷ್ಯರ ರಕ್ತಕ್ಕಾಗಿ ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಬಲಾತ್ಕಾರದ ನಿಮಿತ್ತವೇ. 9 ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ! 10 ಅನೇಕ ಜನಗಳನ್ನು ಕಡಿದುಬಿಡುವದರಿಂದ ನಿನ್ನ ಮನೆಗೆ ನಾಚಿಕೆಯನ್ನು ಯೋಚಿಸಿದ್ದೀ; ಸ್ವಂತ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ್ದೀ. 11 ಗೋಡೆಯೊಳ ಗಿಂದ ಕಲ್ಲು ಕೂಗುತ್ತದೆ. ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ. 12 ಊರನ್ನು ರಕ್ತದಿಂದ ಕಟ್ಟಿ, ಪಟ್ಟಣವನ್ನು ಅನ್ಯಾಯ ದಿಂದ ಸ್ಥಾಪಿಸುವವನಿಗೆ ಅಯ್ಯೋ! 13 ಇಗೋ, ಇದು ಸೈನ್ಯಗಳ ಕರ್ತನಿಂದ ಅಲ್ಲವೋ? ಏನಂದರೆ, ಜನರು ಬೆಂಕಿಗೋಸ್ಕರ ಪರಿಶ್ರಮಪಟ್ಟ ವ್ಯರ್ಥಕ್ಕೋಸ್ಕರ ಆಯಾಸಪಡುವದೇ. 14 ನೀರುಗಳು ಸಮುದ್ರವನ್ನು ಮುಚ್ಚುವ ಪ್ರಕಾರ ಭೂಮಿಯು ಕರ್ತನ ಮಹಿಮೆಯ ತಿಳುವಳಿಕೆಯಿಂದ ತುಂಬಿರುವದು. 15 ತನ್ನ ನೆರೆಯವ ನಿಗೆ ಕುಡಿಯಕೊಟ್ಟು ನಿನ್ನ ಬುಟ್ಟಿಯನ್ನು ಹೊಯಿದು ಅವರ ಬೆತ್ತಲೆತನವನ್ನು ನೋಡುವ ಹಾಗೆ ಅಮಲೇರಿ ಸುವವನಿಗೆ ಅಯ್ಯೋ! 16 ಘನತೆಗೆ ಬದಲಾಗಿ ನಿಂದೆ ಯಿಂದ ತುಂಬಿದ್ದೀ; ನೀನು ಸಹ ಕುಡಿದು ನಿನ್ನ ಮುಂದೊಗಲು ಮುಚ್ಚಲ್ಪಡದಿರಲಿ. ಕರ್ತನ ಬಲಗೈಯ ಪಾತ್ರೆ ನಿನ್ನ ಕಡೆಗೆ ತಿರುಗುವದು. ನಿನ್ನ ಘನತೆಯ ಮೇಲೆ ಕಾರುವಿಕೆಯೂ ಲಜ್ಜೆಯೂ ಇರುವದು. 17 ಲೆಬನೋನಿನ ಹಿಂಸೆಯು ನಿನ್ನನ್ನು ಮುಚ್ಚುವದು; ಮೃಗಗಳ ಸೂರೆ ನಿನ್ನನ್ನು ಹೆದರಿಸುವದು; ಮನುಷ್ಯರ ರಕ್ತಕ್ಕಾಗಿ, ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಹಿಂಸೆಯು ನಿಮಿತ್ತವೇ. 18 ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು? 19 ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ. 20 ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ. ಅಧ್ಯಾಯ 3 1 ಶಿಗ್ಯೋನೋತನ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ. ಕರ್ತನೇ, ನಿನ್ನ ಮಾತನ್ನು ಕೇಳಿ ಭಯಪಟ್ಟಿದ್ದೇನೆ. 2 ಕರ್ತನೇ, ವರುಷ ಗಳ ಮಧ್ಯದಲ್ಲಿ ನಿನ್ನ ಕೆಲಸವನ್ನು ಉಜ್ಜೀವಿಸಮಾಡು. ವರುಷಗಳ ಮಧ್ಯದಲ್ಲಿ ತಿಳಿಯಮಾಡು, ರೌದ್ರದಲ್ಲಿ ಕರುಣೆಯನ್ನು ಜ್ಞಾಪಕಮಾಡು; 3 ದೇವರು ತೇಮಾನಿ ನಿಂದಲೂ ಪರಿಶುದ್ಧನು ಪಾರಾನ್ ಪರ್ವತದಿಂದಲೂ ಬಂದನು. ಸೆಲಾ. ಆತನ ಮಹಿಮೆ ಆಕಾಶಗಳನ್ನು ಮುಚ್ಚಿತು: ಆತನ ಸ್ತೋತ್ರವು ಭೂಮಿಯನ್ನು ತುಂಬಿ ಸಿತು. 4 ಆತನ ಪ್ರಕಾಶವು ಬೆಳಕಿನ ಹಾಗಿತ್ತು; ಆತನಿಗೆ ತನ್ನ ಕೈಯೊಳಗಿಂದ ಕೊಂಬುಗಳು ಬಂದವು; ಅಲ್ಲಿ ಆತನ ಅಧಿಕಾರವನ್ನು ಮರೆಮಾಡುವದಾಗಿತ್ತು. 5 ಆತನ ಮುಂದೆ ಜಾಡ್ಯವು ಹೋಯಿತು. ಆತನ ಕಾಲುಗಳಿಂದ ಉರಿ ಕೆಂಡಗಳು ಹೊರಟವು. 6 ಆತನು ನಿಂತುಕೊಂಡು ಭೂಮಿಯನ್ನು ಅಳೆದನು. ಆತನು ನೋಡಿ ಜನಾಂಗ ಗಳನ್ನು ಓಡಿಸಿಬಿಟ್ಟನು; ಶಾಶ್ವತವಾದ ಪರ್ವತಗಳು ಚದುರಿಸಲ್ಪಟ್ಟವು; ನಿತ್ಯವಾದ ಗುಡ್ಡಗಳು ನಡುಗಿ ದವು; ಆತನ ಮಾರ್ಗಗಳು ನಿತ್ಯವಾದವುಗಳೇ. 7 ಕೂಷಾನಿನ ಡೇರೆಗಳನ್ನು ಕಷ್ಟದೊಳಗೆ ನೋಡಿ ದೆನು; ಮಿದ್ಯಾನಿನ ದೇಶದ ತೆರೆಗಳು ನಡುಗಿದವು. 8 ಕರ್ತನು ನದಿಗಳ ಮೇಲೆ ಉರಿಗೊಂಡನೋ? ನದಿಗಳ ಮೇಲೆ ನಿನ್ನ ಕೋಪವಿತ್ತೋ? ಸಮುದ್ರದ ಮೇಲೆ ನಿನ್ನ ರೌದ್ರ ವಿತ್ತೋ? ಇದಕ್ಕಾಗಿ ನಿನ್ನ ಕುದುರೆ ಗಳ ಮೇಲೆ ಸವಾರಿ ಮಾಡಿ ನಿನ್ನ ರಕ್ಷಣೆಯ ರಥಗ ಳಲ್ಲಿ ಹತ್ತಿದಿಯೋ? 9 ನೀನು ಗೋತ್ರಗಳಿಗೆ ಆಣೆ ಯಿಟ್ಟ ವಾಕ್ಯದ ಪ್ರಕಾರ ನಿನ್ನ ಬಿಲ್ಲು ಪೂರ್ಣ ಬರಿದಾ ಯಿತು. ಸೆಲಾ. ಭೂಮಿಯನ್ನು ನದಿಗಳಿಂದ ಸೀಳಿದಿ. 10 ಬೆಟ್ಟಗಳು ನಿನ್ನನ್ನು ನೋಡಿ ನಡುಗಿದವು; ಜಲ ಪ್ರವಾಹವು ಹಾದು ಹೋಯಿತು; ಅಗಾಧವು ತನ್ನ ಶಬ್ದವನ್ನು ಕೊಟ್ಟಿತು; ತನ್ನ ಕೈಗಳನ್ನು ಮೇಲಕ್ಕೆ ಎತ್ತಿ ಕೊಂಡಿತು. 11 ಸೂರ್ಯ ಚಂದ್ರಗಳು ತಮ್ಮ ನಿವಾಸ ದಲ್ಲಿ ಕದಲದೆ ನಿಂತುಬಿಟ್ಟವು. ನಿನ್ನ ಬಾಣಗಳು ಬೆಳಕಿ ನಿಂದಲೂ ನಿನ್ನ ಈಟಿಯು ಮಿಂಚುವ ಪ್ರಕಾಶದಿಂದಲೂ ಹೊರಟವು. 12 ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ ಕೋಪದಿಂದ ಅನ್ಯಜನಾಂಗಗಳನ್ನು ತುಳಿದುಹಾಕಿದ್ದೀ. 13 ನಿನ್ನ ಜನರ ರಕ್ಷಣೆಗೋಸ್ಕರವೂ ನಿನ್ನ ಅಭಿಷಿಕ್ತರ ರಕ್ಷಣೆಗೊಸ್ಕರವೂ ನೀನು ಹೊರಟು ಹೋಗಿ ಕುತ್ತಿಗೆಯ ವರೆಗೂ ಆಸ್ತಿವಾರವನ್ನು ಬರಿದು ಮಾಡಿದ ಹಾಗೆ ದುಷ್ಟರ ಮನೆಯ ತಲೆಯನ್ನು ಗಾಯ ಮಾಡಿಬಿಟ್ಟಿದ್ದೀ. ಸೆಲಾ. 14 ಅವನ ದೊಣ್ಣೆಗಳಿಂದಲೇ ತನ್ನ ಹಳ್ಳಿಗಳ ಮುಖ್ಯಸ್ಥನನ್ನು ಹೊಡೆದಿದ್ದೀ; ಅವರು ನನ್ನನ್ನು ಚದುರಿಸುವದಕ್ಕೆ ಬಿರುಗಾಳಿಯಂತೆ ಬಂದರು; ಬಡವರನ್ನು ಅಂತರಂಗದಲ್ಲಿ ನುಂಗಿಬಿಡುವ ಹಾಗೆ ಅವರಿಗೆ ಸಂತೋಷವು ಇರುವದು. 15 ನೀನು ನಿನ್ನ ಕುದುರೆಗಳ ಸಂಗಡ ಸಮುದ್ರದಲ್ಲಿಯೂ ಮಹಾಜಲ ಗಳ ಸಮೂಹದಲ್ಲಿಯೂ ನಡೆದುಹೋದಿ. 16 ನಾನು ಕೇಳಿದಾಗ ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು; ಇಕ್ಕಟ್ಟಿನ ದಿನದಲ್ಲಿ ನಾನು ವಿಶ್ರಾಂತಿಯನ್ನು ಹೊಂದುವ ಹಾಗೆ ಕೊಳೆಯುವಿಕೆಯು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು; ಆತನು ಜನರ ಬಳಿಗೆ ಬರುವಾಗ ತನ್ನ ಸೈನ್ಯಗಳ ಕೂಡ ಅವರ ಮೇಲೆ ದಾಳಿ ಮಾಡುವನು. 17 ಅಂಜೂರದ ಮರವು ಚಿಗುರ ದಿದ್ದರೂ ದ್ರಾಕ್ಷೇಬಳ್ಳಿಗಳಲ್ಲಿ ಹಣ್ಣು ಇಲ್ಲದಿದ್ದರೂ ಎಣ್ಣೇ ಮರಗಳ ಉತ್ಪತ್ತಿಯು ನಿಂತುಹೋದರೂ ಹೊಲಗಳು ಆಹಾರ ಕೊಡದಿದ್ದರೂ ಹಟ್ಟಿಯೊಳಗಿಂದ ಮಂದೆಗಳು ಕಡಿದು ಬಿಡಲ್ಪಟ್ಟಿದ್ದರೂ ಗೋದಲಿಗಳಲ್ಲಿ ಮಂದೆ ಇಲ್ಲದಿದ್ದರೂ 18 ನಾನು ಕರ್ತನಲ್ಲಿ ಸಂತೋಷಿ ಸುವೆನು, ನನ್ನ ರಕ್ಷಣೆಯ ದೇವರಲ್ಲಿ ಉಲ್ಲಾಸಪಡು ವೆನು. 19 ಕರ್ತನಾದ ದೇವರು ನನ್ನ ಬಲವಾಗಿದ್ದಾನೆ. ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳ ಹಾಗೆ ಮಾಡಿ ನನ್ನ ಉನ್ನತ ಸ್ಥಳಗಳಲ್ಲಿ ನಾನು ನಡೆಯುವಂತೆ ಆತನು ಮಾಡುವನು. ಪ್ರಧಾನ ಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು: ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.
ಅಧ್ಯಾಯ 1 1 ಯೆಹೂದದ ಅರಸನಾದ ಅಮೋನನ ಮಗನಾದ ಯೋಷೀಯನ ದಿವಸಗಳಲ್ಲಿ ಹಿಜ್ಕೀಯನ ಮಗನಾದ ಅಮರ್ಯನ ಮಗನಾದ ಗೆದಲೀಯನ ಮಗನಾದ ಕೂಶೀಯನ ಮಗನಾದ ಚೆಫನ್ಯನಿಗೆ ಉಂಟಾದ ಕರ್ತನ ದೈವೋಕ್ತಿ 2 ಕರ್ತನು ಹೇಳುವದೇನಂದರೆ--ನಾನು ದೇಶ ದೊಳಗಿಂದ ಎಲ್ಲವುಗಳನ್ನು ಸಂಪೂರ್ಣವಾಗಿ ನಾಶ ಮಾಡುವೆನು. 3 ಮನುಷ್ಯರನ್ನೂ ಮೃಗಗಳನ್ನೂ ನಾಶ ಮಾಡುವೆನು. ಆಕಾಶದ ಪಕ್ಷಿಗಳನ್ನೂ ಸಮುದ್ರದ ವಿಾನುಗಳನ್ನೂ ದುಷ್ಟರ ಸಂಗಡ ಅಭ್ಯಂತರ ಮಾಡುವ ವುಗಳನ್ನೂ ಹಾಳುಮಾಡುವೆನು: ಮನುಷ್ಯರನ್ನು ದೇಶದೊಳಗಿಂದ ಕಡಿದುಬಿಡುವೆನು ಎಂದು ಕರ್ತನು ಅನ್ನುತ್ತಾನೆ. 4 ಯೆಹೂದದ ಮೇಲೆಯೂ ಯೆರೂಸಲೇಮಿನ ಎಲ್ಲಾ ನಿವಾಸಿಗಳ ಮೇಲೆಯೂ ನನ್ನ ಕೈಚಾಚಿ ಈ ಸ್ಥಳದಿಂದ ಬಾಳನ ಉಳಿದವುಗಳನ್ನೂ ಯಾಜಕರ ಸಂಗಡ ಕೆಮಾರ್ಯರ ಹೆಸರನ್ನೂ 5 ಮಾಳಿಗೆಗಳ ಮೇಲೆ ಆಕಾಶದ ಸೈನ್ಯವನ್ನು ಆರಾಧಿಸುವವರನ್ನೂ ಕರ್ತನ ಮೇಲೆಯೂ ಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ 6 ಕರ್ತನ ಕಡೆಯಿಂದ ಹಿಂತಿ ರುಗಿದವರನ್ನೂ ಕರ್ತನನ್ನು ಹುಡುಕದೆಯೂ ವಿಚಾರಿಸ ದೆಯೂ ಇರುವವರನ್ನೂ ಕಡಿದುಬಿಡುವೆನು. 7 ಕರ್ತ ನಾದ ದೇವರ ಮುಂದೆ ಮೌನವಾಗಿರ್ರಿ: ಕರ್ತನ ದಿನವು ಸವಿಾಪವಾಗಿದೆ; ಕರ್ತನು ಬಲಿಯನ್ನು ಸಿದ್ಧ ಮಾಡಿದ್ದಾನೆ; ತನ್ನ ಅತಿಥಿಗಳನ್ನು ಆಹ್ವಾನಿಸಿದ್ದಾನೆ. 8 ಕರ್ತನ ಬಲಿಯ ದಿನದಲ್ಲಿ ಆಗುವದೇನಂದರೆ--ನಾನು ಪ್ರಧಾನರನ್ನೂ ಅರಸನ ಕುಮಾರರ ಮಕ್ಕಳನ್ನೂ ಅನ್ಯರ ಉಡುಪನ್ನು ತೊಟ್ಟುಕೊಳ್ಳುವವರೆಲ್ಲರನ್ನೂ ದಂಡಿಸುವೆನು. 9 ಆ ದಿನದಲ್ಲಿ ಹೊಸ್ತಿಲನ್ನು ಹಾರಿ ದಾಟುವವರೆಲ್ಲರನ್ನೂ ತಮ್ಮ ಯಜಮಾನರ ಮನೆ ಗಳನ್ನು ಬಲಾತ್ಕಾರ ಮೋಸಗಳಿಂದ ತುಂಬಿಸುವವರನ್ನೂ ದಂಡಿಸುವೆನು. 10 ಆ ದಿನದಲ್ಲಿ ಆಗುವದೇನಂದರೆ--ವಿಾನುಬಾಗಲಿಂದ ಕೂಗಿನ ಶಬ್ದವೂ ಮತ್ತೊಂದ ರಿಂದ ಗೋಳಾಟವೂ ಗುಡ್ಡಗಳ ಕಡೆಯಿಂದ ದೊಡ್ಡ ಮುರಿಯೋಣವೂ ಇರುವದು. 11 ಮಕ್ತೇಷಿನ ನಿವಾಸಿ ಗಳೇ, ಗೋಳಾಡಿರಿ; ವರ್ತಕರ ಜನರೆಲ್ಲಾ ಸಂಹಾರ ವಾದರು; ಬೆಳ್ಳಿ ಹೊತ್ತವರೆಲ್ಲರೂ ಕಡಿದುಬಿಡಲ್ಪಟ್ಟಿ ದ್ದಾರೆ. 12 ಆ ಕಾಲದಲ್ಲಿ ಆಗುವದೇನಂದರೆ--ನಾನು ಯೆರೂಸಲೇಮನ್ನು ದೀಪಗಳಿಂದ ಶೋಧಿಸುವೆನು; ಕರ್ತನು ಒಳ್ಳೇದನ್ನಾದರೂ ಕೆಟ್ಟದ್ದನ್ನಾದರೂ ಮಾಡು ವದಿಲ್ಲವೆಂದು ತಮ್ಮ ಹೃದಯಗಳಲ್ಲಿ ಅನ್ನುವವರಾಗಿ ಮರೆಯಾದವುಗಳ ಮೇಲೆ ಕಟ್ಟಿಕೊಂಡಿರುವ ಮನುಷ್ಯ ರನ್ನು ದಂಡಿಸುವೆನು. 13 ಆದದರಿಂದ ಅವರ ಸಂಪತ್ತು ಕೊಳ್ಳೆಯಾಗುವದು, ಅವರ ಮನೆಗಳು ಹಾಳಾಗು ವವು; ಅವರು ಮನೆಗಳನ್ನು ಕಟ್ಟಿ ವಾಸಮಾಡರು; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ರಸವನ್ನು ಕುಡಿಯರು. 14 ಕರ್ತನ ಮಹಾದಿನವು ಸವಿಾಪವಾಗಿದೆ, ಅದು ಬಹು ತ್ವರೆಪಡುತ್ತದೆ; ಕರ್ತನ ದಿನದ ಶಬ್ದವು ತ್ವರೆ ಪಡುತ್ತದೆ; ಶೂರನು ಅಲ್ಲಿ ಘೋರವಾಗಿ ಗೋಳಿಡು ವನು. 15 ಆ ದಿನವು ರೌದ್ರದ ದಿನವು, ಇಕ್ಕಟ್ಟು ಸಂಕಟಗಳ ದಿನವು, ಹಾಳು ಪಾಳುಗಳ ದಿನವು, ಕತ್ತಲೆ ಮೊಬ್ಬುಗಳ ದಿನವು, ಮೇಘ ಮೋಡಗಳ ದಿನವು. 16 ಅದರ ಕೋಟೆಯುಳ್ಳ ಪಟ್ಟಣಗಳಿಗೆ ವಿರೋಧವಾಗಿಯೂ ಉನ್ನತವಾದ ಗೋಪುರಗಳಿಗೆ ವಿರೋಧವಾಗಿಯೂ ತುತೂರಿ ಅರ್ಭಟಗಳ ದಿನವು. 17 ಆಗ ನಾನು ಮನುಷ್ಯರ ಮೇಲೆ ಇಕ್ಕಟ್ಟು ತರಿಸುವೆನು; ಅವರು ಕುರುಡರ ಹಾಗೆ ನಡೆಯುವರು; ಕರ್ತನಿಗೆ ವಿರೋಧವಾಗಿ ಅವರು ಪಾಪಮಾಡಿದ್ದಾರೆ; ಅವರ ರಕ್ತವು ದೂಳಿನಂತೆಯೂ ಅವರ ಮಾಂಸವು ಗೊಬ್ಬರ ದಂತೆಯೂ ಸುರಿಯಲ್ಪಡುವದು. 18 ಕರ್ತನ ರೌದ್ರದ ದಿನದಲ್ಲಿ ಅವರ ಬೆಳ್ಳಿಯಾದರೂ ಅವರ ಬಂಗಾರ ವಾದರೂ ಅವರನ್ನು ತಪ್ಪಿಸಲಾರವು; ಆತನ ಕೋಪದ ಬೆಂಕಿಯು ದೇಶವನ್ನೆಲ್ಲಾ ನುಂಗುವದು. ಅಧ್ಯಾಯ 2 1 ಅಪೇಕ್ಷಿಸಲ್ಪಡದ ಓ ಜನಾಂಗವೇ ನೀವು ಒಟ್ಟಾಗಿ ಕೂಡಿಕೊಳ್ಳಿರಿ, ಹೌದು, ಒಟ್ಟಾಗಿ ಕೂಡಿಕೊಳ್ಳಿರಿ. 2 ನಿರ್ಣಯವು ಬರುವದಕ್ಕಿಂತ ಮುಂಚೆ ಯೂ ದಿನವು ಹೊಟ್ಟಿನಂತೆ ಹಾದುಹೋಗುವದಕ್ಕಿಂತ ಮುಂಚೆಯೂ ಕರ್ತನ ಕೋಪದ ದಿನವು ಉರಿದು ನಿಮ್ಮ ಮೇಲೆ ಬರುವದಕ್ಕಿಂತ ಮುಂಚೆಯೂ ಕೂಡಿ ಕೊಳ್ಳಿರಿ. 3 ಆತನ ನ್ಯಾಯತೀರ್ಪುಗಳನ್ನು ಮಾಡುವ ಲೋಕದ ದೀನರೆಲ್ಲರೇ, ಕರ್ತನನ್ನು ಹುಡುಕಿರಿ, ನೀತಿ ಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ; ಒಂದು ವೇಳೆ ಕರ್ತನ ಕೋಪದ ದಿನದಲ್ಲಿ ಮರೆಯಾಗುವಿರಿ. 4 ಗಾಜವು ಕೈಬಿಡಲ್ಪಡುವದು, ಅಷ್ಕೆಲೋನ್ ಹಾಳಾ ಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಹೊರಡಿಸು ವರು, ಎಕ್ರೋನ್ ಕೀಳಲ್ಪಡುವದು. 5 ಸಮುದ್ರತೀರದ ನಿವಾಸಿಗಳಾದ ಕೆರೇತ್ಯರ ಜನಾಂಗಕ್ಕೆ ಅಯ್ಯೋ! ಕರ್ತನ ವಾಕ್ಯವು ನಿಮಗೆ ವಿರೋಧವಾಗಿದೆ; ಓ ಕಾನಾನೇ, ಫಿಲಿಷ್ಟಿಯರ ದೇಶವೇ, ನಿವಾಸಿಯೇ ಇಲ್ಲದ ಹಾಗೆ ನಿನ್ನನ್ನು ನಾಶಮಾಡುವೆನು. 6 ಸಮುದ್ರದ ತೀರವು ಕುರುಬರು ಮೇಯಿಸುವ ಸ್ಥಳಗಳಾಗಿಯೂ ಕುಂಟೆ ಗಳಾಗಿಯೂ ಕುರೀಹಟ್ಟಿಗಳಾಗಿಯೂ ಇರುವದು. 7 ತೀರವು ಯೆಹೂದದ ಮನೆತನದವರ ಉಳಿದವರಿಗೆ ಆಗುವದು; ಅದರ ಮೇಲೆ ಮೇಯಿಸುವರು; ಅಷ್ಕೆ ಲೋನಿನ ಮನೆತನಗಳಲ್ಲಿ ಸಾಯಂಕಾಲ ಅವರು ಮಲಗಿಕೊಳ್ಳುವರು; ಅವರ ದೇವರಾದ ಕರ್ತನು ಅವರನ್ನು ದರ್ಶಿಸಿ ಅವರ ಸೆರೆಯನ್ನು ತಿರುಗಿಸುವನು. 8 ನನ್ನ ಜನರನ್ನು ನಿಂದಿಸಿ, ಅವರ ಮೇರೆಗೆ ಮೋವಾ ಬ್ಯರೂ ಅಮ್ಮೋನ್ಯರೂ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಂಡದ್ದನ್ನು ನಾನು ಕೇಳಿದ್ದೇನೆ. 9 ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳು ವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಮೋವಾಬು ಸೊದೋಮಿನ ಹಾಗಾಗುವದು; ಅಮ್ಮೋ ನನ ಮಕ್ಕಳು ಗೊಮೋರದ ಹಾಗಾಗುವರು; ತುರುಚಿ ಗಿಡಗಳನ್ನು ಹುಟ್ಟಿಸುವಂಥ ಉಪ್ಪಿನ ಕುಣಿಗಳುಳ್ಳಂಥ ನಿತ್ಯವಾಗಿ ಹಾಳಾಗುವಂಥ ಸ್ಥಳವಾಗುವರು; ನನ್ನ ಜನರಲ್ಲಿ ಉಳಿದವರು ಅವರನ್ನು ಸುಲುಕೊಳ್ಳುವರು; ನನ್ನ ಜನರಲ್ಲಿ ಮಿಕ್ಕಾದವರು ಅವರನ್ನು ಸ್ವಾಧೀನ ಮಾಡಿಕೊಳ್ಳುವರು. 10 ಅವರ ಗರ್ವಕ್ಕೋಸ್ಕರ ಇದೇ ಅವರಿಗೆ ಸಿಕ್ಕುವದು; ಅವರು ಸೈನ್ಯಗಳ ಕರ್ತನ ಜನರಿಗೆ ವಿರೋಧವಾಗಿ ನಿಂದಿಸಿ ತಮ್ಮನ್ನು ಹೆಚ್ಚಿಸಿಕೊಂಡ ದ್ದರಿಂದಲೇ 11 ಕರ್ತನು ಅವರಿಗೆ ಭಯಂಕರನಾಗಿ ರುವನು. ಆತನು ಭೂಮಿಯ ಎಲ್ಲಾ ದೇವರುಗಳನ್ನು ಕ್ಷೀಣಮಾಡುವನು; ಅನ್ಯಜನಾಂಗಗಳ ದ್ವೀಪಗಳವ ರೆಲ್ಲರು ತಮ್ಮ ತಮ್ಮ ಸ್ಥಳಗಳಿಂದ ಆತನನ್ನು ಆರಾ ಧಿಸುವರು. 12 ಕೂಷ್ಯರೇ, ನೀವೂ ಸಹ ನನ್ನ ಕತ್ತಿ ಯಿಂದ ಕೊಲ್ಲಲ್ಪಡುವಿರಿ; 13 ಆತನು ತನ್ನ ಕೈಯನ್ನು ಉತ್ತರದ ಮೇಲೆ ಚಾಚಿ ಅಶ್ಶೂರನ್ನು ನಾಶಮಾಡಿ ನಿನೆವೆಯನ್ನು ಹಾಳಾಗಿಯೂ ಅರಣ್ಯದಂತೆ ಒಣಗಿ ದ್ದಾಗಿಯೂ ಮಾಡುವನು. 14 ಅದರ ಮಧ್ಯದಲ್ಲಿ ಮಂದೆಗಳೂ ಜನಾಂಗಗಳ ಮೃಗಗಳೆಲ್ಲವೂ ಮಲಗುವವು; ಬಕಪಕ್ಷಿಯೂ ಮುಳ್ಳು ಹಂದಿಯೂ ಅದರ ಮೇಲಿನ ಅವುಗಳ ಹಾಸುಗಳಲ್ಲಿ ಇಳುಕೊಳ್ಳುವವು; ಕಿಟಕಿಗಳಲ್ಲಿ ಹಾಡುವ ಶಬ್ದವಿರುವದು; ಹೊಸ್ತಿಲಗಳಲ್ಲಿ ಹಾಳು ಇರುವದು; ದೇವದಾ ರಿನ ಕೆಲಸವನ್ನು ಬೈಲುಮಾಡುವನು. 15 ನಿಶ್ಚಿಂತೆಯಾಗಿ ವಾಸಿಸಿದಂಥ ತಾನೇ ಹೊರತು ಮತ್ತೊಂದಿಲ್ಲವೆಂದು ತನ್ನೊಳಗೆ ಅಂದುಕೊಂಡಂಥ ಉಲ್ಲಾಸದ ಪಟ್ಟಣವು ಇದೇ. ಅದು ಎಷ್ಟೋ ಹಾಳಾಯಿತು; ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. ಅದನ್ನು ಹಾದು ಹೋಗುವವರೆಲ್ಲರು ಸಿಳ್ಳಿಟ್ಟು ಕೈ ಅಲ್ಲಾಡಿಸುವರು. ಅಧ್ಯಾಯ 3 1 ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಅಯ್ಯೋ! 2 ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ. 3 ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ. 4 ಅದರ ಪ್ರವಾದಿಗಳು ಹಗುರವಾಗಿಯೂ ವಂಚಕರಾಗಿಯೂ ಇದ್ದಾರೆ; ಅದರ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿ ದ್ದಾರೆ; ನ್ಯಾಯಪ್ರಮಾಣಕ್ಕೆ ಬಲಾತ್ಕಾರಮಾಡಿದ್ದಾರೆ. 5 ನೀತಿ ಯುಳ್ಳ ಕರ್ತನು ಅದರ ಮಧ್ಯದಲ್ಲಿ ಇದ್ದಾನೆ, ಆತನು ಅನ್ಯಾಯಮಾಡುವದಿಲ್ಲ; ಪ್ರತಿ ಬೆಳಿಗ್ಗೆ ತನ್ನ ನ್ಯಾಯ ತೀರ್ಪನ್ನು ಬೆಳಕಿಗೆ ತರುತ್ತಾನೆ; ಆತನು ತಪ್ಪುವಾತನಲ್ಲ, ಆದರೆ ಅನ್ಯಾಯವಂತನು ನಾಚಿಕೆ ಯನ್ನು ಅರಿಯನು. 6 ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ; ಅವುಗಳ ಗೋಪುರಗಳು ಹಾಳಾಗಿವೆ; ಅವರ ಬೀದಿಗಳನ್ನು ಯಾರೂ ಹಾದು ಹೋಗದ ಹಾಗೆ ಹಾಳು ಮಾಡಿದ್ದೇನೆ; ಅವುಗಳ ಪಟ್ಟಣಗಳು ನಾಶವಾದವು, ಹೀಗೆ ಅಲ್ಲಿ ಯಾವನೂ ಇರುವದಿಲ್ಲ, ಯಾವ ಮನುಷ್ಯನು ಅಲ್ಲಿ ವಾಸಿಸುವದೂ ಇಲ್ಲ. 7 ನಾನು--ನಿಶ್ಚಯವಾಗಿ ನೀನು ನನಗೆ ಭಯಪಟ್ಟು ಶಿಕ್ಷಣವನ್ನು ಹೊಂದುವಿ; ಹೀಗೆ ನಾನು ಅವರಿಗೆ ಶಿಕ್ಷೆ ವಿಧಿಸಿದರೂ ಅವರ ನಿವಾಸವು ಕಡಿದು ಬಿಡಲ್ಪ ಡುವದಿಲ್ಲ; ಆದರೆ ಅವರು ಬೇಗನೆ ಎದ್ದು ತಮ್ಮ ಕ್ರಿಯೆಗಳನ್ನೆಲ್ಲಾ ಕೆಡಿಸಿಬಿಟ್ಟರು ಅಂದೆನು. 8 ಆದದರಿಂದ ನಾನು ಕೊಳ್ಳೆಗೆ ಏಳುವ ದಿನದ ವರೆಗೂ ನನಗೆ ಕಾದುಕೊಳ್ಳಿರಿ; ಜನಾಂಗಗಳನ್ನು ಕೂಡಿಸುವದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವದಕ್ಕೂ ತೀರ್ಮಾನಿಸಿಕೊಂಡಿದ್ದೇನೆ; ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸ ಲ್ಪಡುವದು. 9 ಆಗ ನಾನು ಶುದ್ಧ ಭಾಷೆಯನ್ನು ಜನಾಂಗಗಳಿಗೆ ತಿರುಗಿ ಕೊಡುವೆನು; ಅವರೆಲ್ಲರು ಕರ್ತನ ಹೆಸರಿನಲ್ಲಿ ಮೊರೆಯಿಟ್ಟು ಏಕ ಮನಸ್ಸಿನಿಂದ ಆತನಿಗೆ ಸೇವೆ ಮಾಡು ವರು. 10 ಕೂಷಿನ ನದಿಗಳ ಆಚೆಯಿಂದ ನನ್ನ ಭಕ್ತರೂ ಚದರಿ ಹೋದವರ ನನ್ನ ಮಗಳೂ ನನ್ನ ಕಾಣಿಕೆಯನ್ನು ತರುವರು. 11 ಆ ದಿನದಲ್ಲಿ ನೀನು ನನಗೆ ವಿರೋಧ ವಾಗಿ ಪಾಪ ಮಾಡಿದ ನಿನ್ನ ಎಲ್ಲಾ ಕ್ರಿಯೆಗಳ ನಿಮಿತ್ತ ನಾಚಿಕೆಪಡದೆ ಇರುವಿ; ಆಗ ನಿನ್ನ ಹೆಚ್ಚಳದಲ್ಲಿ ಸಂಭ್ರಮ ಪಡುವವರನ್ನು ನಿನ್ನ ಮಧ್ಯದೊಳಗಿಂದ ತೆಗೆದುಹಾಕು ವೆನು; ನನ್ನ ಪರಿಶುದ್ಧ ಪರ್ವತಕ್ಕೋಸ್ಕರ ಇನ್ನು ಮೇಲೆ ನೀನು ಗರ್ವಪಡುವದೇ ಇಲ್ಲ. 12 ಇದಲ್ಲದೆ ನಿನ್ನ ಮಧ್ಯದಲ್ಲಿ ಬಡವರನ್ನೂ ಹೀನವಾದವರನ್ನೂ ಉಳಿಸುವೆನು; ಇವರು ಕರ್ತನ ಹೆಸರಿನಲ್ಲಿ ನಂಬಿಕೆ ಇಡುವರು. 13 ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯಮಾಡುವದಿಲ್ಲ; ಸುಳ್ಳು ಹೇಳುವದಿಲ್ಲ; ಅವರ ಬಾಯಲ್ಲಿ ಮೋಸದ ನಾಲಿಗೆ ಕಾಣುವದಿಲ್ಲ; ಅವರು ಮಂದೆಯಂತೆ ಮೇದು ಮಲಗುವರು; ಭಯಪಡಿಸು ವವನು ಒಬ್ಬನೂ ಇರುವದಿಲ್ಲ. 14 ಓ ಚೀಯೋನಿನ ಕುಮಾರ್ತೆಯೇ, ಹಾಡು; ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಕುಮಾರ್ತೆಯೇ, ಪೂರ್ಣಹೃದಯ ದಿಂದ ಸಂಭ್ರಮಿಸಿ ಉಲ್ಲಾಸಪಡು. 15 ಕರ್ತನು ನಿನ್ನ ನ್ಯಾಯ ತೀರ್ವಿಕೆಗಳನ್ನು ದೂರಮಾಡಿ ನಿನ್ನ ಶತ್ರು ವನ್ನು ತೆಗೆದುಹಾಕಿದ್ದಾನೆ; ಇಸ್ರಾಯೇಲಿನ ಅರಸನಾದ ಕರ್ತನು ನಿನ್ನ ಮಧ್ಯದಲ್ಲಿ ಇದ್ದಾನೆ; ಇನ್ನು ಮೇಲೆ ನೀನು ಕೇಡನ್ನು ನೋಡುವದಿಲ್ಲ. 16 ಆ ದಿನದಲ್ಲಿ ಯೆರೂಸಲೇಮಿಗೆ ಹೇಳಲ್ಪಡುವದೇನಂದರೆ--ನೀನು ಭಯಪಡಬೇಡ; ಚೀಯೋನೇ, ನಿನ್ನ ಕೈಗಳು ಬಲ ಹೀನವಾಗದಿರಲಿ. 17 ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು. 18 ಪರಿಶುದ್ಧ ಸಭೆಯ ವಿಷಯವಾಗಿ ವ್ಯಸನ ಪಡುವವರನ್ನು ನಾನು ಕೂಡಿಸುತ್ತೇನೆ; ಅವರು ನಿನ್ನವರೇ; ಅವರ ಮೇಲೆ ನಿಂದೆ ಭಾರವಾಗಿದೆ. 19 ಇಗೋ, ಆ ಕಾಲದಲ್ಲಿ ನಿನ್ನನ್ನು ಶ್ರಮೆ ಪಡಿಸುವವರನ್ನೆಲ್ಲಾ ತೀರಿಸಿಬಿಟ್ಟು, ಕುಂಟಾದ ದ್ದನ್ನು ರಕ್ಷಿಸಿ, ಹೊರಡಿಸಲ್ಪಟ್ಟವರನ್ನು ಕೂಡಿಸಿ, ಅವರಿಗೆ ನಾಚಿಕೆಯಾದ ದೇಶಗಳಲ್ಲೆಲ್ಲಾ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು. 20 ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ.
ಅಧ್ಯಾಯ 1 1 ಅರಸನಾದ ದಾರ್ಯಾವೆಷನ ಎರಡನೇ ವರುಷದ, ಆರನೇ ತಿಂಗಳಿನ ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಕೈಯಿಂದ ಯೆಹೂದದ ಅಧಿಪತಿಯಾದ ಶೆಯಲ್ತಿ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಉಂಟಾಯಿತು. 2 ಸೈನ್ಯಗಳ ಕರ್ತನು ಮಾತನಾಡಿ ಹೀಗೆ ಹೇಳುತ್ತಾನೆ, ಏನಂದರೆ--ಕಾಲವು ಅಂದರೆ ಕರ್ತನ ಆಲಯವನ್ನು ಕಟ್ಟುವ ಕಾಲವು ಬರಲಿಲ್ಲ ಎಂದು ಈ ಜನರು ಅನ್ನು ತ್ತಾರೆ. 3 ಆಗ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಉಂಟಾಯಿತು. ಏನಂದರೆ-- 4 ಈ ಮನೆ ಹಾಳಾಗಿರಲಾಗಿ ನೀವು ನಿಮ್ಮ ಚಿತ್ರ ಹಲಗೆಗಳುಳ್ಳ ಮನೆಗಳಲ್ಲಿ ವಾಸಮಾಡುವದಕ್ಕೆ ಇದು ನಿಮಗೆ ಸಮಯವೋ? 5 ಆದದರಿಂದ ಈಗ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ. 6 ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ. 7 ಸೈನ್ಯಗಳ ಕರ್ತನು ಹೇಳುವದೇನಂದರೆ -- ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ. 8 ಬೆಟ್ಟಕ್ಕೆ ಹೋಗಿ ಮರವನ್ನು ತಂದು ಮನೆಯನ್ನು ಕಟ್ಟಿರಿ; ಆಗ ನಾನು ಅದಕ್ಕೆ ಮೆಚ್ಚಿ ಮಹಿಮೆಯನ್ನು ಹೊಂದುವೆನೆಂದು ಕರ್ತನು ಹೇಳುತ್ತಾನೆ. 9 ಬಹಳ ಆಗಬೇಕೆಂದು ನಿರೀಕ್ಷಿ ಸಿದಿರಿ. ಆದರೆ ಇಗೋ, ಕೊಂಚವೇ ಆಯಿತು; ನೀವು ಅದನ್ನು ಮನೆಗೆ ತಂದಾಗ ನಾನು ಅದರ ಮೇಲೆ ಊದಿಬಿಟ್ಟೆನು. ಯಾತಕ್ಕೆ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ನನ್ನ ಆಲಯವು ಹಾಳಾಗಿ ರುವದರಿಂದ ನೀವು ನಿಮ್ಮ ನಿಮ್ಮ ಸ್ವಂತ ಮನೆಗಳಿಗೆ ಓಡಿ ಹೋಗುತ್ತೀರಲ್ಲಾ? 10 ಆದದರಿಂದ ನಿಮ್ಮ ನಿಮಿತ್ತವೇ ಆಕಾಶವು ಮಂಜನ್ನು ತಡೆಯುತ್ತದೆ; ಭೂಮಿಯು ತನ್ನ ಹುಟ್ಟುವಳಿಯನ್ನು ತಡೆದುಬಿಟ್ಟಿದೆ. 11 ಇದಲ್ಲದೆ ನಾನು ಭೂಮಿಯ ಮೇಲೆಯೂ ಬೆಟ್ಟಗಳ ಮೇಲೆಯೂ ಧಾನ್ಯದ ಮೇಲೆಯೂ ಹೊಸ ದ್ರಾಕ್ಷಾರಸದ ಮೇಲೆ ಯೂ ಎಣ್ಣೆಯ ಮೇಲೆಯೂ ಭೂಮಿ ಹುಟ್ಟುವಳಿಯ ಮೇಲೆಯೂ ಮನುಷ್ಯರ ಮೇಲೆಯೂ ದನಗಳ ಮೇಲೆಯೂ ಕೈ ಕಷ್ಟಗಳೆಲ್ಲಾದರ ಮೇಲೆಯೂ ಕ್ಷಾಮ ವನ್ನು ಕರೆದೆನು. 12 ಆಗ ಶೆಯಲ್ತೀಯೇಲನ ಮಗನಾದ ಜೆರುಬ್ಬಾ ಬೆಲನೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನೂ ಜನರಲ್ಲಿ ಉಳಿದವರೆ ಲ್ಲರೂ ತಮ್ಮ ದೇವರಾದ ಕರ್ತನ ಶಬ್ದವನ್ನೂ ತಮ್ಮ ದೇವರಾದ ಕರ್ತನು ಕಳುಹಿಸಿದ ಪ್ರವಾದಿಯಾದ ಹಗ್ಗಾಯನ ಮಾತುಗಳನ್ನೂ ಕೇಳಿದರು; ಜನರು ಕರ್ತ ನಿಗೆ ಭಯಪಟ್ಟರು. 13 ಆಗ ಕರ್ತನ ಸೇವಕನಾದ ಹಗ್ಗಾಯನು ಕರ್ತನ ಮಾತನ್ನು ಜನರಿಗೆ ತಂದು--ನಾನು ನಿಮ್ಮ ಸಂಗಡ ಇದ್ದೇನೆಂದು ಕರ್ತನು ಹೇಳು ತ್ತಾನೆ. 14 ಕರ್ತನು ಯೆಹೂದದ ಅಧಿಪತಿಯಾದ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನ ಆತ್ಮ ವನ್ನೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನ ಆತ್ಮವನ್ನೂ ಜನರಲ್ಲಿ ಉಳಿದವರೆಲ್ಲರ ಆತ್ಮವನ್ನೂ ಉದ್ರೇಕಿಸಿದ್ದರಿಂದ ಅವರು ಬಂದು ಅರಸನಾದ ದಾರ್ಯಾವೆಷನ ಎರಡನೆಯ ವರುಷದ ಆರನೆಯ ತಿಂಗಳಿನ ಇಪ್ಪತ್ತು ನಾಲ್ಕನೆಯ ದಿನದಲ್ಲಿ 15 ತಮ್ಮ ದೇವರಾದ ಸೈನ್ಯಗಳ ಕರ್ತನ ಆಲಯದಲ್ಲಿ ಬಂದು ಕೆಲಸ ಮಾಡಿದರು. ಅಧ್ಯಾಯ 2 1 ಏಳನೆಯ ತಿಂಗಳಿನಲ್ಲಿ, ತಿಂಗಳಿನ ಇಪ್ಪ ತ್ತೊಂದನೆಯ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಉಂಟಾಯಿತು; ಏನಂದರೆ-- 2 ಯೆಹೂದದ ಅಧಿಪತಿಯಾದ ಶೆಯಲ್ತೀ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಜನರಲ್ಲಿ ಉಳಿದವರಿಗೂ ನೀನು ಹೇಳತಕ್ಕದ್ದೇನಂದರೆ-- 3 ಈ ಆಲಯವನ್ನು ಅದರ ಪೂರ್ವದ ಮಹಿಮೆಯಲ್ಲಿ ನೋಡಿದವರೊಳಗೆ ಉಳಿದ ವರು ನಿಮ್ಮಲ್ಲಿ ಯಾರು? ಈಗ ಅದನ್ನು ಹೇಗೆ ನೋಡು ತ್ತೀರಿ? ಇದು ನಿಮ್ಮ ಕಣ್ಣುಗಳಿಗೆ ಅದರ ಹೋಲಿಕೆಯು ಏನೂ ಇಲ್ಲದ ಹಾಗೆ ತೋರು ತ್ತದಲ್ಲವೋ? 4 ಆದಾಗ್ಯೂ ಈಗ ಕರ್ತನು ಹೇಳುತ್ತಾನೆ --ಜೆರುಬ್ಬಾಬೆಲನೇ, ಬಲವಾಗಿರು; ಪ್ರಧಾನ ಯಾಜಕ ನಾದ ಯೆಹೋಚಾದಾಕನ ಮಗನಾದ ಯೆಹೋ ಶುವನೇ, ಬಲವಾಗಿರು; ದೇಶದ ಜನರೆಲ್ಲರೇ, ಬಲ ವಾಗಿರ್ರಿ ಎಂದು ಕರ್ತನು ಹೇಳುತ್ತಾನೆ; ಕೆಲಸ ಮಾಡಿರಿ; ನಾನು ನಿಮ್ಮ ಸಂಗಡ ಇದ್ದೇನೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ. 5 ನೀವು ಐಗುಪ್ತದೊಳ ಗಿಂದ ಹೊರಗೆ ಬಂದಾಗ ನಾನು ನಿಮ್ಮ ಸಂಗಡ ಒಡಂಬಡಿಕೆ ಮಾಡಿದ ವಾಕ್ಯದ ಪ್ರಕಾರ ನನ್ನ ಆತ್ಮವು ನಿಮ್ಮ ಮಧ್ಯದಲ್ಲಿ ನಿಲ್ಲುತ್ತದೆ; ನೀವು ಭಯಪಡ ಬೇಡಿರಿ. 6 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ, ಇನ್ನು ಒಂದು ಸಾರಿ ಕೊಂಚ ಕಾಲವಾದ ಮೇಲೆ ನಾನು ಆಕಾಶಗಳನ್ನೂ ಭೂಮಿಯನ್ನೂ ಸಮುದ್ರ ವನ್ನೂ ಒಣಗಿದ ನೆಲವನ್ನೂ ಕದಲಿಸುತ್ತೇನೆ. 7 ಎಲ್ಲಾ ಜನಾಂಗಗಳನ್ನು ಅದುರಿಸುತ್ತೇನೆ; ಎಲ್ಲಾ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. 8 ಬೆಳ್ಳಿಯು ನನ್ನದು, ಚಿನ್ನವು ನನ್ನದು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. 9 ಈ ಆಲಯದ ಮುಂದಿನ ಮಹಿಮೆಯು ಹಿಂದಿನ ಮಹಿಮೆಗಿಂತ ವಿಶೇಷವಾಗಿರುವದು ಎಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಈ ಸ್ಥಳದಲ್ಲಿ ಸಮಾಧಾನ ಕೊಡುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. 10 ದಾರ್ಯಾವೆಷನ ಎರಡನೇ ವರುಷದಲ್ಲಿ ಒಂಭ ತ್ತನೇ ತಿಂಗಳಿನ, ಇಪ್ಪತ್ತನಾಲ್ಕನೆ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನಿಂದ ಉಂಟಾಗಿ ಹೇಳಿದ್ದೇನಂದರೆ, 11 ಸೈನ್ಯಗಳ ಕರ್ತನು ಹೇಳುವದೇ ನಂದರೆ--ನ್ಯಾಯಪ್ರಮಾಣದ ವಿಷಯವಾಗಿ ಯಾಜಕ ರಿಗೆ-- 12 ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಪರಿಶುದ್ಧ ಮಾಂಸವನ್ನು ಹೊತ್ತು, ತನ್ನ ಸೆರಗಿನಿಂದ ರೊಟ್ಟಿಯ ನ್ನಾದರೂ ಬೇಯಿಸಿದ್ದನ್ನಾದರೂ ದ್ರಾಕ್ಷಾರಸವನ್ನಾ ದರೂ ಎಣ್ಣೆಯನ್ನಾದರೂ ಯಾವ ವಿಧದ ಆಹಾರವ ನ್ನಾದರೂ ಮುಟ್ಟಿದರೆ ಅದು ಪರಿಶುದ್ಧವಾಗುವದೋ ಕೇಳು ಅಂದನು. ಯಾಜಕರು--ಇಲ್ಲವೆಂದು ಉತ್ತರ ಕೊಟ್ಟರು. 13 ಆಗ ಹಗ್ಗಾಯನು--ಆದರೆ ಹೆಣದಿಂದ ಅಶುದ್ಧನಾದವನು, ಇವುಗಳಲ್ಲಿ ಯಾವದನ್ನಾದರೂ ಮುಟ್ಟಿದರೆ, ಅಶುದ್ಧವಾಗುವದೋ ಅಂದನು. ಯಾಜ ಕರು ಉತ್ತರ ಕೊಟ್ಟು--ಅಶುದ್ದವಾಗುವದು ಅಂದರು. 14 ಆಗ ಹಗ್ಗಾಯನು ಉತ್ತರಕೊಟ್ಟು ಹೇಳಿದ್ದೇನಂದರೆ --ಈ ಜನರೂ ಈ ಜನಾಂಗವೂ ನನ್ನ ಮುಂದೆ ಹೀಗೆಯೇ ಇದ್ದಾರೆ ಎಂದು ಕರ್ತನು ಅನ್ನುತ್ತಾನೆ; ಅವರ ಕೈಕೆಲಸಗಳೆಲ್ಲಾ ಹೀಗೆಯೇ; ಅವರು ಅರ್ಪಿಸು ವಂಥದ್ದು ಅಶುದ್ಧವೇ. 15 ಈಗ ಚೆನ್ನಾಗಿ ಯೋಚಿಸಿ ಕೊಳ್ಳಿರಿ; ಇಂದಿನಿಂದ ಇದಕ್ಕೆ ಮುಂಚೆ ಕರ್ತನ ಆಲಯದಲ್ಲಿ ಕಲ್ಲಿನ ಮೇಲೆ ಕಲ್ಲು ಇಡಲ್ಪಡುವದಕ್ಕಿಂತ ಕ್ಷಿುುಂಚೆ 16 ಆ ದಿವಸಗಳು ಇದ್ದದ್ದು ಮೊದಲುಗೊಂಡು ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ ಹತ್ತು ಸೇರು ಮಾತ್ರವಾಗಿತ್ತು; ಒಬ್ಬನು ಐವತ್ತು ಪಾತ್ರೆಗಳನ್ನು ತುಂಬಿ ಸುವದಕ್ಕೆ ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆ ಯುತ್ತಿತ್ತಷ್ಟೆ. 17 ನಾನು ನಿಮ್ಮನ್ನು ಸಸ್ಯ ನಾಶದಿಂದಲೂ ಬಿರುಗಾಳಿಯಿಂದಲೂ ಕಲ್ಮಳೆಯಿಂದಲೂ ನಿಮ್ಮ ಕೈ ದುಡಿತಗಳನ್ನೆಲ್ಲಾ ಹೊಡೆದೆನು; ಅದರೂ ನೀವು ನನ್ನ ಕಡೆಗೆ ತಿರುಗಲಿಲ್ಲವೆಂದು ಕರ್ತನು ಅನ್ನುತ್ತಾನೆ. 18 ಚೆನ್ನಾಗಿ ಯೋಚಿಸಿಕೊಳ್ಳಿರಿ; ಇಂದಿನಿಂದ ಇದಕ್ಕೆ ಮುಂಚೆ ಒಂಭತ್ತನೇ ತಿಂಗಳಿನ ಇಪ್ಪತ್ತ ನಾಲ್ಕನೆಯ ದಿನದಲ್ಲಿ ಕರ್ತನ ಮಂದಿರದ ಅಸ್ತಿವಾರವು ಹಾಕಲ್ಪ ಟ್ಟಂದಿನಿಂದ ಯೋಚಿಸಿ ಕೊಳ್ಳಿರಿ. 19 ಬೀಜವು ಇನ್ನು ಕಣಜದಲ್ಲಿ ಉಂಟೋ? ಮತ್ತು ದ್ರಾಕ್ಷೆ, ಅಂಜೂರ, ದಾಳಿಂಬರ, ಎಣ್ಣೆ ಮರಗಳು ಇನ್ನು ಫಲಿಸಲಿಲ್ಲ ವಲ್ಲಾ. ಈ ದಿನವು ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು. 20 ಎರಡನೇ ಸಾರಿ ಕರ್ತನ ವಾಕ್ಯವು ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಹಗ್ಗಾಯನಿಗೆ ಉಂಟಾ ಯಿತು. 21 ಹೇಗಂದರೆ, ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೆ ನೀನು ಹೇಳತಕ್ಕದ್ದೇನಂದರೆ--ನಾನು ಆಕಾಶಗಳನ್ನೂ ಭೂಮಿಯನ್ನೂ ಕದಲಿಸುವೆನು. 22 ರಾಜ್ಯಗಳ ಸಿಂಹಾಸನವನ್ನು ಕೆಡವಿಹಾಕುವೆನು; ಅನ್ಯ ಜನಾಂಗಗಳ ರಾಜ್ಯಗಳ ಬಲವನ್ನು ನಾಶಮಾಡುವೆನು, ರಥಗಳನ್ನೂ ಅವುಗಳಲ್ಲಿ ಸವಾರಿ ಮಾಡುವವರನ್ನೂ ಕೆಡವಿಹಾಕುವೆನು; ಕುದುರೆಗಳೂ ಅದರ ಸವಾರರೂ ಪ್ರತಿಯೊಬ್ಬನೂ ತನ್ನ ಸಹೋದರನ ಕತ್ತಿಯಿಂದ ಬೀಳು ವನು.
23 ಸೈನ್ಯಗಳ ಕರ್ತನು ಅನ್ನುತ್ತಾನೆ--ಆ ದಿನದಲ್ಲಿ ಶೆಯಲ್ತೀಯೇಲನ ಮಗನಾದ ನನ್ನ ಸೇವಕನಾದ ಜೆರು ಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದು ಕೊಂಡು ಮುದ್ರೆಯ ಹಾಗೆ ಇಡುವೆನು; ನಿನ್ನನ್ನು ನಾನೇ ಆದುಕೊಂಡಿದ್ದೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
ಅಧ್ಯಾಯ 1 1 ದಾರ್ಯಾವೆಷನ ಎರಡನೆಯ ವರುಷದ ಎಂಟನೆಯ ತಿಂಗಳಲ್ಲಿ ಕರ್ತನ ವಾಕ್ಯವು ಇದ್ದೋನನ ಮಗನಾದ ಬೆರಕ್ಯನ ಮಗನಾದ ಜೆಕರ್ಯ ನೆಂಬ ಪ್ರವಾದಿಗೆ ಉಂಟಾಯಿತು. ಹೇಗಂದರೆ-- 2 ಕರ್ತನು ನಿಮ್ಮ ಪಿತೃಗಳ ಮೇಲೆ ಬಹು ಕೋಪಗೊಂಡಿ ದ್ದಾನೆ. 3 ಆದದರಿಂದ ನೀನು ಅವರಿಗೆ ಹೇಳತಕ್ಕದ್ದೇ ನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕಡೆಗೆ ತಿರುಗಿ ಕೊಳ್ಳಿರಿ, ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. 4 ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ. 5 ನಿಮ್ಮ ಪಿತೃ ಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ? 6 ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು. 7 ದಾರ್ಯಾವೆಷನ ಎರಡನೆಯ ವರುಷದ ಹನ್ನೊಂ ದನೆ ತಿಂಗಳಾದ ಶೆಬಾಟ್ ಎಂಬ ತಿಂಗಳಿನ ಇಪ್ಪತ್ತ ನಾಲ್ಕನೆಯ ದಿನದಲ್ಲಿ ಕರ್ತನ ವಾಕ್ಯವು ಇದ್ದೋನಿನ ಮಗನಾದ ಬೆರೆಕ್ಯನ ಮಗನಾದ ಪ್ರವಾದಿಯಾದ ಜೆಕರ್ಯನಿಗೆ ಉಂಟಾಯಿತು. ಹೇಗೆಂದರೆ, 8 ನಾನು ರಾತ್ರಿಯಲ್ಲಿ ನೋಡಿದಾಗ ಇಗೋ, ಕೆಂಪು ಕುದುರೆಯ ಮೇಲೆ ಸವಾರಿ ಮಾಡುವ ಒಬ್ಬ ಮನುಷ್ಯನು; ಅವನು ತಗ್ಗಿನಲ್ಲಿದ್ದ ಗಂಧದ ಗಿಡಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು ಕಪಿಲ ಬಿಳೀ ಕುದುರೆಗಳು ಇದ್ದವು. 9 ಆಗ ನಾನು--ಓ ನನ್ನ ಒಡೆಯನೇ, ಇವೇನು ಅಂದೆನು. ಆಗ ನನ್ನ ಸಂಗಡ ಮಾತನಾಡಿದ ದೂತ ನು--ಇವೇನೆಂದು ನಿನಗೆ ತೋರಿಸುತ್ತೇನೆ ಅಂದೆನು. 10 ಆಗ ಗಂಧದ ಗಿಡಗಳ ನಡುವೆ ನಿಂತ ಮನುಷ್ಯನು ಉತ್ತರಕೊಟ್ಟು ಹೇಳಿದ್ದೇನಂದರೆ--ಇವರು ಭೂಮಿ ಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ನಡೆದಾಡುವದಕ್ಕೆ ಕರ್ತನು ಕಳುಹಿಸಿದವರು ಅಂದನು. 11 ಆಗ ಅವರು ಗಂಧದ ಗಿಡಗಳ ನಡುವೆ ನಿಂತ ಕರ್ತನ ದೂತನಿಗೆ ಉತ್ತರಕೊಟ್ಟು ಹೇಳಿದ್ದೇನಂದರೆ -- ಭೂಮಿಯಲ್ಲಿ ಇತ್ತಿಂದ ಅತ್ತ ಅತ್ತಿಂದ ಇತ್ತ ನಡೆದಾಡಿದ್ದೇವೆ; ಇಗೋ, ಭೂಮಿಯೆಲ್ಲಾ ಸುಮ್ಮನಿದ್ದು ಶಾಂತಿಯಾಗಿದೆ ಅಂದರು. 12 ಆಗ ಕರ್ತನ ದೂತನು ಉತ್ತರಕೊಟ್ಟು ಹೀಗಂ ದನು--ಓ ಸೈನ್ಯಗಳ ಕರ್ತನೇ, ನೀನು ಯೆರೂಸಲೇ ಮನ್ನೂ ಯೆಹೂದದ ಪಟ್ಟಣಗಳನ್ನೂ ಎಷ್ಟರ ವರೆಗೆ ಕನಿಕರಿಸದೆ ಇರುವಿ? ಅವುಗಳ ಮೇಲೆ ಈ ಎಪ್ಪತ್ತು ವರುಷಗಳು ಸಿಟ್ಟು ಮಾಡಿದ್ದೀಯಲ್ಲವೋ ಅಂದನು. 13 ಆಗ ಕರ್ತನು ನನ್ನ ಸಂಗಡ ಮಾತನಾಡಿದ ದೂತನಿಗೆ ಒಳ್ಳೇ ಮಾತುಗಳಿಂದಲೂ ಆದರಣೆಯ ಮಾತು ಗಳಿಂದಲೂ ಉತ್ತರಕೊಟ್ಟನು. 14 ನನ್ನ ಸಂಗಡ ಮಾತ ನಾಡಿದ ದೂತನು ನನಗೆ ಹೇಳಿದ್ದೇನಂದರೆ--ಕೂಗಿ ಹೇಳು; ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾನು ಯೆರೂಸಲೇಮಿಗಾಗಿಯೂ ಚೀಯೋನಿ ಗಾಗಿಯೂ ಬಹುರೋಷವುಳ್ಳವನಾಗಿದ್ದೇನೆ. 15 ನಿಶ್ಚಿಂತೆ ಯುಳ್ಳವರಾಗಿರುವ ಅನ್ಯಜನಾಂಗದ ಮೇಲೆ ನಾನು ಬಹಳ ಕೋಪಿಸಿಕೊಂಡಿದ್ದೇನೆ. ನಾನು ಸ್ವಲ್ಪ ಕೋಪ ಮಾಡಿಕೊಂಡಾಗ ಅವರು ಸಂಕಟಕ್ಕೆ ಸಹಾಯಮಾಡಿ ದರು. 16 ಆದದರಿಂದ ಕರ್ತನು ಹೀಗೆ ಹೇಳುತ್ತಾನೆ --ನಾನು ಕನಿಕರದಿಂದ ಯೆರೂಸಲೇಮಿನ ಕಡೆಗೆ ತಿರುಗಿಕೊಂಡಿದ್ದೇನೆ; ನನ್ನ ಆಲಯವು ಅದರಲ್ಲಿ ಕಟ್ಟ ಲ್ಪಡುವದೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಯೆರೂ ಸಲೇಮಿನ ಮೇಲೆ ಅಳತೆ ನೂಲು ಚಾಚಲ್ಪಡುವದು. 17 ಇನ್ನೂ ಕೂಗಿ ಹೇಳು, ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಪಟ್ಟಣಗಳು ಇನ್ನು ಅಭಿವೃದ್ಧಿಯಾಗಿ ಹರಡುವವು; ಕರ್ತನು ಚೀಯೋನನ್ನು ಇನ್ನು ಆದರಿಸುವನು; ಯೆರೂಸಲೇಮನ್ನು ಇನ್ನು ಆದುಕೊಳ್ಳುವನು. 18 ನಾನು ನನ್ನ ಕಣ್ಣುಗಳನ್ನು ಎತ್ತಿದಾಗ ಇಗೋ, ನಾಲ್ಕು ಕೊಂಬುಗಳನ್ನು ನೋಡಿದೆನು. 19 ಆಗ ನನ್ನ ಕೂಡ ಮಾತನಾಡಿದ ದೂತನಿಗೆ ನಾನು--ಇದೇನು ಅಂದೆನು. ಅದಕ್ಕೆ ಅವನು ನನಗೆ ಉತ್ತರಕೊಟ್ಟು--ಇವು ಯೆಹೂದವನ್ನೂ ಇಸ್ರಾಯೇಲನ್ನೂ ಯೆರೂಸ ಲೇಮನ್ನೂ ಚದರಿಸಿದ ಕೊಂಬುಗಳು ಅಂದನು. 20 ಆಗ ಕರ್ತನು ನನಗೆ ನಾಲ್ಕು ಬಡಗಿಯವರನ್ನು ತೋರಿಸಿದನು. 21 ಆಗ ನಾನು--ಇವರು ಏನು ಮಾಡುವದಕ್ಕೆ ಬರುತ್ತಾರೆ ಅಂದೆನು. ಅದಕ್ಕೆ ಆತನು ಮಾತನಾಡಿ ಹೇಳಿದ್ದೇನಂದರೆ--ಯಾವನಾದರೂ ತಲೆಯನ್ನು ಎತ್ತದ ಹಾಗೆ ಯೆಹೂದವನ್ನು ಚದರಿಸಿದ ಕೊಂಬುಗಳು. ಆದರೆ ಇವರು ಅವರನ್ನು ಹೆದರಿಸಿ ಯೆಹೂದ ದೇಶದ ಮೇಲೆ ಅದನ್ನು ಚದರಿಸುವದಕ್ಕೆ ಕೊಂಬನ್ನು ಎತ್ತಿದ ಅನ್ಯಜನಾಂಗಗಳ ಕೊಂಬುಗಳನ್ನು ಕೆಳಗೆ ಹಾಕುವದಕ್ಕೆ ಬಂದಿದ್ದಾರೆ ಅಂದನು. ಅಧ್ಯಾಯ 2 1 ತಿರುಗಿ ನನ್ನ ಕಣ್ಣುಗಳನ್ನೆತ್ತಿ ನೋಡಲು ಇಗೋ, ತನ್ನ ಕೈಯಲ್ಲಿ ಅಳೆಯುವ ನೂಲಿದ್ದ ಒಬ್ಬ ಮನುಷ್ಯನನ್ನು ಕಂಡೆನು. 2 ಆಗ ನಾನು--ನೀನು ಎಲ್ಲಿಗೆ ಹೋಗುತ್ತೀ ಅಂದೆನು; ಅದಕ್ಕವನು ನನಗೆ--ಯೆರೂಸಲೇಮನ್ನು ಅಳತೆಮಾಡಿ ಅದರ ಅಗಲವೆಷ್ಟು ಅದರ ಉದ್ದವೆಷ್ಟು ಎಂದು ನೋಡುವದಕ್ಕೆ ಬಂದಿದ್ದಾರೆ ಅಂದನು. 3 ಇಗೋ, ನನ್ನ ಸಂಗಡ ಮಾತನಾಡಿದ ದೂತನು ಹೊರಟನು; ಇನ್ನೊಬ್ಬ ದೂತನು ಅವನನ್ನು ಎದುರುಗೊಳ್ಳುವದಕ್ಕೆ ಹೊರಟನು. 4 ಇವನು ಅವನಿಗೆ ಹೀಗಂದನು--ಓಡಿಹೋಗಿ ಈ ಯೌವನಸ್ಥನಿಗೆ ಹೀಗೆ ಹೇಳು, ಏನಂದರೆ--ಯೆರೂಸಲೇಮು ಅದರಲ್ಲಿರುವ ಮನು ಷ್ಯರ ಮತ್ತು ದನಗಳ ಸಂಖ್ಯೆ ಹೆಚ್ಚಾದದ್ದರಿಂದ ಗೋಡೆ ಇಲ್ಲದ ಊರುಗಳಂತೆ ನಿವಾಸವಾಗುವದು. 5 ಯಾಕಂ ದರೆ ನಾನು ಅದರ ಸುತ್ತಲೂ ಬೆಂಕಿಯ ಗೋಡೆಯಾ ಗಿಯೂ ಅದರ ಮಧ್ಯದಲ್ಲಿ ಮಹಿಮೆಯಾಗಿಯೂ ಇರುವೆನೆಂದು ಕರ್ತನು ಅನ್ನುತ್ತಾನೆ. 6 ಓಹೋ, ನೀವು ಹೊರಗೆ ಬಂದು ಉತ್ತರ ದೇಶ ದಿಂದ ಓಡಿಹೋಗಿರಿ; ಆಕಾಶದ ನಾಲ್ಕು ದಿಕ್ಕುಗಳಂತೆ ನಿಮ್ಮನ್ನು ಚದರಿಸಿದ್ದೇನೆಂದು ಕರ್ತನು ಅನ್ನುತ್ತಾನೆ. 7 ಓ ಚೀಯೋನೇ, ಬಾಬೆಲಿನ ಮಗಳ ಬಳಿಯಲ್ಲಿ ವಾಸವಾಗಿರುವವಳೇ, ತಪ್ಪಿಸಿಕೋ. 8 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ. 9 ಇಗೋ, ನಾನು ನನ್ನ ಕೈಯನ್ನು ಅವರ ಮೇಲೆ ಜಾಡಿಸುತ್ತೇನೆ; ಆಗ ಅವರು ತಮ್ಮ ದಾಸರಿಗೆ ಕೊಳ್ಳೆಯಾಗುವರು; ಸೈನ್ಯಗಳ ಕರ್ತನು ನನ್ನನ್ನು ಕಳುಹಿಸಿದನೆಂದು ನೀವು ತಿಳಿಯುವಿರಿ. 10 ಚೀಯೋನ್ ಕುಮಾರ್ತೆಯೇ, ಹಾಡಿ ಹರ್ಷಿಸು. ಇಗೋ, ನಾನು ಬಂದು ನಿನ್ನ ಮಧ್ಯದಲ್ಲಿ ವಾಸವಾಗಿರುವೆನೆಂದು ಕರ್ತನು ಅನ್ನುತ್ತಾನೆ. 11 ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ. 12 ಇದಲ್ಲದೆ ಕರ್ತನು ತನ್ನ ಭಾಗವಾದ ಯೆಹೂದವನ್ನು ಪರಿಶುದ್ಧ ದೇಶದಲ್ಲಿ ಸ್ವಾಸ್ತ್ಯವಾಗಿ ಹೊಂದುವನು. ಯೆರೂಸಲೇಮನ್ನು ತಿರುಗಿ ಆದು ಕೊಳ್ಳುವನು.
13 ಓ ಮನುಷ್ಯರೇ, ನೀವೆಲ್ಲಾ ಕರ್ತನ ಮುಂದೆ ಮೌನ ವಾಗಿರ್ರಿ; ಆತನು ತನ್ನ ಪರಿಶುದ್ಧ ನಿವಾಸದೊಳಗಿಂದ ಎದ್ದಿದ್ದಾನೆ. ಅಧ್ಯಾಯ 3 1 ಇದಲ್ಲದೆ ಆತನು ನನಗೆ--ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು. 2 ಆಗ ಕರ್ತನ ದೂತನು ಸೈತಾನನಿಗೆ--ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು. 3 ಯೆಹೋಶು ವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವ ನಾಗಿ ದೂತನ ಮುಂದೆ ನಿಂತನು. 4 ಆಗ ಅವನು ಉತ್ತರಕೊಟ್ಟು ತನ್ನ ಮುಂದೆ ನಿಂತವರಿಗೆ--ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದು ಹಾಕಿರಿ ಅಂದನು. ಅವನಿಗೆ--ಇಗೋ, ನಿನ್ನ ಅಕ್ರಮವು ನಿನ್ನನ್ನು ಬಿಟ್ಟುಹೋಗುವಂತೆ ಮಾಡಿದ್ದೇನೆ; ಬದಲು ವಸ್ತ್ರಗಳನ್ನು ನಿನಗೆ ತೊಡಿಸುವೆನು ಅಂದನು. 5 ಆಗ ನಾನು--ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಡಿರಿ ಅಂದೆನು. ಆಗ ಅವರು ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು ಅವನಿಗೆ ನಿಲು ವಂಗಿಗಳನ್ನು ತೊಡಿಸಿದರು; ಕರ್ತನ ದೂತನು ಪಕ್ಕ ದಲ್ಲಿ ನಿಂತಿದ್ದನು. 6 ಆಗ ಕರ್ತನ ದೂತನು ಯೆಹೋ ಶುವನಿಗೆ ಸಾಕ್ಷಿ ಕೊಟ್ಟದ್ದೇನಂದರೆ-- 7 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನ ಮಾರ್ಗಗಳಲ್ಲಿ ನಡೆದು ನನ್ನ ಆಜ್ಞೆಯನ್ನು ಕೈಕೋ, ಆಗ ನೀನು ನನ್ನ ಮನೆಗೂ ನ್ಯಾಯತೀರಿಸಿ ನನ್ನ ಅಂಗಳಗಳನ್ನೂ ಕಾಯುವಿ; ಇಲ್ಲಿ ನಿಂತವರ ಬಳಿಯಲ್ಲಿ ನಡೆದಾಡುವ ನಿನಗೆ ಸ್ಥಳಗಳನ್ನು ಕೊಡುವೆನು. 8 ಪ್ರಧಾನ ಯಾಜಕ ನಾದ ಓ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ; ಅವರು ಆಶ್ಚರ್ಯವನ್ನುಂಟು ಮಾಡುವ ಮನುಷ್ಯರಾಗಿ ದ್ದಾರೆ; ಇಗೋ, ನಾನು ಕೊಂಬೆಯೆಂಬ ನನ್ನ ಸೇವಕ ನನ್ನು ಬರಮಾಡುವೆನು. 9 ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವವು; ಇಗೋ, ನಾನು ಅದರ ಕೆತ್ತನೆಯಿಂದ ಕೆತ್ತುವೆನು; ಆ ದೇಶದ ಅಪರಾಧ ವನ್ನು ಒಂದೇ ದಿನದಲ್ಲಿ ತೊಲಗಿಸುವೆನು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
10 ಆ ದಿನದಲ್ಲಿ ನೀವು ನಿಮ್ಮ ನಿಮ್ಮ ನೆರೆಯವರನ್ನು ದ್ರಾಕ್ಷೇಬಳ್ಳಿಯ ಕೆಳಗೂ ಅಂಜೂರ ಮರದ ಕೆಳಗೂ ಕರೆಯುವಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ಅಧ್ಯಾಯ 4 1 ಇದಲ್ಲದೆ ನನ್ನ ಸಂಗಡ ಮಾತನಾಡಿದ ದೂತನು ತಿರಿಗಿ ಬಂದು 2 ಒಬ್ಬನನ್ನು ನಿದ್ರೆಯಿಂದ ಎಬ್ಬಿಸುವಂತೆ ನನ್ನನ್ನು ಎಬ್ಬಿಸಿದನು. ಆಗ ಅವನು ನನಗೆ--ನೀನು ಏನು ನೋಡುತ್ತೀ ಅಂದನು. ಅದಕ್ಕೆ--ನಾನು ನೋಡಿದ್ದೇನೆ; ಇಗೋ, ಒಂದು ದೀಪಸ್ತಂಭವು, ಅದು ಎಲ್ಲಾ ಬಂಗಾರದ್ದೇ; ಅದರ ತಲೆಯ ಮೇಲೆ ಪಾತ್ರೆ ಉಂಟು; ಅದರ ಮೇಲೆ ಅದರ ಏಳು ದೀಪಗಳುಂಟು. 3 ಅದರ ತಲೆಯ ಮೇಲಿರುವ ಏಳು ದೀಪಗಳಿಗೆ ಏಳು ಕೊಳವೆಗಳುಂಟು, ಅದರ ಬಳಿಯಲ್ಲಿ ಎರಡು ಇಪ್ಪೇಮರಗಳು, ಪಾತ್ರೆಯ ಬಲಗಡೆಯಲ್ಲಿ ಒಂದೂ ಪಾತ್ರೆಯ ಎಡಗಡೆಯಲ್ಲಿ ಒಂದೂ ಉಂಟು ಅಂದೆನು. 4 ಹೀಗೆ ನಾನು ಉತ್ತರ ಕೊಟ್ಟು ನನ್ನ ಸಂಗಡ ಮಾತನಾಡಿದ ದೂತನಿಗೆ --ನನ್ನ ಒಡೆಯನೇ, ಇವೇನು ಅಂದೆನು. 5 ಆಗ ನನ್ನ ಸಂಗಡ ಮಾತನಾಡಿದ ದೂತನು ಉತ್ತರ ಕೊಟ್ಟು ನನಗೆ--ಇವೇನೆಂದು ಅರಿಯುವದಿಲ್ಲವೋ ಅಂದನು. 6 ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. 7 ಓ ಮಹಾ ಬೆಟ್ಟವೇ, ನೀನ್ಯಾರು? ಜೆರುಬ್ಬಾಬೆಲನ ಮುಂದೆ ಬೈಲಾಗುವಿ; ಅದಕ್ಕೆ--ಕೃಪೆಯೇ, ಕೃಪೆಯೇ ಎಂದು ಅರ್ಭಟಗಳ ಸಂಗಡ ಮುಖ್ಯ ಕಲ್ಲನ್ನು ಅವನು ಹೊರಗೆ ತರುವನು. 8 ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಯಿತು. ಹೇಗಂದರೆ-- 9 ಜೆರುಬ್ಬಾಬೆಲನ ಕೈಗಳು ಈ ಮನೆಯ ಅಸ್ತಿವಾರವನ್ನು ಹಾಕಿವೆ, ಅವನ ಕೈಗಳು ಸಹ ಅದನ್ನು ಪೂರೈಸುವವು; ಸೈನ್ಯಗಳ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ತಿಳಿಯುವಿರಿ. 10 ಸಣ್ಣ ಕಾರ್ಯಗಳ ದಿನವನ್ನು ತಿರಸ್ಕರಿಸಿದವನ್ಯಾರು? ಆ ಏಳು ಅಂದರೆ ಭೂಮಿಯಲ್ಲೆಲ್ಲಾ ಅತ್ತಿತ್ತ ಓಡಾಡುವ ಕರ್ತನ ಕಣ್ಣುಗಳು ನೂಲು ಗುಂಡನ್ನು ಜೆರುಬ್ಬಾಬೆಲನ ಕೈಯಲ್ಲಿ ನೋಡುವಾಗ ಸಂತೋಷಪಡುತ್ತವೆ. 11 ಆಗ ನಾನು ಉತ್ತರ ಕೊಟ್ಟು ಅವನಿಗೆ--ದೀಪಸ್ತಂಭದ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ಇರುವ ಈ ಎರಡು ಇಪ್ಪೇಮರಗಳು ಏನು ಅಂದೆನು. 12 ನಾನು ಎರಡನೇ ಸಾರಿ ಉತ್ತರ ಕೊಟ್ಟು ಅವನಿಗೆ--ಎರಡು ಚಿನ್ನದ ನಾಳಗಳಿಂದ ಚಿನ್ನದಂಥಹ ಎಣ್ಣೆಯನ್ನು ತಮ್ಮೊಳ ಗಿಂದ ಸುರಿಯುವ ಈ ಎರಡು ಇಪ್ಪೇ ಕೊಂಬೆಗಳು ಏನು ಅಂದೆನು. 13 ಅವನು ನನಗೆ--ಇವು ಏನೆಂದು ಅರಿಯು ವದಿಲ್ಲವೋ ಅಂದನು.
14 ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು--ಸಮಸ್ತ ಭೂಮಿಯ ಕರ್ತನ ಬಳಿಯಲ್ಲಿ ನಿಲ್ಲುವ ಇಬ್ಬರು ಅಭಿಷೇಕಿಸಲ್ಪಟ್ಟವರು ಇವರೇ ಅಂದನು. ಅಧ್ಯಾಯ 5 1 ಆಗ ನಾನು ತಿರಿಗಿಕೊಂಡು ನನ್ನ ಕಣ್ಣು ಗಳನ್ನೆತ್ತಿ ನೋಡಲು ಇಗೋ, ಹಾರುವ ಸುರಳಿ. 2 ಆಗ ಅವನು ನನಗೆ--ಏನು ನೋಡುತ್ತೀ ಅಂದಾಗ ನಾನು--ಹಾರುವ ಸುರಳಿಯನ್ನು ನೋಡು ತ್ತೇನೆ; ಅದರ ಉದ್ದವು ಇಪ್ಪತ್ತು ಮೊಳಗಳಾಗಿಯೂ ಅದರ ಅಗಲವು ಹತ್ತು ಮೊಳಗಳಾಗಿಯೂ ಇದೆ ಅಂದೆನು. 3 ಆಗ ಅವನು ನನಗೆ ಹೇಳಿದ್ದೇನಂದರೆ--ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು. 4 ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು. 5 ಆಗ ನನ್ನ ಸಂಗಡ ಮಾತನಾಡಿದ ದೂತನು ಹೊರಟು--ನಿನ್ನ ಕಣ್ಣುಗಳನ್ನೆತ್ತಿ ಹೊರಡುವಂಥದ್ದು ಏನೆಂದು ನೋಡು ಎಂದು ನನಗೆ ಹೇಳಿದನು. 6 ನಾನು --ಇದೇನು ಅಂದಾಗ ಅವನು--ಇದು ಹೊರಡು ವಂಥ ಎಫವು ಅಂದನು; ಇದಲ್ಲದೆ ಅವನು--ಇದೇ ಸಮಸ್ತ ಭೂಮಿಯಲ್ಲಿ ಅವರ ಹೋಲಿಕೆ ಅಂದನು. 7 ಇಗೋ, ಸೀಸದ ಮಣವು ಎತ್ತಲ್ಪಟ್ಟಿತು; ಎಫದ ಮಧ್ಯದಲ್ಲಿ ಒಬ್ಬ ಸ್ತ್ರೀ ಕೂತುಕೊಂಡಿದ್ದಳು. ಆಗ ಅವನು --ಇದು ದುಷ್ಟತ್ವವು ಎಂತಂದು 8 ಅವಳನ್ನು ಎಫದ ಮಧ್ಯದಲ್ಲಿ ಹಾಕಿ ಆ ನೂಲಿನ ಸೀಸದ ಭಾರವನ್ನು ಅದರ ಬಾಯಿಯ ಮೇಲೆ ಇಟ್ಟನು. 9 ಆಗ ನಾನು ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ಇಬ್ಬರು ಸ್ತ್ರೀಯರು ಹೊರಟರು; ಅವರ ರೆಕ್ಕೆಗಳಲ್ಲಿ ಗಾಳಿ ಇತ್ತು; ಹೌದು, ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು; ಅವರು ಎಫವನ್ನು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿ ಎತ್ತಿದರು. 10 ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ--ಇವರು ಎಫವನ್ನು ಎಲ್ಲಿಗೆ ಹೊತ್ತು ಕ್ಕೊಂಡು ಹೋಗುತ್ತಾರೆ ಅಂದೆನು.
11 ಅವನು ನನಗೆ --ಶಿನಾರ್ ದೇಶದಲ್ಲಿ ಅದಕ್ಕೆ ಮನೆ ಕಟ್ಟುವದಕ್ಕಾಗಿ ತಕ್ಕೊಂಡು ಹೋಗುತ್ತಾರೆ; ಅಲ್ಲಿ ಅದು ಸ್ಥಾಪಿಸಲ್ಪಟ್ಟು ತನ್ನ ಸ್ಥಾನದಲ್ಲಿ ಇರಿಸಲ್ಪಡುವದು ಅಂದನು. ಅಧ್ಯಾಯ 6 1 ನಾನು ತಿರುಗಿಕೊಂಡು ನನ್ನ ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ನಾಲ್ಕು ರಥಗಳು ಎರಡು ಬೆಟ್ಟಗಳ ನಡುವೆಯಿಂದ ಹೊರಟುಬಂದವು; ಆ ಬೆಟ್ಟಗಳು ಹಿತ್ತಾಳೆಯ ಬೆಟ್ಟಗಳಾಗಿದ್ದವು. 2 ಮೊದಲನೇ ರಥಕ್ಕೆ ಕೆಂಪು ಕುದುರೆಗಳಿದ್ದವು; ಎರಡನೇ ರಥಕ್ಕೆ ಕಪ್ಪು ಕುದುರೆಗಳು; 3 ಮೂರನೇ ರಥಕ್ಕೆ ಬಿಳಿ ಕುದುರೆಗಳು; ನಾಲ್ಕನೇ ರಥಕ್ಕೆ ಕಪಿಲ ವರ್ಣದ ಕುದುರೆಗಳು. 4 ಆಗ ನಾನು ಉತ್ತರ ಕೊಟ್ಟು ನನ್ನ ಸಂಗಡ ಮಾತನಾಡಿದ ದೂತನಿಗೆ--ನನ್ನ ಒಡೆಯನೇ, ಇದೇನು ಅಂದೆನು. 5 ದೂತನು ನನಗೆ ಉತ್ತರಕೊಟ್ಟು ಹೇಳಿದ್ದೇನಂದರೆ--ಇವು ಆಕಾಶಗಳ ನಾಲ್ಕು ಆತ್ಮಗಳು; ಇವು ಸಮಸ್ತ ಭೂಮಿಯ ಕರ್ತನ ಮುಂದೆ ನಿಂತಲ್ಲಿಂದ ಹೊರಟುಬಂದವೆ. 6 ಆ ಕಪ್ಪು ಕುದುರೆಗಳು ಉತ್ತರ ದೇಶಕ್ಕೆ ಹೊರಡುತ್ತವೆ; ಬಿಳಿಯವುಗಳು ಇವುಗಳ ಹಿಂದೆ ಹೊರಡುತ್ತವೆ; ಚುಕ್ಕೆಗಳಿದ್ದವುಗಳು ದಕ್ಷಿಣ ದೇಶಕ್ಕೆ ಹೊರಡುತ್ತವೆ. 7 ಕಪಿಲ ವರ್ಣದವುಗಳು ಹೊರಟು ದೇಶದಲ್ಲಿ ಸಂಚಾರ ಮಾಡಹೋಗುವದಕ್ಕೆ ನೋಡಿದವು ಅಂದನು. ಆಗ ಅವನು--ಹೋಗಿ ದೇಶದಲ್ಲಿ ಅತ್ತಿತ್ತ ನಡೆದಾಡುವದಕ್ಕೆ ಇಲ್ಲಿಂದ ಹೋಗಿರಿ ಅಂದನು; ಹಾಗೆ ಅವು ದೇಶದಲ್ಲಿ ಅತ್ತಿತ್ತ ತಿರುಗಾಡಿದವು. 8 ಆಗ ಅವನು ನನಗೆ ಕೂಗಿ ಹೇಳಿದ್ದೇನಂ ದರೆ--ನೋಡು, ಉತ್ತರ ದೇಶಕ್ಕೆ ಹೊರಟವುಗಳು ಉತ್ತರ ದೇಶದಲ್ಲಿ ನನ್ನ ಆತ್ಮವನ್ನು ಶಾಂತಿಪಡಿಸಿವೆ ಅಂದನು. 9 ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಯಿತು. 10 ಹೇಗಂದರೆ--ಆ ಸೆರೆಯವರಿಂದ ಅಂದರೆ ಬಾಬೆಲಿ ನಿಂದ ಬಂದಿರುವ ಹೆಲ್ದಾಯನಿಂದಲೂ ತೋಬೀಯ ನಿಂದಲೂ ಯೆದಾಯನಿಂದಲೂ ತಕ್ಕೊಂಡು ಅದೇ ದಿವಸದಲ್ಲಿ ನೀನು ಬಂದು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿ 11 ಬೆಳ್ಳಿಬಂಗಾರವನ್ನು ತಕ್ಕೊಂಡು ಕಿರೀಟಗಳನ್ನು ಮಾಡಿ ಅವುಗಳನ್ನು ಯೆಹೋಚಾದಾಕನ ಮಗನಾದ ಪ್ರಧಾನ ಯಾಜಕ ನಾದ ಯೆಹೋಶುವನ ತಲೆಯ ಮೇಲೆ ಇಟ್ಟು 12 ಅವನಿಗೆ ಹೇಳತಕ್ಕದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಚಿಗುರೆಂದು ಹೆಸರುಳ್ಳ ಮನುಷ್ಯನು, ಅವನು ತನ್ನ ಸ್ಥಳದೊಳಗಿಂದ ಚಿಗುರು ವನು, ಆತನೇ ಕರ್ತನ ದೇವಾಲಯವನ್ನು ಕಟ್ಟುವನು. 13 ಹೌದು, ಆತನು ಕರ್ತನ ದೇವಾಲಯವನ್ನು ಕಟ್ಟು ವನು; ಆತನು ಮಹಿಮೆಯನ್ನು ಧರಿಸುವನು; ಕೂತು ಕೊಂಡು ತನ್ನ ಸಿಂಹಾಸನದಲ್ಲಿ ಆಳುವನು, ತನ್ನ ಸಿಂಹಾಸನದಲ್ಲಿ ಯಾಜಕನಾಗಿರುವನು; ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವದು. 14 ಆ ಕಿರೀಟಗಳು ಹೇಲೆಮನಿಗೂ ತೋಬೀಯನಿಗೂ ಯೆದಾಯನಿಗೂ ಚೆಫನ್ಯನ ಮಗನಾದ ಹೇನನಿಗೂ ಕರ್ತನ ದೇವಾಲಯದಲ್ಲಿ ಜ್ಞಾಪಕಾರ್ಥವಾಗಿ ಇರು ವವು.
15 ದೂರವಾದವರು ಬಂದು ಕರ್ತನ ದೇವಾ ಲಯವನ್ನು ಕಟ್ಟುವರು; ಸೈನ್ಯಗಳ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ತಿಳಿಯುವಿರಿ; ನೀವು ನಿಮ್ಮ ದೇವರಾದ ಕರ್ತನ ಶಬ್ದಕ್ಕೆ ಜಾಗ್ರತೆಯಾಗಿ ಕಿವಿಗೊಟ್ಟರೆ ಇದು ನೆರವೇರುವದು. ಅಧ್ಯಾಯ 7 1 ಅರಸನಾದ ದಾರ್ಯಾವೆಷನ ನಾಲ್ಕನೇ ವರುಷದಲ್ಲಿ ಆದದ್ದೇನಂದರೆ--ಒಂಭ ತ್ತನೇ ತಿಂಗಳಾದ ಕಿಸ್ಲೇವಿನ ನಾಲ್ಕನೇ ದಿವಸದಲ್ಲಿ ಕರ್ತನ ವಾಕ್ಯವು ಜೆಕರ್ಯನಿಗೆ ಉಂಟಾಯಿತು. 2 ಯಾವಾಗಂದರೆ, ಕರ್ತನ ಮುಖದ ಮುಂದೆ ಬೇಡಿ ಕೊಳ್ಳುವದಕ್ಕೂ 3 ಸೈನ್ಯಗಳ ಕರ್ತನ ಮನೆಯಲ್ಲಿದ್ದ ಯಾಜಕರ ಸಂಗಡಲೂ ಪ್ರವಾದಿಗಳ ಸಂಗಡಲೂ ನಾನು ಮಾತನಾಡಿ--ಇಷ್ಟು ವರುಷ ಮಾಡಿದ ಪ್ರಕಾರ ಐದನೇ ತಿಂಗಳಲ್ಲಿ ನನ್ನನ್ನು ಪ್ರತ್ಯೇಕಿಸಿಕೊಂಡು ಅಳಲೋ ಎಂದು ಹೇಳುವದಕ್ಕೂ ಅವರು ಸರೆಚರ ನನ್ನೂ ರೆಗೆಮ್ ಮೆಲೆಕನನ್ನೂ ಅವರ ಮನುಷ್ಯ ರನ್ನೂ ದೇವರ ಆಲಯಕ್ಕೆ ಕಳುಹಿಸಿದಾಗಲೇ ಅಂದನು. 4 ಆಗ ಸೈನ್ಯಗಳ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- 5 ದೇಶದ ಜನರೆಲ್ಲರಿಗೂ ಯಾಜಕ ರಿಗೂ ಹೀಗೆ ಹೇಳು--ನೀವು ಈ ಎಪ್ಪತ್ತು ವರುಷಗಳು ಐದನೇ ಮತ್ತು ಏಳನೇ ತಿಂಗಳುಗಳಲ್ಲಿ ಉಪವಾಸ ಮಾಡಿ ದುಃಖಿಸಿದಾಗ ನನಗೆ ಏನಾದರೂ ಉಪವಾಸ ಮಾಡಿದ್ದೀರೋ? 6 ನೀವು ಉಂಡು ಕುಡಿದಾಗ ನಿಮಗೆ ನೀವೇ ಉಂಡು ಕುಡಿದಿರಲ್ಲಾ? 7 ಯೆರೂಸಲೇಮೂ ಅದರ ಸುತ್ತಲಿನ ಪಟ್ಟಣಗಳೂ ನಿವಾಸಿಗಳುಳ್ಳ ವುಗಳಾಗಿಯೂ ಸುಖವಾಗಿಯೂ ದಕ್ಷಿಣವೂ ಬೈಲೂ ನಿವಾಸಿಗಳುಳ್ಳವುಗಳಾಗಿಯೂ ಇದ್ದಾಗ ಕರ್ತನು ಪೂರ್ವದ ಪ್ರವಾದಿಗಳ ಕೈಯಿಂದ ಕೂಗಿದ ಮಾತುಗಳು ಅವು ಅಲ್ಲವೊ? ಎಂಬದು. 8 ಇದಲ್ಲದೆ ಕರ್ತನ ವಾಕ್ಯವು ಜೆಕರ್ಯನಿಗೆ ಉಂಟಾಗಿ ಹೇಳಿದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಮಾತನಾಡಿ ಹೇಳುತ್ತಾನೆ-- 9 ನಿಜವಾದ ನ್ಯಾಯವನ್ನು ತೀರಿಸಿರಿ; ಒಬ್ಬರಿಗೊಬ್ಬರು ಕೃಪೆಯನ್ನೂ ಕನಿಕರವನ್ನೂ ತೋರಿಸಿರಿ; 10 ವಿಧವೆಗೂ ದಿಕ್ಕಿಲ್ಲದವನಿಗೂ ಅನ್ಯ ನಿಗೂ ಬಡವನಿಗೂ ಬಲಾತ್ಕಾರ ಮಾಡಬೇಡಿರಿ; ಯಾರೂ ತನ್ನ ಹೃದಯದಲ್ಲಿ ತನ್ನ ಸಹೋದರನ ಮೇಲೆ ಕೆಟ್ಟದ್ದನ್ನು ಕಲ್ಪಿಸದೆ ಇರಲಿ ಎಂಬದು. 11 ಆದರೆ ಅವರು ಕೇಳುವದಕ್ಕೆ ನಿರಾಕರಿಸಿದರು. ಅವರು ಹೆಗಲನ್ನು ಹಿಂದೆ ಳೆದು ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದಮಾಡಿ ಕೊಂಡರು. 12 ಹೌದು, ಅವರು ನ್ಯಾಯಪ್ರಮಾಣ ವನ್ನೂ ಸೈನ್ಯಗಳ ಕರ್ತನು ತನ್ನ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯ ಗಳನ್ನೂ ಕೇಳದ ಹಾಗೆ ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಮಾಡಿಕೊಂಡರು. ಆದದರಿಂದ ಸೈನ್ಯಗಳ ಕರ್ತನಿಂದ ಮಹಾರೋಷವು ಬಂತು. 13 ಆಗ ಆದದ್ದೇ ನಂದರೆ--ಅವನು ಕೂಗಲು ಅವರು ಕೇಳದೆ ಇದ್ದ ಪ್ರಕಾರ ಅವರು ಕೂಗಲು ನಾನು ಕೇಳದೆ ಇದ್ದೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
14 ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರ ಗಾಳಿಯಿಂದ ಚದರಿಸಿಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು; ಹಾದುಹೋಗುವವನೂ ತಿರುಗಿಕೊಳ್ಳುವವನೂ ಇಲ್ಲದೆ ಹೋದರು. ರಮ್ಯವಾದ ದೇಶವನ್ನು ಹಾಳಾಗಿ ಮಾಡಿದರು. ಅಧ್ಯಾಯ 8 1 ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- 2 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಚೀಯೋನಿನ ವಿಷಯವಾಗಿ ಅತಿ ರೋಷಗೊಂಡಿದ್ದೆನು; ಅತಿ ಉಗ್ರದಿಂದ ಅದರ ವಿಷಯದಲ್ಲಿ ರೋಷವುಳ್ಳವನಾಗಿದ್ದೆನು. 3 ಕರ್ತನು ಹೀಗೆ ಹೇಳುತ್ತಾನೆ--ಚೀಯೋನಿಗೆ ನಾನು ತಿರಿಗಿ ಕೊಂಡಿದ್ದೇನೆ; ಯೆರೂಸಲೇಮಿನ ಮಧ್ಯದಲ್ಲಿ ವಾಸಿಸು ವೆನು; ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೈನ್ಯಗಳ ಕರ್ತನ ಪರ್ವತವು ಪರಿಶುದ್ಧ ಪರ್ವತ ವೆಂದೂ ಕರೆಯಲ್ಪಡುವದು. 4 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇನ್ನು ಯೆರೂಸಲೇಮಿನ ಬೀದಿಗಳಲ್ಲಿ ಮುದುಕರೂ ಮುದುಕಿಯರೂ ವಾಸವಾಗಿರುವರು; ಕೇವಲ ವೃದ್ಧಾಪ್ಯದಿಂದ ಒಬ್ಬೊಬ್ಬನ ಕೈಯಲ್ಲಿ ಅವನವನ ಕೋಲು ಇರುವದು. 5 ಪಟ್ಟಣದ ಬೀದಿಗಳು ಆಡುವ ಬಾಲಕ ಬಾಲಕಿಯರಿಂದ ತುಂಬಿರುವವು. 6 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇದು ಈ ದಿವಸಗಳಲ್ಲಿ ಉಳಿದ ಈ ಜನರ ಕಣ್ಣುಗಳಿಗೆ ಆಶ್ಚರ್ಯವಾಗಿ ತೋರಿ ದರೂ ಅದು ನನ್ನ ಕಣ್ಣುಗಳಿಗೂ ಸಹ ಆಶ್ಚರ್ಯವಾಗಿ ತೋರುವದೋ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. 7 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಜನರನ್ನು ಪೂರ್ವ ದಿಕ್ಕಿನ ದೇಶದಿಂದಲೂ ಪಶ್ಚಿಮ ದಿಕ್ಕಿನ ದೇಶದಿಂದಲೂ ರಕ್ಷಿಸುವೆನು. 8 ನಾನು ಅವರನ್ನು ತರುವೆನು; ಅವರು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವರು; ಅವರು ನನ್ನ ಜನರಾಗಿ ರುವರು; ನಾನು ಸತ್ಯದಲ್ಲಿಯೂ ನೀತಿಯಲ್ಲಿಯೂ ಅವರ ದೇವರಾಗಿರುವೆನು. 9 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ದೇವಾಲಯವನ್ನು ಕಟ್ಟುವ ಹಾಗೆ ಸೈನ್ಯಗಳ ಕರ್ತನ ಆಲಯದ ಅಸ್ತಿವಾರವು ಹಾಕಲ್ಪಟ್ಟ ದಿವಸದಲ್ಲಿದ್ದ ಪ್ರವಾದಿಗಳ ಬಾಯಿಂದಾದ ಈ ವಾಕ್ಯಗಳನ್ನು ಈ ದಿವಸಗಳಲ್ಲಿ ಕೇಳುವವರೇ, ನಿಮ್ಮ ಕೈಗಳು ಬಲವಾಗಿರಲಿ. 10 ಈ ದಿವಸಗಳಿಗಿಂತ ಮುಂಚೆ ಮನುಷ್ಯನಿಗೆ ಕೂಲಿ ಇರಲಿಲ್ಲ, ಪಶುಗಳಿಗೆ ಕೂಲಿ ಇರಲಿಲ್ಲ; ಇಲ್ಲವೆ ಹೋಗುವವ ನಿಗೂ ಬರುವವನಿಗೂ ಇಕ್ಕಟ್ಟಿನ ದೆಸೆಯಿಂದ ಸಮಾ ಧಾನವಿರಲಿಲ್ಲ. ನಾನು ಜನರೆಲ್ಲರಲ್ಲಿ ಪ್ರತಿಯೊಬ್ಬನನ್ನು ತನ್ನ ನೆರೆಯವನಿಗೆ ವಿರೋಧವಾಗಿ ಇಟ್ಟಿದ್ದೆನು. 11 ಆದರೆ ಈಗ ಉಳಿದ ಈ ಜನರಿಗೆ ನಾನು ಪೂರ್ವದ ದಿವಸಗಳಲ್ಲಿದ್ದ ಹಾಗೆ ಇರುವದಿಲ್ಲವೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ. 12 ಬೀಜವುವೃದ್ಧಿಯಾಗುವದು; ದ್ರಾಕ್ಷೇ ಬಳ್ಳಿ ತನ್ನ ಫಲವನ್ನು ಕೊಡುವದು; ಭೂಮಿಯು ತನ್ನ ಹುಟ್ಟುವಳಿಯನ್ನು ಹೆಚ್ಚಾಗಿ ಕೊಡುವದು; ಆಕಾಶ ಗಳು ತಮ್ಮ ಮಂಜನ್ನು ಕೊಡುವವು; ಈ ಜನರಲ್ಲಿ ಉಳಿದವರು ಇವುಗಳನ್ನೆಲ್ಲಾ ಸ್ವಾಧೀನ ಮಾಡಿಕೊಳ್ಳು ವಂತೆ ಮಾಡುವೆನು. 13 ಆಗುವದೇನಂದರೆ, ಓ ಯೆಹೂದದ ಮನೆತನದವರೇ, ಇಸ್ರಾಯೇಲಿನ ಮನೆತನದವರೇ, ನೀವು ಜನಾಂಗಗಳಲ್ಲಿ ಶಾಪವಾಗಿದ್ದ ಪ್ರಕಾರ ನಾನು ನಿಮ್ಮನ್ನು ರಕ್ಷಿಸುವೆನು ಮತ್ತು ನೀವು ಆಶೀರ್ವಾದವಾಗಿರುವಿರಿ; ಭಯಪಡಬೇಡಿರಿ; ನಿಮ್ಮ ಕೈಗಳು ಬಲವಾಗಿರಲಿ. 14 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಪಿತೃಗಳು ನನಗೆ ಸಿಟ್ಟು ಎಬ್ಬಿಸಿದಾಗ ನಾನು ನಿಮ್ಮನ್ನು ಶಿಕ್ಷಿಸುವದಕ್ಕೆ ಯೋಚಿಸಿದೆನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ; ನಾನು ಪಶ್ಚಾತ್ತಾಪ ಪಡಲಿಲ್ಲ. 15 ನಾನು ತಿರುಗಿ ಈ ದಿವಸಗಳಲ್ಲಿ ಯೆರೂಸಲೇಮಿಗೂ ಯೆಹೂದದ ಮನೆತನದವರಿಗೂ ಒಳ್ಳೇದನ್ನು ಮಾಡಲು ಯೋಚಿಸಿದ್ದೇನೆ; ನೀವು ಭಯ ಪಡಬೇಡಿರಿ. 16 ನೀವು ಮಾಡತಕ್ಕ ಕಾರ್ಯಗಳು ಇವೇ--ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನು ಮಾತಾಡಲಿ; ನಿಜವಾದ ಸಮಾಧಾನಕರ ವಾದ ನ್ಯಾಯತೀರ್ವಿಕೆಯನ್ನು ನಿಮ್ಮ ಬಾಗಲು ಗಳಲ್ಲಿ ತೀರಿಸಿರಿ. 17 ನಿಮ್ಮ ಹೃದಯಗಳಲ್ಲಿ ಒಬ್ಬರ ಮೇಲೊ ಬ್ಬರು ಕೇಡನ್ನು ಕಲ್ಪಿಸದಿರ್ರಿ; ಸುಳ್ಳು ಪ್ರಮಾಣವನ್ನು ಪ್ರೀತಿಮಾಡಿದಿರಿ; ಇವುಗಳೆಲ್ಲವೂ ನಾನು ಹಗೆ ಮಾಡುವಂಥವುಗಳೇ ಎಂದು ಕರ್ತನು ಹೇಳುತ್ತಾನೆ. 18 ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- 19 ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾಲ್ಕನೇ ತಿಂಗಳಿನ ಉಪವಾಸವು, ಐದನೆ ಯದು, ಏಳನೆಯದು, ಹತ್ತನೆಯದು, ಯೆಹೂದದ ಮನೆತನದವರಿಗೆ ಸಂತೋಷವೂ ಸಂಭ್ರಮವೂ ಆನಂದವಾದ ಹಬ್ಬಗಳೂ ಆಗುವವು; ಆದರೆ ಸತ್ಯ ವನ್ನೂ ಸಮಾಧಾನವನ್ನೂ ಪ್ರೀತಿಮಾಡಿರಿ. 20 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಜನಗಳೂ ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನು ಬರುವರು; 21 ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು. 22 ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.
23 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು. ಅಧ್ಯಾಯ 9 1 ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು. 2 ಹಮಾತು ಬಹಳ ಜ್ಞಾನವಿರುವ ತೂರ್ ಚೀದೋನ್ ಸಹ ಅದರ ಮೇರೆಯಾಗಿದೆ. 3 ತೂರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು. 4 ಇಗೋ, ಕರ್ತನು ಅದನ್ನು ಹೊರಗೆ ಹಾಕುವನು; ಸಮುದ್ರದಲ್ಲಿ ಅದರ ಬಲವನ್ನು ಹೊಡೆಯುವನು; ಅದು ಬೆಂಕಿ ಯಿಂದ ದಹಿಸಲ್ಪಡುವದು. 5 ಅಷ್ಕಲೋನು ನೋಡಿ ಭಯಪಡುವದು; ಗಾಜ ಸಹ ಅದನ್ನು ನೋಡಿ ಬಹಳವಾಗಿ ವೇದನೆಪಡುವದು, ಎಕ್ರೋನು ಸಹ; ಅದರ ನಿರೀಕ್ಷೆಯು ಅದನ್ನು ನಾಚಿಕೆ ಪಡಿಸಿತು; ಗಾಜ ದೊಳಗಿಂದ ಅರಸನು ನಾಶವಾಗುವನು; ಅಷ್ಕೆಲೋನು ನಿವಾಸವಿಲ್ಲದೆ ಇರುವದು. 6 ಅಷ್ಡೋದಿನಲ್ಲಿ ಜಾರತ್ವ ದಿಂದ ಹುಟ್ಟಿದವನು ವಾಸವಾಗುತ್ತಾನೆ; ಫಿಲಿಷ್ಟಿಯರ ಗರ್ವವನ್ನು ನಾನು ತೆಗೆದುಬಿಡುವೆನು. 7 ಅವನ ರಕ್ತ ವನ್ನು ಅವನ ಬಾಯೊಳಗಿಂದಲೂ ಅವನ ಅಸಹ್ಯ ಗಳನ್ನು ಅವನ ಹಲ್ಲುಗಳ ನಡುವೆಯಿಂದಲೂ ನಾನು ತೆಗೆದುಹಾಕುವೆನು; ಅವನು ಸಹ ನಮ್ಮ ದೇವರಿಗಾಗಿ ಉಳಿಯುವನು; ಯೆಹೂದದಲ್ಲಿ ಪ್ರಭುವಿನ ಹಾಗೆ ಇರುವನು; ಎಕ್ರೋನು ಯೆಬೂಸಿಯನ ಹಾಗೆ ಇರು ವನು. 8 ಇದಲ್ಲದೆ ಹೋಗುತ್ತಾ ಬರುತ್ತಾ ಇರುವವನ ನಿಮಿತ್ತವೂ ಸೈನ್ಯದ ನಿಮಿತ್ತವೂ ನನ್ನ ಮನೆಯ ಹತ್ತಿರ ಪಾಳೆಯಮಾಡುತ್ತೇನೆ; ಇನ್ನು ಮೇಲೆ ಉಪದ್ರ ಕೊಡುವವನು ಅವರ ಮೇಲೆ ಹಾದು ಹೋಗುವದಿಲ್ಲ; ಯಾಕಂದರೆ ಈಗ ನನ್ನ ಕಣ್ಣುಗಳಿಂದ ನೋಡಿದ್ದೇನೆ. 9 ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ. 10 ಇದಲ್ಲದೆ ಎಫ್ರಾಯಾಮಿನೊಳಗಿಂದ ರಥ ಗಳನ್ನೂ ಯೆರೂಸಲೇಮಿನೊಳಗಿಂದ ಕುದುರೆಗಳನ್ನೂ ತೆಗೆದುಬಿಡುವೆನು; ಯುದ್ಧದ ಬಿಲ್ಲು ಸಹ ತೆಗೆದು ಹಾಕಲ್ಪಡುವದು; ಆತನು ಅನ್ಯ ಜನಾಂಗಗಳಿಗೆ ಸಮಾ ಧಾನವನ್ನು ಹೇಳುವನು; ಆತನ ದೊರೆತನವು ಸಮುದ್ರ ದಿಂದ ಸಮುದ್ರಕ್ಕೂ ನದಿಯಿಂದ ಭೂಮಿಯ ಅಂತ್ಯಗಳ ವರೆಗೂ ಇರುವದು. 11 ನಿನ್ನ ವಿಷಯವಾಗಿ ಸಹ ನಿನ್ನ ಒಡಂಬಡಿಕೆಯ ರಕ್ತದಿಂದ, ನಿನ್ನ ಸೆರೆಯವರನ್ನು ನೀರಿಲ್ಲದ ಕುಣಿಯೊ ಳಗಿಂದ ಕಳುಹಿಸಿಬಿಡುತ್ತೇನೆ. 12 ನಿರೀಕ್ಷೆಯ ಸೆರೆಯವರೇ, ಬಲವಾದ ದುರ್ಗಸ್ಥಾನಕ್ಕೆ ತಿರಿಗಿರಿ, ಎರಡ ರಷ್ಟು ನಿಮಗೆ ಕೊಡುವೆನೆಂದು ಈ ಹೊತ್ತೇ ಪ್ರಕಟಿ ಸುತ್ತೇನೆ. 13 ಯೆಹೂದವನ್ನು ನನಗಾಗಿ ಬೊಗ್ಗಿಸಿದಾಗ ಎಫ್ರಾಯಾಮನ್ನು ಬಿಲ್ಲುಗಳಿಂದ ತುಂಬಿಸಿದ್ದೇನೆ; ಚೀಯೋನೇ, ನಿನ್ನ ಕುಮಾರರನ್ನು ಗ್ರೀಕ್ ಕುಮಾರರಿಗೆ ವಿರೋಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯಂತೆ ಮಾಡಿದ್ದೇನೆ. 14 ಇದಲ್ಲದೆ ಕರ್ತನು ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣಗಳು ಮಿಂಚಿನ ಹಾಗೆ ಹೊರಡುವವು; ಕರ್ತನಾದ ದೇವರು ತುತೂರಿ ಯನ್ನು ಊದಿ, ದಕ್ಷಿಣದ ಸುಳಿಗಾಳಿಯಲ್ಲಿ ಹೋಗು ವನು. 15 ಸೈನ್ಯಗಳ ಕರ್ತನು ಅವರನ್ನು ಕಾಪಾಡುವನು; ಅವರು ನುಂಗಿ ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿ ಕೊಳ್ಳುವರು; ಕುಡಿದು ದ್ರಾಕ್ಷಾರಸದಿಂದಾದ ಹಾಗೆ ಓಲಾಡುವರು, ಪಾತ್ರೆಯ ಹಾಗೆಯೂ ಬಲಿಪೀಠದ ಮೂಲೆಗಳ ಹಾಗೆಯೂ ತುಂಬಿರುವರು. 16 ಇದಲ್ಲದೆ ಅವರ ದೇವರಾದ ಕರ್ತನು ಆ ದಿವಸದಲ್ಲಿ ಅವರನ್ನು ತನ್ನ ಜನರ ಮಂದೆಯ ಹಾಗೆ ರಕ್ಷಿಸುವನು; ಅವರು ಕಿರೀಟದ ಕಲ್ಲುಗಳಂತೆ ಆತನ ದೇಶದ ಮೇಲೆ ಧ್ವಜವಾಗಿ ಎತ್ತಲ್ಪಡುವರು.
17 ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು. ಅಧ್ಯಾಯ 10 1 ಕರ್ತನಿಂದ ಹಿಂಗಾರುಮಳೆಯ ಕಾಲದಲ್ಲಿ ಮಳೆಗಾಗಿ ಬೇಡಿಕೊಳ್ಳಿರಿ. ಹೀಗೆ ಕರ್ತನು ಮಿಂಚುವ ಮೋಡಗಳನ್ನು ಮಾಡಿ ಅವರಿಗೆ ಜಡಿ ಮಳೆಯನ್ನೂ ಒಬ್ಬೊಬ್ಬನಿಗೆ ಹೊಲದಲ್ಲಿ ಹುಲ್ಲನ್ನೂ ಕೊಡುವನು. 2 ವಿಗ್ರಹಗಳು ವ್ಯರ್ಥವಾಗಿ ಮಾತ ನಾಡಿವೆ; ಶಕುನಗಾರರು ಸುಳ್ಳನ್ನು ನೋಡಿದ್ದಾರೆ; ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ; ವ್ಯರ್ಥವಾಗಿ ಆದರಿಸುತ್ತಾರೆ; ಆದದರಿಂದ ಮಂದೆಯ ಹಾಗೆ ತಮ್ಮ ದಾರಿಯಲ್ಲಿ ಹೋಗಿದ್ದಾರೆ; ಕುರುಬನಿಲ್ಲದ ಕಾರಣ ಕಳವಳಗೊಂಡಿದ್ದಾರೆ. 3 ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯಿತು; ಮೇಕೆಗಳನ್ನು ದಂಡಿಸಿದೆನು; ಸೈನ್ಯಗಳ ಕರ್ತನು ತನ್ನ ಮಂದೆಯಾಗಿರುವ ಯೆಹೂದನ ಮನೆ ತನದವರನ್ನು ದರ್ಶಿಸಿ ಅವರನ್ನು ಯುದ್ಧದಲ್ಲಿ ತನ್ನ ಘನವಾದ ಕುದುರೆಯ ಹಾಗೆ ಮಾಡಿದ್ದಾನೆ. 4 ಆತ ನಿಂದ ಮೂಲೆಗಲ್ಲೂ ಆತನಿಂದ ಮೊಳೆಯೂ ಆತನಿಂದ ಯುದ್ಧದ ಬಿಲ್ಲೂ ಆತನಿಂದ ಹಿಂಸಿಸುವವರೆಲ್ಲರೂ ಕೂಡಿಕೊಂಡು ಹೊರಡುತ್ತಾರೆ. 5 ಅವರು ಯುದ್ಧ ದಲ್ಲಿ ಶತ್ರುವನ್ನು ಬೀದಿಗಳ ಕೆಸರಿನಲ್ಲಿ ತುಳಿಯುವ ಶೂರರ ಹಾಗಿರುವರು; ಕರ್ತನು ಅವರ ಸಂಗಡ ಇರುವದರಿಂದ ಯುದ್ಧಮಾಡುವರು; ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾಚಿಕೆಪಡಿಸುವರು. 6 ಇದಲ್ಲದೆ ನಾನು ಯೆಹೂದನ ಮನೆತನದವರನ್ನು ಬಲಪಡಿಸುವೆನು, ಯೋಸೇಫನ ಮನೆತನದವರನ್ನು ರಕ್ಷಿಸುವೆನು; ಅವರನ್ನು ಕನಿಕರಿಸುವದರಿಂದ ತಿರಿಗಿ ತಂದು ನಿವಾಸಿಸ ಮಾಡುವೆನು; ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಅವರು ಇರುವರು; ನಾನೇ ಅವರ ದೇವರಾದ ಕರ್ತನಾಗಿದ್ದು ಅವರಿಗೆ ಉತ್ತರಕೊಡುವೆನು. 7 ಎಫ್ರಾಯಾಮಿನವರು ಶೂರನಂತೆ ಇರುವರು; ಅವರ ಹೃದಯವು ದ್ರಾಕ್ಷಾರಸದಿಂದಾದ ಹಾಗೆ ಸಂತೋಷಪಡುವದು; ಹೌದು, ಅವರ ಮಕ್ಕಳು ನೋಡಿ ಸಂತೋಷಿಸುವರು; ಅವರ ಹೃದಯವು ಕರ್ತ ನಲ್ಲಿ ಉಲ್ಲಾಸಪಡುವದು. 8 ನಾನು ಅವರಿಗೆ ಸಿಳ್ಳುಹಾಕಿ ಅವರನ್ನು ಕೂಡಿಸುವೆನು; ಅವರನ್ನು ವಿಮೋಚಿ ಸಿದ್ದೇನೆ; ಅವರು ಹಿಂದೆ ಹೆಚ್ಚಿದ ಹಾಗೆ ಹೆಚ್ಚುವರು. 9 ನಾನು ಅವರನ್ನು ಜನಗಳಲ್ಲಿ ಬಿತ್ತುವೆನು; ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡುವರು; ತಮ್ಮ ಮಕ್ಕಳ ಸಂಗಡ ಬದುಕಿ ಮತ್ತೆ ತಿರುಗಿಕೊಳ್ಳುವರು. 10 ಐಗುಪ್ತದೇಶದೊಳಗಿಂದ ಸಹ ಅವರನ್ನು ತಿರಿಗಿ ತರುವೆನು; ಅಶ್ಯೂರಿನೊಳಗಿಂದ ಅವರನ್ನು ಕೂಡಿಸು ವೆನು; ಗಿಲ್ಯಾದಿನ ಮತ್ತು ಲೆಬನೋನಿನ ದೇಶಕ್ಕೆ ಅವರನ್ನು ತರುವೆನು; ಅವರಿಗೆ ಸ್ಥಳ ಸಾಲದೆ ಇರು ವದು. 11 ಅವನು ಸಮುದ್ರವನ್ನು ಬಾಧೆಯಿಂದ ದಾಟುವನು; ಸಮುದ್ರದಲ್ಲಿ ತೆರೆಗಳನ್ನು ಬಡಿಯು ವನು; ನದಿಯ ಅಗಾಧಗಳೆಲ್ಲಾ ಒಣಗುವವು; ಅಶ್ಯೂರಿನ ಗರ್ವವು ತಗ್ಗಿಸಲ್ಪಡುವದು; ಐಗುಪ್ತದ ಮುದ್ರೆಕೋಲು ಹೋಗಿಬಿಡುವದು.
12 ಕರ್ತನಲ್ಲಿ ನಾನು ಅವರನ್ನು ಬಲಪಡಿಸುವೆನು; ಆತನ ಹೆಸರಿನಲ್ಲಿ ಅವರು ಮೇಲೆ ಕೆಳಗೆ ನಡೆಯುವರು ಎಂದು ಕರ್ತನು ಅನ್ನುತ್ತಾನೆ. ಅಧ್ಯಾಯ 11 1 ಓ ಲೆಬನೋನೇ, ಬೆಂಕಿ ನಿನ್ನ ದೇವದಾರುಗಳನ್ನು ನುಂಗುವ ಹಾಗೆ ನಿನ್ನ ಬಾಗಲು ಗಳನ್ನು ತೆರೆ. 2 ತುರಾಯಿ ಗಿಡವೇ, ಗೋಳಿಡು; ದೇವದಾರು ಬಿದ್ದುಹೋಯಿತು, ಬಲವಾದವುಗಳು ಹಾಳಾದವು; ಬಾಷಾನಿನ ಓಕ್ ಮರಗಳೇ, ಗೋಳಾ ಡಿರಿ; ದ್ರಾಕ್ಷೆಯ ಅಡವಿಯು ಇಳಿದು ಬಂದಿದೆ. 3 ಕುರುಬರು ಗೋಳಿಡುವ ಶಬ್ದವುಂಟು; ಅವರ ಗೌರವವು ಕೆಡಿಸಲ್ಪಟ್ಟಿದೆ, ಪ್ರಾಯದ ಸಿಂಹಗಳ ಘರ್ಜಿಸುವ ಶಬ್ದವುಂಟು; ಯೊರ್ದನಿನ ಗರ್ವ ಕೆಡಿಸಲ್ಪಟ್ಟಿದೆ. 4 ನನ್ನ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೊಲೆಯ ಮಂದೆಯನ್ನು ಮೇಯಿಸು. 5 ಅವುಗಳನ್ನು ಸಂಪಾದಿಸಿದವರು ಅವುಗಳನ್ನು ಕೊಂದು ತಮ್ಮನ್ನು ನಿರಪರಾಧಿಗಳೆಂದೆಣಿಸುತ್ತಾರೆ; ಅವುಗಳನ್ನು ಮಾರುವ ವರು--ನಾನು ಐಶ್ವರ್ಯವಂತನಾದೆನು, ಕರ್ತನಿಗೆ ಸ್ತೋತ್ರ ಎಂದನ್ನುತ್ತಾರೆ; ಅವರ ಸ್ವಂತ ಕುರುಬರು ಅವುಗಳನ್ನು ಕನಿಕರಿಸುವದಿಲ್ಲ. 6 ನಾನು ದೇಶದ ನಿವಾಸಿಗಳನ್ನು ಇನ್ನು ಕನಿಕರಿಸುವದೇ ಇಲ್ಲ ಎಂದು ಕರ್ತನು ಅನ್ನುತ್ತಾನೆ; ಆದರೆ ಇಗೋ, ನಾನು ಒಬ್ಬೊ ಬ್ಬನನ್ನು ತನ್ನ ತನ್ನ ನೆರೆಯವನ ಕೈಗೂ ತನ್ನ ಅರಸನ ಕೈಗೂ ಒಪ್ಪಿಸುವೆನು; ಅವರು ದೇಶವನ್ನು ಹೊಡೆ ಯುವರು; ಅವರ ಕೈಯೊಳಗಿಂದ ನಾನು ಅವರನ್ನು ತಪ್ಪಿಸುವದಿಲ್ಲ. 7 ಆಗ ಕೊಯ್ಗುರಿಗಳ ಮಂದೆ ಯನ್ನು ಹೌದು, ಬಡವಾದ ಮಂದೆಯನ್ನೇ ಮೇಯಿಸಿದೆನು; ನನಗಾಗಿ ಎರಡು ಕೋಲುಗಳನ್ನು ತಕ್ಕೊಂಡೆನು; ಒಂದಕ್ಕೆ ಸೌಂದರ್ಯ ಎಂದೂ ಮತ್ತೊಂದಕ್ಕೆ ಬಂಧ ಗಳೆಂದೂ ಹೆಸರಿಟ್ಟೆನು; ಹೀಗೆ ಮಂದೆಯನ್ನು ಮೇಯಿ ಸಿದೆನು. 8 ಇದಲ್ಲದೆ ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು; ನನ್ನ ಆತ್ಮವು ಅವರನ್ನು ಹೇಸಿಕೊಂಡಿತು; ಅವರ ಆತ್ಮವು ಸಹ ನನ್ನನ್ನು ಹೇಸಿ ಕೊಂಡಿತು. 9 ಆಗ ನಾನು ಹೇಳಿದ್ದೇನಂದರೆ-- ನಾನು ನಿಮ್ಮನ್ನು ಮೇಯಿಸುವದಿಲ್ಲ; ಸಾಯುವಂಥದ್ದು ಸಾಯಲಿ; ಕೆಡುವಂಥದ್ದು ಕೆಡಲಿ; ಮಿಕ್ಕಾದವುಗಳ ಒಂದರ ಮಾಂಸವನ್ನು ಒಂದು ತಿನ್ನಲಿ. 10 ಆಗ ಸೌಂದರ್ಯವೆಂಬ ನನ್ನ ಕೋಲನ್ನು ತಕ್ಕೊಂಡು ಅದನ್ನು ಮುರಿದುಬಿಟ್ಟೆನು; ಹೀಗೆ ಜನರೆಲ್ಲರ ಸಂಗಡ ನಾನು ಮಾಡಿದ್ದ ನನ್ನ ಒಡಂಬಡಿಕೆಯನ್ನು ಮುರಿದುಬಿಟ್ಟೆನು, 11 ಅದೇ ದಿನದಲ್ಲಿ ಅದು ಮುರಿಯಲ್ಪಟ್ಟಿತು; ಆಗ ನನ್ನಲ್ಲಿ ನಿರೀಕ್ಷೆಯಿಟ್ಟ ಬಡ ಕುರಿಮಂದೆಯು ಅದು ಕರ್ತನ ವಾಕ್ಯವೆಂದು ತಿಳಿದುಕೊಂಡಿತು. 12 ಆಗ ನಾನು ಅವರಿಗೆ--ನಿಮ್ಮ ಕಣ್ಣುಗಳಲ್ಲಿ ಒಳ್ಳೇದಾಗಿ ತೋರಿದರೆ ನನ್ನ ಸಂಬಳವನ್ನು ಕೊಡಿರಿ, ಇಲ್ಲದಿದ್ದರೆ ಬಿಡಿರಿ ಅಂದೆನು. ಆಗ ಅವರು ನನ್ನ ಸಂಬಳಕ್ಕಾಗಿ ಮೂವತ್ತು ರೂಪಾಯಿಗಳನ್ನು ತೂಕಮಾಡಿದರು. 13 ಆಗ ಕರ್ತನು ನನಗೆ--ಅದನ್ನು ಕುಂಬಾರನಿಗೆ ಹಾಕು; ನಾನು ಅವರಿಂದ ಬೆಲೆ ಮಾಡಲ್ಪಟ್ಟದ್ದು ಸರಿಯಾದ ಬೆಲೆ ಅಲ್ಲವೋ ಅಂದನು; ಆಗ ನಾನು ಆ ಮೂವತ್ತು ರೂಪಾಯಿಗಳನ್ನು ತಕ್ಕೊಂಡು ಕರ್ತನ ಆಲಯದಲ್ಲಿ ಅವುಗಳನ್ನು ಕುಂಬಾರನಿಗೆ ಹಾಕಿದೆನು. 14 ಆಗ ನನ್ನ ಎರಡನೇ ಕೋಲಾದ ಬಂಧಗಳನ್ನು ಮುರಿದುಬಿಟ್ಟೆನು; ಹೀಗೆ ಯೆಹೂದಕ್ಕೂ ಇಸ್ರಾಯೇ ಲಿಗೂ ಮಧ್ಯೆ ಇರುವ ಸಹೋದರತನವನ್ನು ಇಲ್ಲದ ಹಾಗೆ ಮಾಡಿದೆನು. 15 ಇದಲ್ಲದೆ ಕರ್ತನು ನನಗೆ ಹೇಳಿದ್ದೇನಂದರೆ --ಇನ್ನು ಬುದ್ಧಿಹೀನವಾದ ಕುರುಬನ ಆಯುಧಗ ಳನ್ನು ತಕ್ಕೋ. 16 ಇಗೋ, ನಾನು ದೇಶದಲ್ಲಿ ಒಬ್ಬ ಕುರುಬನನ್ನು ಎಬ್ಬಿಸುವೆನು; ಅವನು ಕೆಟ್ಟು ಹೋಗುವ ವುಗಳನ್ನು ವಿಚಾರಿಸುವದಿಲ್ಲ; ಇಲ್ಲವೆ ಮರಿಯನ್ನು ಅವನು ಹುಡುಕುವದಿಲ್ಲ; ಮುರಿದದ್ದನ್ನು ಅವನು ಗುಣಮಾಡುವದಿಲ್ಲ; ಇನ್ನೂ ನಿಂತಿರುವದನ್ನು ಅವನು ಪೋಷಿಸುವದಿಲ್ಲ; ಆದರೆ ಕೊಬ್ಬಿದವುಗಳ ಮಾಂಸ ವನ್ನು ತಿನ್ನುವನು; ಅವುಗಳ ಗೊರಸುಗಳನ್ನು ಮುರಿದು ಬಿಡುವನು.
17 ಮಂದೆಯನ್ನು ಕೈಬಿಡುವಂಥ ಮೈಗಳ್ಳನಾದ ಕುರುಬನಿಗೆ ಅಯ್ಯೋ! ಕತ್ತಿಯು ಅವನ ತೋಳಿನ ಮೇಲೆಯೂ ಅವನ ಬಲಗಣ್ಣಿನ ಮೇಲೆಯೂ ಇರುವದು; ಅವನ ತೋಳು ತೀರಾ ಒಣಗುವದು; ಅವನ ಬಲಗಣ್ಣು ಪೂರ್ಣವಾಗಿ ಕತ್ತಲಾಗುವದು. ಅಧ್ಯಾಯ 12 1 ಇಸ್ರಾಯೇಲಿನ ವಿಷಯವಾದ ಕರ್ತನ ವಾಕ್ಯದ ಭಾರವು ಆಕಾಶವನ್ನು ಹರಡಿಸು ವಾತನೂ ಭೂಮಿಯ ಅಸ್ತಿವಾರವನ್ನು ಹಾಕುವಾತನೂ ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತನೂ ಆದ ಕರ್ತನು ಹೇಳುವದೇನಂದರೆ-- 2 ಇಗೋ, ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇ ಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ 3 ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು. 4 ಆ ದಿನದಲ್ಲಿ ಕರ್ತನು--ನಾನು ಕುದುರೆಗಳನ್ನೆಲ್ಲಾ ಬೆದರಿಕೆಯಿಂದಲೂ ಹತ್ತಿ ದವನನ್ನು ಹುಚ್ಚುತನದಿಂದಲೂ ಹೊಡೆಯುವೆನು; ಯೆಹೂದನ ಮನೆಯ ಮೇಲೆ ನನ್ನ ಕಣ್ಣುಗಳನ್ನು ತೆರೆಯುವೆನು; ಜನಗಳ ಕುದುರೆಗಳನ್ನೆಲ್ಲಾ ಕುರುಡುತನ ದಿಂದ ಹೊಡೆಯುವೆನು. 5 ಆಗ ಯೆಹೂದದ ದೊರೆ ಗಳು ತಮ್ಮ ಹೃದಯದಲ್ಲಿ--ಯೆರೂಸಲೇಮಿನ ನಿವಾಸಿ ಗಳು ಅವರ ದೇವರಾದ ಸೈನ್ಯಗಳ ಕರ್ತನಲ್ಲಿ ನಮಗೆ ಬಲವಾಗಿದ್ದಾರೆಂದು ಅವರು ಅಂದುಕೊಳ್ಳುವರು. 6 ಆ ದಿನದಲ್ಲಿ ನಾನು ಯೆಹೂದದ ದೊರೆಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ ಸಿವುಡುಗಳಲ್ಲಿರುವ ಬೆಂಕಿಯ ಕೊಳ್ಳಿಯ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ ಎಡಗಡೆ ಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನು ನುಂಗಿ ಬಿಡುವರು; ಯೆರೂಸಲೇಮು ತಿರುಗಿ ತನ್ನ ಸ್ಥಳದಲ್ಲಿ, ಯೆರೂಸಲೇಮಿನಲ್ಲಿಯೇ ವಾಸಿಸುವದು. 7 ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವನು. 8 ಆ ದಿನದಲ್ಲಿ ಕರ್ತನು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವನು; ಆ ದಿನದಲ್ಲಿ ಅವರೊಳಗೆ ಬಲಹೀನನು ದಾವೀದನ ಹಾಗೆಯೂ ದಾವೀದನ ಮನೆತನದವರು ದೇವರ ಹಾಗೆಯೂ ಅಂದರೆ ಅವರ ಮುಂದೆ ಕರ್ತನ ದೂತನ ಹಾಗೆಯೂ ಇರುವರು. 9 ಆ ದಿನದಲ್ಲಿ ಆಗುವದೇ ನಂದರೆ, ಯೆರೂಸಲೇಮಿಗೆ ವಿರೋಧವಾಗಿ ಬರುವ ಜನಾಂಗಗಳನ್ನೆಲ್ಲಾ ನಾಶ ಮಾಡುವದಕ್ಕೆ ನಾನು ಹುಡುಕುವೆನು. 10 ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು. 11 ಮೆಗಿದ್ದೋವಿನ ತಗ್ಗಿನಲ್ಲಾದ ಹದದ್ ರಿಮ್ಮೊನಿನ ಗೋಳಾಟದ ಹಾಗೆ ಆ ದಿನ ದಲ್ಲಿ ಯೆರೂಸಲೇಮಿನೊಳಗೆ ಮಹಾಗೋಳಾಟವಿ ರುವದು. 12 ದೇಶವು ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾಗಿ ಗೋಳಾಡುವದು; ದಾವೀದನ ಮನೆಯ ಗೋತ್ರವು ಪ್ರತ್ಯೇಕ ಅವರ ಹೆಂಡತಿಯರು ಪ್ರತ್ಯೇಕ; ನಾತಾನನ ಮನೆತನದ ಗೋತ್ರವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ. 13 ಲೇವಿಯರ ಮನೆತ ನದ ಗೋತ್ರವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ಶಿಮ್ಮಿಯನ ಗೋತ್ರವು ಪ್ರತ್ಯೇಕ, ಅವರ ಹೆಂಡತಿ ಯರು ಪ್ರತ್ಯೇಕ.
14 ಉಳಿದ ಗೋತ್ರಗ ಳೆಲ್ಲಾ ಗೋತ್ರ ಗೋತ್ರಗಳ ಪ್ರಕಾರ ಪ್ರತ್ಯೇಕವಾ ಗಿಯೂ ಅವರ ಹೆಂಡತಿಯರು ಪ್ರತ್ಯೇಕವಾಗಿಯೂ ಗೋಳಾಡುವರು. ಅಧ್ಯಾಯ 13 1 ಆ ದಿನದಲ್ಲಿ ದಾವೀದನ ಮನೆತನದ ವರಿಗೂ ಯೆರೂಸಲೇಮಿನ ನಿವಾಸಿಗ ಳಿಗೂ ಪಾಪದ ನಿಮಿತ್ತ ಮತ್ತು ಅಶುದ್ಧತ್ವದ ನಿಮಿತ್ತ ಬುಗ್ಗೆ ತೆರೆಯಲ್ಪಡುವದು. 2 ಸೈನ್ಯಗಳ ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು; ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲ; ಪ್ರವಾದಿಗಳನ್ನೂ ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿ ಹೋಗುವಂತೆ ಮಾಡುವೆನು ಎಂದು ಅನ್ನುತ್ತಾನೆ. 3 ಆಗುವದೇನಂದರೆ, ಯಾವನಾದರೂ ಇನ್ನು ಪ್ರವಾದಿ ಸಿದರೆ ಅವನ ಹೆತ್ತವರಾದ ತಂದೆತಾಯಿಗಳು ಅವ ನಿಗೆ--ನೀನು ಬದುಕಬಾರದು, ಕರ್ತನ ಹೆಸರಿನಲ್ಲಿ ಸುಳ್ಳು ಹೇಳುತ್ತೀ ಎಂದು ಹೇಳುವರು; ಅವನು ಪ್ರವಾದಿಸುವಾಗ ಅವನ ಹೆತ್ತವರಾದ ತಂದೆತಾಯಿ ಗಳು ಅವನನ್ನು ನೂಕಿಬಿಡುವರು. 4 ಆ ದಿವಸದಲ್ಲಿ ಆಗುವದೇನಂದರೆ, ಪ್ರವಾದಿಗಳು ಪ್ರವಾದಿಸುವಾಗ ಅವರು ತಮ್ಮ ತಮ್ಮ ದರ್ಶನಗಳಿಗೆ ನಾಚಿಕೆಪಡುವರು; ವಂಚಿಸುವ ಹಾಗೆ ಒರಟಾದ ವಸ್ತ್ರವನ್ನು ಹಾಕಿಕೊಳ್ಳರು. 5 ಆದರೆ ಅವರು--ನಾನು ಪ್ರವಾದಿಯಲ್ಲ, ನಾನು ಭೂಮಿಯಲ್ಲಿ ವ್ಯವಸಾಯಮಾಡುವವನು; ಒಬ್ಬನು ನನ್ನನ್ನು ಚಿಕ್ಕತನದಿಂದ ದನಗಳನ್ನು ಕಾಯುವದಕ್ಕೆ ಕಲಿಸಿದನು ಅನ್ನುವನು. 6 ಆಗ ಒಬ್ಬನು ಅವನಿಗೆ--ನಿನ್ನ ಕೈಗಳಲ್ಲಿರುವ ಈ ಗಾಯಗಳು ಏನು ಎಂದು ಹೇಳುವನು. ಆಗ ಅವನು--ನನ್ನ ಸ್ನೇಹಿತರ ಮನೆಯಲ್ಲಿ ನನಗುಂಟಾದ ಗಾಯಗಳೇ ಅನ್ನುವನು. 7 ಓ ಕತ್ತಿಯೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ, ಎಚ್ಚರವಾಗು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಕುರುಬನನ್ನು ಹೊಡೆ, ಆಗ ಕುರಿಗಳು ಚದರಿ ಹೋಗುವವು; ಆದರೆ ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು ಎಂದು ಹೇಳುತ್ತಾನೆ. 8 ಕರ್ತನು--ಇದಲ್ಲದೆ ಸಮಸ್ತ ದೇಶದಲ್ಲಿ ಆಗುವದೇನಂದರೆ-- ಅದರಲ್ಲಿ ಎರಡು ಪಾಲು ಕಡಿಯಲ್ಪಟ್ಟು ಸಾಯುವದು; ಆದರೆ ಮೂರನೇ ಪಾಲು ಅದರಲ್ಲಿ ಬಿಡಲ್ಪಡುವದು. 9 ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ. ಅಧ್ಯಾಯ 14 1 ಇಗೋ, ಕರ್ತನ ದಿನವು ಬರುತ್ತದೆ. 2 ಆಗ ನಿನ್ನ ಕೊಳ್ಳೆಯು ನಿನ್ನ ಮಧ್ಯದಲ್ಲಿ ವಿಭಾಗಿಸ ಲ್ಪಡುವದು; ನಾನು ಜನಾಂಗಗಳನ್ನೆಲ್ಲಾ ಯೆರೂಸ ಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು; ಪಟ್ಟಣವು ಹಿಡಿಯಲ್ಪಡುವದು; ಮನೆಗಳು ಸುಲು ಕೊಳ್ಳಲ್ಪಡುವವು, ಹೆಂಗಸರು ಕೆಡಿಸಲ್ಪಡುವರು, ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು; ಆದರೆ ಉಳಿದ ಜನರೆಲ್ಲರು ಪಟ್ಟಣದೊಳಗಿಂದ ತೆಗೆದುಬಿಡಲ್ಪಡುವದಿಲ್ಲ. 3 ಆಗ ಕರ್ತನು ಹೊರಟು ಯುದ್ಧದ ದಿನದಲ್ಲಿ ಕಾದಾಟಮಾಡಿದ ಪ್ರಕಾರವೇ ಆ ಜನಾಂಗಗಳ ಸಂಗಡ ಆತನು ಕಾದಾಟ ಮಾಡುವನು. 4 ಆ ದಿನದಲ್ಲಿ ಆತನ ಪಾದಗಳು ಯೆರೂಸಲೇಮಿನ ಮುಂದೆ ಪೂರ್ವ ದಿಕ್ಕಿನಲ್ಲಿರುವ ಎಣ್ಣೇ ಮರದ ಗುಡ್ಡದ ಮೇಲೆ ನಿಲ್ಲುವವು; ಎಣ್ಣೇ ಮರದ ಗುಡ್ಡವು ಅದರ ನಡುವೆಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಸೀಳಿ ಬಹುದೊಡ್ಡ ತಗ್ಗಾಗುವದು; ಅರ್ಧ ಗುಡ್ಡವು ಉತ್ತರಕ್ಕೂ ಅರ್ಧ ದಕ್ಷಿಣಕ್ಕೂ ಸರಿದು ಕೊಳ್ಳುವದು. 5 ನೀವು ಬೆಟ್ಟಗಳ ತಗ್ಗಿಗೆ ಓಡಿಹೋಗು ವಿರಿ; ಬೆಟ್ಟಗಳ ತಗ್ಗು ಆಚೆಲಿಗೆ ಮುಟ್ಟುವದು. ಹೌದು, ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿ ನೀವು ಭೂಕಂಪಕ್ಕೆ ಓಡಿಹೋದ ಹಾಗೆ ಓಡಿಹೋಗು ವಿರಿ; ನನ್ನ ದೇವರಾದ ಕರ್ತನು ತನ್ನ ಪರಿಶುದ್ಧರೆ ಲ್ಲರ ಸಂಗಡ ಬರುವನು. 6 ಆ ದಿನದಲ್ಲಿ ಆಗುವದೇ ನಂದರೆ--ಬೆಳಕು ಇಲ್ಲವೆ ಕತ್ತಲೆಯು ಸ್ಪಷ್ಟವಾಗಿರದು. 7 ಆದರೆ ಕರ್ತನಿಗೆ ತಿಳಿದಿರುವ ಒಂದು ದಿನ ಇರುವದು, ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ; ಆದರೆ ಸಾಯಂಕಾಲದ ಸಮಯದಲ್ಲಿ ಬೆಳಕು ಇರುವದು. 8 ಆ ದಿನದಲ್ಲಿ ಆಗುವದೇನಂದರೆ, ಯೆರೂಸಲೇಮಿ ನೊಳಗಿದ್ದ ಜೀವಜಲಗಳು ಹೊರಡುವವು; ಅವುಗ ಳಲ್ಲಿ ಅರ್ಧ ಪೂರ್ವ ಸಮುದ್ರಕ್ಕೆ ಅರ್ಧ ಪಶ್ಚಿಮ ಸಮುದ್ರಕ್ಕೆ ಹೋಗುವವು; ಅದು ಬೇಸಿಗೆ ಕಾಲ ದಲ್ಲಿಯೂ ಚಳಿಗಾಲದಲ್ಲಿಯೂ ಇರುವದು. 9 ಕರ್ತನು ಭೂಮಿಗೆಲ್ಲಾ ಅರಸನಾಗಿರುವನು; ಆ ದಿನದಲ್ಲಿ ಕರ್ತನು ಒಬ್ಬನೇ ಇರುವನು; ಆತನ ಹೆಸರು ಒಂದೇ. 10 ದೇಶವೆಲ್ಲಾ ಗೆಬ ಮೊದಲುಗೊಂಡು ಯೆರೂಸ ಲೇಮಿನ ದಕ್ಷಿಣದಲ್ಲಿರುವ ರಿಮ್ಮೋನಿನ ವರೆಗೂ ಬೈಲಿನ ಹಾಗೆ ಮಾರ್ಪಡುವದು; ಅದು ಎತ್ತಲ್ಪಟ್ಟು ತನ್ನ ಸ್ಥಳ ದಲ್ಲಿ ಬೆನ್ಯಾವಿಾನನ ಬಾಗಲು ಮೊದಲುಗೊಂಡು ಮೊದಲನೇ ಬಾಗಲಿನ ಸ್ಥಳದ ವರೆಗೂ ಮೂಲೆ ಬಾಗಲಿನ ವರೆಗೂ ಹನನೇಲನ ಗೋಪುರ ಮೊದಲು ಗೊಂಡು ಅರಸನ ದ್ರಾಕ್ಷೇ ಅಲೆಗಳ ವರೆಗೂ ನಿವಾಸ ವಾಗುವದು. 11 ಅದರಲ್ಲಿ ಜನರು ವಾಸವಾಗಿರುವರು; ಅಲ್ಲಿ ಇನ್ನು ಮೇಲೆ ಸಂಪೂರ್ಣವಾದ ನಾಶವಿರದು; ಆದರೆ ಯೆರೂಸಲೇಮು ಭದ್ರವಾಗಿ ವಾಸಿಸುವದು. 12 ಯೆರೂಸಲೇಮಿಗೆ ವಿರೋಧವಾಗಿ ದಂಡುಕಟ್ಟಿ ಕೊಂಡಿರುವ ಎಲ್ಲಾ ಜನಗಳನ್ನು ಕರ್ತನು ವ್ಯಾಧಿ ಯಿಂದ ಬಾಧಿಸುವನು; ಹೀಗೆಯೇ ಅವರು ಕಾಲಿನ ಮೇಲೆ ನಿಲ್ಲುವಾಗ ಅವರ ಶರೀರವು ಕ್ಷಯಿಸಿಹೋಗು ವದು; ಅವರ ಕಣ್ಣುಗಳು ಗುಣಿಗಳಲ್ಲಿ ಇಂಗಿಹೋಗು ವವು; ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವದು. 13 ಆ ದಿನದಲ್ಲಿ ಆಗುವದೇನಂದರೆ --ಕರ್ತನಿಂದಾದ ದೊಡ್ಡ ಕೋಲಾಹಲ ಅವರಲ್ಲಿ ಇರುವದು; ಆಗ ಒಬ್ಬೊಬ್ಬನು ತನ್ನ ತನ್ನ ನೆರೆಯವನ ಕೈಯನ್ನು ಹಿಡಿಯುವನು ಮತ್ತು ಅವನ ಕೈ ತನ್ನ ನೆರೆಯವನ ಮೇಲೆ ಎತ್ತಲ್ಪಡುವದು. 14 ಯೆಹೂದವು ಸಹ ಯೆರೂಸಲೇಮಿನಲ್ಲಿ ಯುದ್ಧ ಮಾಡುವದು; ಸುತ್ತಲಿರುವ ಎಲ್ಲಾ ಅನ್ಯ ಜನಾಂಗಗಳ ಸಂಪತ್ತಾಗಿ ರುವ, ಚಿನ್ನ, ಬೆಳ್ಳಿ, ವಸ್ತ್ರಗಳು ಬಹು ಹೇರಳವಾಗಿ ಕೂಡಿಸಲ್ಪಡುವವು. 15 ಆ ಗುಡಾರಗಳಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳ ಬಾಧೆಯು ಈ ಬಾಧೆಯ ಹಾಗೆಯೇ ಇರುವದು. 16 ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು. 17 ಆಗುವದೇನಂದರೆ, ಭೂಮಿಯ ಗೋತ್ರಗಳಲ್ಲಿ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೆ ಯೆರೂಸಲೇಮಿಗೆ ಹೋಗದೆ ಇರುವವರ್ಯಾರೋ ಅವರ ಮೇಲೆ ಮಳೆ ಇಲ್ಲದೆ ಇರುವದು. 18 ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು. 19 ಇದೇ ಐಗುಪ್ತದ ದಂಡನೆಯೂ ಗುಡಾರಗಳ ಹಬ್ಬ ವನ್ನು ಆಚರಿಸುವದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವದು. 20 ಆ ದಿನದಲ್ಲಿ ಕುದುರೆಗಳ ಗೆಜ್ಜೆಗಳ ಮೇಲೆ ಕರ್ತನಿಗೆ ಪರಿಶುದ್ಧವು ಎಂದಿರುವದು; ಕರ್ತನ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವವು.
21 ಹೌದು, ಯೆರೂಸಲೇಮಿ ನಲ್ಲಿಯೂ ಯೆಹೂದದಲ್ಲಿಯೂ ಇರುವ ಪ್ರತಿ ಯೊಂದು ಪಾತ್ರೆಯು ಸೈನ್ಯಗಳ ಕರ್ತನಿಗೆ ಪರಿಶುದ್ಧ ವಾಗಿರುವವು; ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳಲ್ಲಿ ತಕ್ಕೊಂಡು ಬೇಯಿಸುವರು; ಆ ದಿನದಲ್ಲಿ ಕಾನಾನ್ಯನು ಸೈನ್ಯಗಳ ಕರ್ತನ ಆಲಯದಲ್ಲಿ ಇನ್ನು ಮೇಲೆ ಇರುವದೇ ಇಲ್ಲ.